AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರ ಚಿತ್ತ ಚಿತ್ತಾಪುರದತ್ತ: RSS​ ಪಥಸಂಚಲನಕ್ಕೆ ಎದುರಾಯ್ತು ಮತ್ತೊಂದು ಕಂಟಕ

ಸರ್ಕಾರಿ ಜಾಗಗಳಲ್ಲಿನ ಚಟುವಟಿಕೆಗೆ ಅನುಮತಿ ಕಡ್ಡಾಯ ಮಾಡಿರುವ ಆದೇಶ ಇನ್ನೂ ಸದ್ದು ಮಾಡುತ್ತಿದೆ. ಈ ಚರ್ಚೆ ಅದೆಲ್ಲೆಲ್ಲಿಗೋ ಹೋಗಿ ಮುಟ್ಟುತ್ತಿದೆ. ನಾಯಕರ ನಡುವೆ ಕದನವೇ ಏರ್ಪಟ್ಟಿದ್ರೆ, ಕಲಬುರಗಿಯ ಚಿತ್ತಾಪುರ ಬೂದಿ ಮುಚ್ಚಿದ ಕೆಂಡದಂತೆ ಕಾಣುತ್ತಿದೆ. ಯಾಕಂದ್ರೆ ಚಿತ್ತಾಪುರದಲ್ಲಿ ದಲಿತ ಸಂಘಟನೆಗಳು ವರ್ಸಸ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಬೆಳವಣಿಗೆ ಸೃಷ್ಟಿಯಾಗಿದೆ.

ಎಲ್ಲರ ಚಿತ್ತ ಚಿತ್ತಾಪುರದತ್ತ: RSS​ ಪಥಸಂಚಲನಕ್ಕೆ ಎದುರಾಯ್ತು ಮತ್ತೊಂದು ಕಂಟಕ
ಪ್ರಾತಿನಿಧಿಕ ಚಿತ್ರ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ರಮೇಶ್ ಬಿ. ಜವಳಗೇರಾ|

Updated on: Oct 21, 2025 | 10:07 PM

Share

ಕಲಬುರಗಿರಿ, (ಅಕ್ಟೋಬರ್ 21): ಜಿಲ್ಲೆಯ ಚಿತ್ತಾಪುರ  (Chittapur)ಸಚಿವ ಪ್ರಿಯಾಂಕ್ ಖರ್ಗೆಯವರ (Priyank Kharge) ಸ್ವಕ್ಷೇತ್ರ. ಆರ್​ ಎಸ್​ಎಸ್​(RSS)ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಣೆದ ಬಲೆ, ಇದೇ ಚಿತ್ತಾಪುರದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಬೇಕಾ ಬೇಡ್ವಾ ಎನ್ನುವ ನಿರ್ಧಾರ ಹೈಕೋರ್ಟ್ ಅಂಗಳದಲ್ಲಿದೆ. ಈ ಮಧ್ಯೆ ಕೋರ್ಟ್ ಸೂಚನೆಯಂತೆ RSS ಅನುಮತಿಗಾಗಿ ಅರ್ಜಿ ಸಲ್ಲಿದೆ. ಮತ್ತೊಂದೆಡೆ ದಲಿತ ಪರ ಸಂಘಟನೆಗಳು ಸಹ ಅಂದೆ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ಕೋರಿವೆ. ಹೀಗಾಗಿ ಚಿತ್ತಾಪುರದಲ್ಲಿ ಪಥಸಂಚಲನ ಸಂಘರ್ಷ ಶುರುವಾಗಿದೆ.

ಕಲಬುರಗಿ ಹೈಕೋರ್ಟ್ ಪೀಠದ ಸೂಚನೆ ಮೇರೆಗೆ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದೆ. ಮೊನ್ನೆ ಡಿಸಿ ಸಿಗದ ಕಾರಣಕ್ಕೆ ಇಮೇಲ್ ಹಾಗೂ ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಕೆಯಾಗಿತ್ತು. ಇಂದು (ಅಕ್ಟೋಬರ್ 21) ಖುದ್ದು ಡಿಸಿ ಕಚೇರಿ ತೆರಳಿ, ನವೆಂಬರ್ 2ಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡಿದ್ದು, ಸದ್ಯ ಜಿಲ್ಲಾಡಳಿತದ ಮುಂದಿನ ಆದೇಶಕ್ಕಾಗಿ RSS ಎದುರು ನೋಡುತ್ತಿದೆ. ಇನ್ನೊಂದೆಡೆ ಅಂದೇ ದಲಿತ ಸಂಘಟನೆಗಳು ಪಥಸಂಚಲನಕ್ಕೆ ಮನವಿ ಪತ್ರ ನೀಡಿದ್ದು, ತಮಗೆ ಅವಕಾಶ ಸಿಗುತ್ತೋ ಇಲ್ವೋ ಎನ್ನುವ ಆತಂಕದಲ್ಲಿ ಆರ್​​ಎಸ್​ಎಸ್​ ಮುಖಂಡರು ಇದ್ದಾರೆ.

