ಫೋನೂ ಇಲ್ಲ, ಮೆಸೇಜ್​ ಇಲ್ಲ! ಎಲ್ಲಿರುವೆ? ಸಿಡಿ ಯುವತಿಯ ಬೆನ್ನು ಹತ್ತಿದ ಎಸ್​ಐಟಿ ಹೈರಾಣ.. ನೋಟಿಸ್ ಮೇಲೆ ನೋಟಿಸ್!

ಯುವತಿ ಸೇರಿದಂತೆ ಪ್ರಕರಣದ ಸಂಬಂಧ ನಾಪತ್ತೆ ಆಗಿರುವ ಇನ್ನೂ ಮೂವರಿಗೂ ನೋಟಿಸ್ ನೀಡಲಾಗಿದೆ. ಸಿಡಿಯಲ್ಲಿದ್ದ ಯುವತಿ ಅಲ್ಲದೆ ಕಿಂಗ್​ ಪಿನ್​ ಎನ್ನಲಾದ ಮಾಜಿ ಪತ್ರಕರ್ತ ನರೇಶ್ ಮತ್ತು ಶ್ರವಣ್​ಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದಲೂ ಉತ್ತರ ಇಲ್ಲವಾಗಿದೆ.

ಫೋನೂ ಇಲ್ಲ, ಮೆಸೇಜ್​ ಇಲ್ಲ! ಎಲ್ಲಿರುವೆ? ಸಿಡಿ ಯುವತಿಯ ಬೆನ್ನು ಹತ್ತಿದ ಎಸ್​ಐಟಿ ಹೈರಾಣ.. ನೋಟಿಸ್ ಮೇಲೆ ನೋಟಿಸ್!
ಸಿಡಿಯಲ್ಲಿರುವ ಸಂತ್ರಸ್ತ ಯುವತಿ
ಸಾಧು ಶ್ರೀನಾಥ್​ Edited By:

Updated on: Mar 19, 2021 | 11:32 AM

ಬೆಂಗಳೂರು: ಫೋನೂ ಇಲ್ಲ; ಮೆಸೇಜ್​ ಇಲ್ಲ! ಎಲ್ಲಿರುವೆ? ಎಂಬಂತಾಗಿದೆ ರಾಜ್ಯ ಪೊಲೀಸರ ಅಸಹಾಯಕತೆ. ಏಕೆಂದರೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಮಾಜಿ ಸಚಿವರೊಬ್ಬರ ಲೈಂಗಿಕ ಸಿಡಿ ಪ್ರಕರಣದಲ್ಲಿ ಪ್ರಧಾನ ಪಾತ್ರಧಾರಿ ಎನ್ನಲಾಗಿರುವ ಯುವತಿಯ ಬೆನ್ನು ಹತ್ತಿದ ಎಸ್​ಐಟಿ ಹೈರಾಣಗೊಂಡಿದೆ.. ನೋಟಿಸ್ ಮೇಲೆ ನೋಟಿಸ್ ನೀಡುತ್ತಲೇ ಆ ಕಡೆಯಿಂದ ಮಾತ್ರ ಫೋನೂ ಇಲ್ಲ; ಮೆಸೇಜ್​ ಇಲ್ಲ- ಈ ಮೈಲ್​ ಸಹ ಇಲ್ಲ! ಹಾಗಾಗಿ ಎಸ್​ಐಟಿ ಪೊಲೀಸರು ಎಲ್ಲಿರುವೆ? ಎಂದು ಕುಂತ್ರೂ ನಿಂತ್ರೂ ಆ ಯುವತಿಯನ್ನೇ ಧ್ಯಾನಿಸುತ್ತಿದ್ದಾರೆ.

ಹೌದು ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಡಿಯಲ್ಲಿದ್ದ ಯುವತಿಗೆ ಎಸ್​ಐಟಿ ಪೊಲೀಸರು ಮತ್ತೊಂದು ನೋಟಿಸ್​ ಜಾರಿ ಮಾಡಿದ್ದಾರೆ. ಬಹುಶಃ ಈಗಾಗಲೇ ಮೂರ್ನಾಲ್ಕು ಬಾರಿ ನೋಟಿಸ್ ಜಾರಿ ಮಾಡಿರಬಹುದು. ಶೀಘ್ರವಾಗಿ ಪೊಲೀಸರ ಮುಂದೆ ಹಾಜರಾಗಲು ಯುವತಿಯ ವಾಟ್ಸಾಪ್​, ಇ-ಮೇಲ್, ಮನೆಗೆ ನೋಟಿಸ್ ಅಂಟಿಸಿ ಸರಕಾರಿ ಸೂಚನೆ ನೀಡಲಾಗಿದೆ. ಆದರೆ ಆ ಕಡೆಯಿಂದ ಬಿಲ್ಕುಲ್ ಪ್ರತಿಕ್ರಿಯೆ ಇಲ್ಲವಾಗಿದೆ.

ಯುವತಿ ಸೇರಿದಂತೆ ಪ್ರಕರಣದ ಸಂಬಂಧ ನಾಪತ್ತೆ ಆಗಿರುವ ಇನ್ನೂ ಮೂವರಿಗೂ ನೋಟಿಸ್ ನೀಡಲಾಗಿದೆ. ಸಿಡಿಯಲ್ಲಿದ್ದ ಯುವತಿ ಅಲ್ಲದೆ ಕಿಂಗ್​ ಪಿನ್​ ಎನ್ನಲಾದ ಮಾಜಿ ಪತ್ರಕರ್ತ ನರೇಶ್ ಮತ್ತು ಶ್ರವಣ್​ಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದಲೂ ಉತ್ತರ ಇಲ್ಲವಾಗಿದೆ.

ಇದನ್ನೂ ಓದಿ:
ಮಾಡಬಾರದ ಕೆಲಸ ಮಾಡಿದ್ದು ರಮೇಶ್ ಜಾರಕಿಹೊಳಿ, ನನ್ನದು ಎಳ್ಳಷ್ಟೂ ಪಾತ್ರವಿಲ್ಲ; ತನಿಖಾಧಿಕಾರಿಗಳ ಮುಂದೆಯೂ ಇದನ್ನೇ ಹೇಳುವೆ- ವಿಡಿಯೋದಲ್ಲಿ ನರೇಶ್ 

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮೊದಲ ದಿನದ 5 ಕೋಟಿ ಹೇಳಿಕೆ ನೆನಪಿಸಿಕೊಂಡ ಎಚ್​.ಡಿ.ಕುಮಾರಸ್ವಾಮಿ

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us