Ranya Rao Gold Smuggling: ರನ್ಯಾ ರಾವ್​​ ಜಾಮೀನು ಅರ್ಜಿ ವಜಾ, ಚಿನ್ನದ ರಾಣಿಗೆ ಜೈಲೇ ಗತಿ

| Updated By: ರಮೇಶ್ ಬಿ. ಜವಳಗೇರಾ

Updated on: Mar 14, 2025 | 6:09 PM

ಸ್ಯಾಂಡಲ್​ವುಡ್​ ನಟಿ ರನ್ಯಾ ರಾವ್​ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನವಾಗಿದ್ದು, ಈ ಪ್ರಕರಣದಲ್ಲಿ ಈಗಾಗಲೇ ದಿನ ಡಿಆರ್​ಐ, ಸಿಬಿಐ ತನಿಖೆ ನಡೆಸುತ್ತಿವೆ. ಇದರ ಮಧ್ಯ ಇದೀಗ ಇಡಿ ಸಹ ಈ ಪ್ರಕರಣದಲ್ಲಿ ಪ್ರವೇಶ ಮಾಡಿದ್ದು ನಿನ್ನೆ(ಮಾರ್ಚ್ 13) ರನ್ಯಾ ರಾವ್ ಫ್ಲ್ಯಾಟ್​​ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಮತ್ತೊಂದೆಡೆ ರನ್ಯಾ ರಾವ್​ ಜಾಮೀನು ಅರ್ಜಿ ಸಹ ತಿರಸ್ಕೃತವಾಗಿದೆ.

Ranya Rao Gold Smuggling: ರನ್ಯಾ ರಾವ್​​ ಜಾಮೀನು ಅರ್ಜಿ ವಜಾ, ಚಿನ್ನದ ರಾಣಿಗೆ ಜೈಲೇ ಗತಿ
ರನ್ಯಾ ರಾವ್
Follow us on

ಬೆಂಗಳೂರು, (ಮಾರ್ಚ್ 14): ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನವಾಗಿರುವ ಸ್ಯಾಂಡಲ್​ವುಡ್​ ನಟಿ ರನ್ಯಾ ರಾವ್ (Ranya Rao) ಜಾಮೀನು ಅರ್ಜಿ ವಜಾಗೊಂಡಿದೆ. ಆರ್ಥಿಕ ಅಪರಾಧಗಳ ನ್ಯಾಯಾಲಯವು ರನ್ಯಾ ರಾವ್​ ಅವರ ಜಾಮೀನು ಅರ್ಜಿಯನ್ನು ತಿರಸ್ಕೃತ ಮಾಡಿ (ಮಾರ್ಚ್ 14) ಆದೇಶ ಹೊರಡಿಸಿದೆ. ದುಬೈನಿಂದ ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ನಟಿ ರನ್ಯಾ ರಾವ್ ಬೆಂಗಳೂರು ವಿಮಾನ ನಿಲ್ದಾಣ ಸಿಕ್ಕಿಬಿದ್ದಿದ್ದು,  ಡಿಆರ್​ಐ ಅಧಿಕಾರಿಗಳು ಬಂಧಿಸಿ ತನಿಖೆ ನಡೆಸಿದ್ದಾರೆ. ಮತ್ತೊಂದೆಡೆ  ನಟಿ ರನ್ಯಾ ರಾವ್​ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿ ಇಂದು ನಟಿ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಇದರಿಂದ ಚಿನ್ನದ ರಾಣಿಗೆ ಜೈಲೇ ಗತಿ.

ರನ್ಯಾ ರಾವ್​ ಪರವಾಗಿ ಹಿರಿಯ ವಕೀಲ ಕಿರಣ್ ಜವಳಿ ವಾದ ಮಂಡಿಸಿದರೆ, ಡಿಆರ್ಐ ಪರವಾಗಿ ಮಧು ರಾವ್ ವಾದ ಮಂಡಿಸಿದ್ದರು. ಆದ್ರೆ, ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿ, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಅದರಂತೆ ಕೋರ್ಟ್​ ರನ್ಯಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದು, ರನ್ಯಾ ಜೈಲಿನಲ್ಲೇ ಉಳಿಯಬೇಕಿದೆ. ಇನ್ನು ಜಾಮೀನಿಗಾಗಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.

ಇದನ್ನೂ ಓದಿ: ರನ್ಯಾ ರಾವ್ ಪ್ರಕರಣಕ್ಕೆ ಇಡಿ ಎಂಟ್ರಿ; ಹೊರ ಬಿತ್ತು ಹವಾಲಾ ದಂಧೆ

ಇಡಿಯಿಂದ ತನಿಖೆ ಚುರುಕು

ಇಷ್ಟು ದಿನ ರನ್ಯಾ ರಾವ್ ಕೇಸ್​ನಲ್ಲಿ ಸಿಬಿಐ ಅಧಿಕಾರಿಗಳು ಹಾಗೂ ಡಿಆರ್​ಐ ಅಧಿಕಾರಿಗಳು ಮಾತ್ರ ವಿಚಾರಣೆ ನಡೆಸುತ್ತಾ ಇದ್ದರು. ಈಗ ಕೇಸ್​ನಲ್ಲಿ ಇಡಿಯಿಂದ ಇಸಿಐಆರ್ ದಾಖಲಾಗಿದೆ. ಇಸಿಐಆರ್ ಎಂದರೆ ಎನ್​ಫೋರ್ಸ್​ಮೆಂಟ್ ಕೇಸ್ ಇನ್​ಫಾರ್ಮೇಷನ್ ರಿಪೋರ್ಟ್. ಅಕ್ರಮ ಹಣ ವರ್ಗಾವಣೆ ವಿಚಾರ ತಿಳಿದಿರುವುದರಿಂದ ಈ ಕೇಸ್ ದಾಖಲಾಗಿದೆ. ಇದರ ಬೆನ್ನಲ್ಲೇ ಇಡಿ ರನ್ಯಾ ರಾವ್​ ಹಾಗೂ ಎರಡನೇ ಆರೋಪಿ ತರುಣ್ ಕೊಂಡೂರು ರಾಜು ನಿವಾಸದ ಮೇಲೂ ದಾಳಿ ಮಾಡಿ ಮಹತ್ವದ ದಾಖಲೆ ಕಲೆಹಾಕಿದೆ.

ಇದನ್ನೂ ಓದಿ
ರನ್ಯಾ ಪ್ರಕರಣಕ್ಕೆ ಇಡಿ ಎಂಟ್ರಿ; ಹೊರ ಬಿತ್ತು ಹವಾಲಾ ದಂಧೆ
ನಟಿ ರನ್ಯಾ ರಾವ್​ ಕೇಸ್‌: ಸಿಐಡಿ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರ!
ಚಿನ್ನ ಕಳ್ಳ ಸಾಗಣೆ: ರನ್ಯಾ ಜತೆ ನಿರಂತರ ಸಂಪರ್ಕದಲ್ಲಿ ಇದ್ದ ಪ್ರಭಾವಿಗಳು
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!

ಇನ್ನು ಗೋಲ್ಡ್​ ಸ್ಮಗ್ಲಿಂಗ್ ವಿಚಾರದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರೋದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹಾವಾಲಾ ದಂಧೆ ಮೂಲಕ ಭಾರತದಿಂದ ಹಣ ದುಬೈಗೆ ಹೋಗುತ್ತಿತ್ತು. ಬಳಿಕ ಚಿನ್ನದ ಗಟ್ಟಿ ರೂಪದಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:50 pm, Fri, 14 March 25