ಪೋಷಕರಿಂದ 70 % ಮಾತ್ರವೇ ಶುಲ್ಕ ಪಡೆಯುತ್ತೇವೆ.. ಸರ್ಕಾರದ ನಿರ್ಧಾರ ಸ್ವಾಗತಿಸಿದ ರೂಪ್ಸಾ

ಸರ್ಕಾರದ ಆದೇಶದಂತೆ ಪೋಷಕರಿಂದ ನಾವು ಶೇ.70ರಷ್ಟು ಶುಲ್ಕ ಮಾತ್ರ ಪಡೆಯುತ್ತೇವೆ ಎಂದು ರೂಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದ್ದಾರೆ.

ಪೋಷಕರಿಂದ 70 % ಮಾತ್ರವೇ ಶುಲ್ಕ ಪಡೆಯುತ್ತೇವೆ.. ಸರ್ಕಾರದ ನಿರ್ಧಾರ ಸ್ವಾಗತಿಸಿದ ರೂಪ್ಸಾ
ಸಂಗ್ರಹ ಚಿತ್ರ

Updated on: Jan 29, 2021 | 6:03 PM

ಬೆಂಗಳೂರು: ಖಾಸಗಿ ಶಾಲೆಗಳು ಹಾಗೂ ಪೋಷಕರ ನಡುವೆ ಬಹಳ ದಿನದಿಂದ ನಡೆಯುತ್ತಿದ್ದ ಶಾಲಾ ಶುಲ್ಕ ಪಾವತಿಯ ವಿಚಾರದಲ್ಲಿನ ಜಟಾಪಟಿಯ ಬಗ್ಗೆ ಇಂದು ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ರೂಪ್ಸಾ ಒಪ್ಪಿಗೆ ಸೂಚಿಸಿದೆ.

ಈ ಬಾರಿ ಶಾಲೆಗಳು, 2019ರ ಬೋಧನಾ ಶುಲ್ಕದ ಶೇ. 70ರಷ್ಟು ಶುಲ್ಕವನ್ನು ಪಡೆಯಬೇಕು. ಶಾಲೆಗಳು ಯಾವುದೇ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ. ಟ್ರಸ್ಟ್​ಗಳ ಅಭಿವೃದ್ಧಿಗೆ ಹಣ ತೆಗೆದುಕೊಳ್ಳುವಂತಿಲ್ಲ. ರಾಜ್ಯದ ಎಲ್ಲ ಮಾದರಿ ಶಾಲೆಗಳಿಗೂ ಈ ಶುಲ್ಕ ಅನ್ವಯ ಎಂದು ಸುರೇಶ್ ಕುಮಾರ್ ಹೇಳಿಕೆ ನೀಡಿದ ಬೆನ್ನಲ್ಲೇ, ಶಿಕ್ಷಣ ಸಚಿವರ ಈ ತೀರ್ಮಾನವನ್ನು ರೂಪ್ಸಾ ಸ್ವಾಗತಿಸಿದೆ.

ಸರ್ಕಾರದ ಆದೇಶದಂತೆ ಪೋಷಕರಿಂದ ನಾವು ಶೇ.70ರಷ್ಟು ಶುಲ್ಕ ಮಾತ್ರ ಪಡೆಯುತ್ತೇವೆ ಎಂದು ರೂಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದ್ದಾರೆ. ಉಪನ್ಯಾಸಕರಿಗೆ ಸಂಬಳ ಕೊಡೋದು ಸ್ವಲ್ಪ ಕಷ್ಟವಾಗುತ್ತೆ. ಆದ್ರೂ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

2019ರ ಬೋಧನಾ ಶುಲ್ಕದ ಶೇ. 70ರಷ್ಟು ಹಣ ಪಡೆಯಬೇಕು. ಯಾವುದೇ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ: ರಾಜ್ಯ ಸರ್ಕಾರದ ಕಟ್ಟಾಜ್ಞೆ

Published On - 6:02 pm, Fri, 29 January 21

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us