ಸಂತ್ರಸ್ಥ ಯುವತಿ ಯಾವುದೇ ಹೇಳಿಕೆಯನ್ನು ಬದಲಿಸಿಲ್ಲ, ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧ: ವಕೀಲ ಸೂರ್ಯ ಮುಕುಂದರಾಜ್
Advocate Surya Mukundaraj: ಸಿಡಿ ಯುವತಿ ಪರ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಮಂಜುನಾಥ್ ಅವರು ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಂತ್ರಸ್ಥ ಯುವತಿ ಅಂತಹ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಪ್ರಕರಣದಲ್ಲಿ ಆಕೆ ಮ್ಯಾಜಿಸ್ಟ್ರೇಟ್ ಎದುರು ಈ ಹಿಂದೆ ತಾನು ನೀಡಿದ್ದ ಹೇಳಿಕೆಗೆ ಬದ್ಧಳಾಗಿದ್ದಾಳೆ ಎಂದು ಹೇಳಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಿಂಗ್ ಪಿನ್ಗಳಾದ ನರೇಶ್ ಗೌಡ ಮತ್ತು ಶ್ರವಣ್ ಅವರು ತನ್ನನ್ನು ಹನಿಟ್ರ್ಯಾಪ್ ಆಗಿ ಬಳಸಿಕೊಂಡಿದ್ದಾರೆ ಎಂದು ಸಿಡಿ ಸಂತ್ರಸ್ಥೆಯು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಎದುರು ಇಂದು ಹಾಜರಾಗಿ ಸ್ಫೋಟಕ ಹೇಳಿದ್ದಳು ಎಂದು ವರದಿಯಾಗಿತ್ತು. ಆದರೆ ಸಿಡಿ ಯುವತಿ ವಕೀಲರಾದ ಸೂರ್ಯ ಮುಕುಂದರಾಜ್, ಜಗದೀಶ್ ಮತ್ತು ಮಂಜುನಾಥ್ ಅವರು ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಂತ್ರಸ್ಥ ಯುವತಿ ಅಂತಹ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಪ್ರಕರಣದಲ್ಲಿ ಆಕೆ ಮ್ಯಾಜಿಸ್ಟ್ರೇಟ್ ಎದುರು ಈ ಹಿಂದೆ ತಾನು ನೀಡಿದ್ದ ಹೇಳಿಕೆಗೆ ಬದ್ಧಳಾಗಿದ್ದಾಳೆ ಎಂದು ಹೇಳಿದ್ದಾರೆ.
ಇನ್ನು ಕೆಲವೇ ಹೊತ್ತಿನಲ್ಲಿ ಯುವತಿ ಕಡೆಯಿಂದ ಸ್ಪಷ್ಟನೆ ಸಿಗುತ್ತದಾ?
ಸಂತ್ರಸ್ಥ ಯುವತಿ ಇಂದು ಎಸ್ಐಟಿ ಎದುರು ಹಾಜರಾಗಿ ವಾಟ್ಸಪ್ ಚಾಟಿಂಗ್ ಮಾಹಿತಿ ನೀಡಬೇಕಿತ್ತು. ಹೀಗಾಗಿ ಆಡುಗೋಡಿ ಎಸ್ಐಟಿ ಕಚೇರಿಗೆ ತೆರಳಿದ್ದಳು. ಆ ಸಂದರ್ಭದಲ್ಲಿ ಯಾವುದೇ ರೀತಿಯ ವ್ಯತಿರಿಕ್ತ ಹೇಳಿಕೆಯನ್ನು ನೀಡಿಲ್ಲ. ಉಲ್ಟಾ ಹೊಡೆದಿಲ್ಲಾ. ಖುದ್ದಾಗಿ ಆಕೆಯನ್ನು ಮಾತನಾಡಿಸಿಕೊಂಡು ಬಂದಿರುವುದಾಗಿ ಸಿಡಿ ಲೇಡಿ ಪರ ವಕೀಲರು ಮಾಹಿತಿ ನೀಡಿದ್ದಾರೆ.
ಇದೆಲ್ಲ ಹೈಡ್ರಾಮ. ಸಂತ್ರಸ್ಥ ಯುವತಿ ಉಲ್ಟಾ ಹೇಳಿಕೆ ನೀಡಿಲ್ಲ.ಅದೆಲ್ಲಾ ಊಹಾಪೋಹ. ಎಸ್ಐಟಿ ಅಧಿಕಾರಿಗಳೇ ಇಂತಹ ಮಾಹಿತಿಯನ್ನು ಸೋರಿಕೆ ಮಾಡಿರಬಹುದು ಎಂದು ಯುವತಿ ಪರ ವಕೀಲರು ಹೇಳಿದ್ದು, ಕೆಲವೇ ಹೊತ್ತಿನಲ್ಲಿ ಯುವತಿಯ ಕಡೆಯಿಂದ ಈ ಬಗ್ಗೆ ಖಚಿತ ಮಾಹಿತಿ ಒದಗಿಸಲಾಗುವುದು. ಜನಕ್ಕೆ ಸ್ಪಷ್ಟ ಚಿತ್ರಣ ನೀಡಲಾಗುವುದು. ಇಂತಹ ಸುದ್ದಿಗಳಿಗೆ ಮಹತ್ವ ಕೊಡಬೇಕಾದ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿಯೂ ಆದ ವಕೀಲ ಸೂರ್ಯ ಮುಕುಂದರಾಜ್ ತಿಳಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ ಈ ಮಧ್ಯೆ, ಎಸ್ಐಟಿ ತನಿಖಾಧಿಕಾರಿಗಳು ಯುವತಿಯ ಇಚ್ಛೆಯಂತೆ ಆಕೆಯ ಬದಲಾದ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಲು ನ್ಯಾಯಾಧೀಶರ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದಬಂದಿದೆ. ಅದರಂತೆ ಜಡ್ಜ್ ಸಮಯ ನೋಡಿಕೊಂಡು ಯುವತಿಯನ್ನು ಹಾಜರುಪಡಿಸಿ, ಹೇಳಿಕೆ ದಾಖಲಿಸುವ ಪ್ರಯತ್ನ ನಡೆದಿದೆ.
Published On - 2:31 pm, Mon, 12 April 21