AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯ: ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

ದುಡ್ಡು ಕೊಟ್ಟರೆ ಜೈಲಲ್ಲಿ ಏನು ಬೇಕಾದರೂ ಸಿಗುತ್ತೆ ಎಂಬ ಆರೋಪಗಳಿಗೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಗಳಿಗೆ ಫೈವ್​ ಸ್ಟಾರ್​ ಹೋಟೆಲ್​ ರೀತಿ ಸೌಲಭ್ಯ ನೀಡಿರುವ ಫೋಟೋಗಳು ವೈರಲ್​ ಆಗಿದ್ದು, ಜೈಲಿನಲ್ಲಿನ ಕೈದಿಗಳ ಬಿಂದಾಸ್​ ಜೀವನ ಹೇಗಿದೆ ಎಂಬುದು ಅನಾವರಣಗೊಂಡಿದೆ.

ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯ: ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?
ಪರಪ್ಪನ ಅಗ್ರಹಾರ ಜೈಲು
ರಾಮು, ಆನೇಕಲ್​
| Updated By: ಪ್ರಸನ್ನ ಹೆಗಡೆ|

Updated on:Oct 09, 2025 | 3:04 PM

Share

ಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ ಟೀಕೆಗೆ ಗ್ರಾಸವಾಗಿತ್ತು. ಕೈದಿಗಳಿಗೆ ಜೈಲಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದವು. ಈ ವಿಷಯ ಮಾಸುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ದುಡ್ಡು ಕೊಟ್ಟರೆ ಜೈಲಿನಲ್ಲಿ ಏನು ಬೇಕಾದರೂ ಸಿಗುತ್ತೆ ಎಂಬ ವಿಚಾರಕ್ಕೆ ಮತ್ತಷ್ಟು ಸಾಕ್ಷಿಗಳು ಸಿಕ್ಕಿದ್ದು, ಫೈವ್​ ಸ್ಟಾರ್ ಹೋಟೆಲ್ ರೀತಿ ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯದ ನೀಡಿರುವ ಫೋಟೋಗಳು ವೈರಲ್​ ಆಗಿವೆ.

ಗುಬ್ಬಚ್ಚಿ ಸೀನಾ ಮತ್ತು ಆತನ ಸಹಚರರಿಗೆ ಜೈಲಲ್ಲಿ ಹೈಫೈ ವ್ಯವಸ್ಥೆ ನೀಡಲಾಗಿದೆ. ವಿಚಾರಣಾಧೀನ ಕೈದಿಗಳಿಗೆ LED ಟಿವಿ ಸೌಲಭ್ಯದ ಜೊತೆಗೆ ಅಡುಗೆ ಮಾಡಿಕೊಳ್ಳಲು ಒಲೆ, ಪಾತ್ರೆ, ಅಡುಗೆ ಪದಾರ್ಥಗಳೂ ಸಿಗುತ್ತಿವೆ. ಮೊಟ್ಟೆ , ಚಿಕನ್ ಐಟಂಗಳು, ಮೊಬೈಲ್, ಚಾರ್ಜರ್, ಪಾರ್ಟಿ ಮಾಡಲು ಸೌಂಡ್​ ಬಾಕ್ಸ್​ ಸೇರಿ ಐಶಾರಾಮಿ ವ್ಯವಸ್ಥೆ ಇದೆ. ಹಣದಾಸೆಗೆ ಕೈದಿಗಳ ಜೊತೆ ಜೈಲಾಧಿಕಾರಿಗಳು ಮತ್ತು ಸಿಬ್ಬಂದಿಗಳು ಶಾಮೀಲಾಗಿದ್ದು, ಜೈಲಲ್ಲಿ ಕೈದಿಗಳು ಬಿಂದಾಸ್​ ಆಗಿ ದಿನ ಕಳೆಯುತ್ತಿದ್ದಾರೆ. ಏಸು ಕ್ರಿಸ್ತನ ಚಿತ್ರದ ಮುಂದೆ ನಿಂತು ಗುಬ್ಬಚ್ಚಿ ಸೀನಾ ಮತ್ತು ಗ್ಯಾಂಗ್ ಗ್ರೂಪ್ ಫೋಟೋಶೂಟ್​ ನಡೆಸಿದ್ದು, ಪಾರಿವಾಳ ಹಿಡಿದು ಕ್ಯಾಮರಾಗೆ ವಿಚಾರಣಾಧೀನ ಕೈದಿಗಳು ಪೋಸ್​ ಕೊಟ್ಟಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಗುಬ್ಬಚ್ಚಿ ಸೀನಾನ ಸಹಚರ, ಕೊಲೆ ಆರೋಪಿ ಅರವಿಂದ್ ಹಂಚಿಕೊಂಡಿದ್ದ ಈ ಫೋಟೋಗಳು ನೋಡುಗರಿಗೆ ಶಾಕ್​ ಉಂಟುಮಾಡಿದೆ. ಜೈಲಲ್ಲಿ ಕೈದಿಗಳು ಹೀಗೆಲ್ಲ ಇರಬಹುದಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಜೈಲಲ್ಲಿ ಏನೆಲ್ಲಾ ಸೌಲಭ್ಯ?

ಜೈಲಲ್ಲಿ ರೌಡಿಶೀಟರ್ ಗುಬ್ಬಚ್ಚಿ ಸೀನಾ​​ ಬರ್ತಡೇ ಸೆಲೆಬ್ರೇಷನ್ ಪ್ರಕರಣ ಸಂಬಂಧ ಇಬ್ಬರು ಜೈಲು ಅಧಿಕಾರಿಗಳ ಅಮಾನತು ಮಾಡಿ ಕಾರಾಗೃಹ ಎಡಿಜಿಪಿ ಬಿ.ದಯಾನಂದ್​ ನಿನ್ನೆಯಷ್ಟೇ ಆದೇಶಿಸಿದ್ದರು. ಜೈಲಿನಲ್ಲಿರುವ ಕೊಲೆ ಆರೋಪಿ ತನ್ನ ಸಹಚರರ ಜೊತೆ ಸೆ.9ರಂದು ಬರ್ತ್​ ಡೇ ಆಚರಿಸಿಕೊಂಡಿದ್ದ ಫೋಟೋ, ವಿಡಿಯೋಗಳು ವೈರಲ್​ ಆಗಿತ್ತು. ಮೇಲ್ನೋಟಕ್ಕೆ ಅಧಿಕಾರಿಗಳ ತಪ್ಪು ಕಂಡುಬಂದ ಹಿನ್ನೆಲೆ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:57 pm, Thu, 9 October 25