ಇದನ್ನೂ ಓದಿ: ಚಿತ್ತಾಪುರದಲ್ಲಿ ಆರ್​​ಎಸ್​​ಎಸ್​​ ಪಥಸಂಚಲನ ಜಟಾಪಟಿ: ಮಹತ್ವದ ಸೂಚನೆ ನೀಡಿದ ಹೈಕೋರ್ಟ್

ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರದಲ್ಲಿ RSS ಭಾನುವಾರ ಬೃಹತ್‌ ಪಥಸಂಚಲನ ಮೂಲಕ, ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿತ್ತು. ಆದ್ರೆ ತಹಶೀಲ್ದಾರ್ RSS ಪಥಸಂಚಲನಕ್ಕೆ ಬ್ರೇಕ್ ಹಾಕಿದ್ರು. ರಾತ್ರೋರಾತ್ರಿ ನಗರದಲ್ಲಿ ಹಾಕಿದ್ದ ಕೇಸರಿ ಧ್ವಜ, ಭಗವಾಧ್ವಜ, ಬ್ಯಾನರ್‌, ಬಂಟಿಂಗ್ಸ್​ಗಳನ್ನ ಪುರಸಭೆಯ ಸಿಬ್ಬಂದಿ ತೆರವು ಮಾಡಿದ್ರು. ಆ ಬಳಿಕ RSS ಹೈಕೋರ್ಟ್ ಮೆಟ್ಟಿಲೇರಿತ್ತು. ಮತ್ತೊಮ್ಮೆ ಪಥಸಂಚಲನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಇದೀಗ ಕೋರ್ಟ್ ಸೂಚನೆಯಂತೆ RSS 2ನೇ ಬಾರಿ ಮನವಿ ಪತ್ರ ನೀಡಿದೆ.

RSS ಪಂಥಸಂಚಲನಕ್ಕೆ ಭೀಮ್ ಆರ್ಮಿ ಕೌಂಟರ್

ಇನ್ನು ಇದಕ್ಕೆ ಕೌಂಟರ್ ಆಗಿ ಪಥಸಂಚಲನ ನಡೆಸುವುದಕ್ಕೆ ಭೀಮ್ ಆರ್ಮಿ ಸಂಘಟನೆ ಸಜ್ಜಾಗಿದೆ. ನವೆಂಬರ್​ 2 ರಂದೇ ಚಿತ್ತಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಭೀಮ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದೆ. ನಾವೂ ಲಾಠಿ ಹಿಡಿದು ಜಾಥಾ ಮಾಡುತ್ತೇವೆ. ನಮ್ಗೂ ಅವಕಾಶ ಕೊಡಿ ಎಂದು ಭೀಮ್ ಆರ್ಮಿ ಭಾರತ ಏಕ್ತಾ ಮಿಷನ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಟಾಕ್ ಫೈಟ್

RSS ಚಟುವಟಿಕೆಗಳಿಗೆ ಕಡಿವಾಣ ಹಾಕ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ನಿಗಿನಿಗಿ ಅಂತಿದ್ದಾರೆ. RSSಗೆ ಇಂತಹ ನೂರಾರು ಖರ್ಗೆಗಳನ್ನ ಎದುರಿಸುವ ಶಕ್ತಿ ಇದೆ ಅಂತಾ ವಿಪಕ್ಷ ನಾಯಕ ಆರ್.ಅಶೋಕ್ ಗುಡುಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಲು ಯತ್ನಿಸ್ತಿದ್ದಾರೆ ಎಂದು ಜರಿದಿದ್ದಾರೆ. ಮತ್ತೊಂದೆಡೆ ಸಿಎಂ-ಡಿಸಿಎಂ ಹಗಲಲ್ಲೇ ನಾಟಕ ಮಾಡ್ತಾರೆ ಎಂದು ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ಒಟ್ಟಿನಲ್ಲಿ ರಾಜಕೀಯ ಜಟಾಪಟಿಯ ನಡುವೆ ಎಲ್ಲರ ಕಣ್ಣು ಚಿತ್ತಾಪುರದತ್ತ ನೆಟ್ಟಿದೆ. ಸೆಪ್ಟೆಂಬರ್ 24ರಂದು ಹೈಕೋರ್ಟ್​ನಲ್ಲಿ ಈ ಬಗ್ಗೆ ವಿಚಾರಣೆ ನಡೆಯಲಿದ್ದು, ಅಂತಿಮವಾಗಿ ಕೋರ್ಟ್ ಏನು ಹೇಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