TV9 Digital Live | ಸಮಸ್ಯೆಗಳಿರುವುದು ನಿಜ, ಆದರೆ ಮೀಸಲಾತಿಯೊಂದೇ ಪರಿಹಾರವಲ್ಲ: ನಾಗಮೋಹನ್ ದಾಸ್

’ಮೀಸಲಾತಿ ಯಾಕಿದೆ ಎಂಬುದನ್ನು ಎಲ್ಲರೂ ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕು. ಮೀಸಲಾತಿ ಬಡತನ ನಿವಾರಣೆಗಾಗಿ ಇರುವುದಲ್ಲ, ಜಾತಿ ವಿನಾಶ ಮಾಡಲು ಇರುವುದಲ್ಲ, ಸಮುದಾಯಗಳನ್ನು ಆರ್ಥಿಕವಾಗಿ ಸಬಲ ಮಾಡಲು ಇರುವುದಲ್ಲ‘.

TV9 Digital Live | ಸಮಸ್ಯೆಗಳಿರುವುದು ನಿಜ, ಆದರೆ ಮೀಸಲಾತಿಯೊಂದೇ ಪರಿಹಾರವಲ್ಲ: ನಾಗಮೋಹನ್ ದಾಸ್
ವಚನಾನಂದ ಗುರೂಜಿ, ನಿರೂಪಕ ಮಾಲ್ತೇಶ್ ಹಾಗೂ ನ್ಯಾ. ಹೆಚ್.ಎನ್. ನಾಗಮೋಹನ್ ದಾಸ್
Follow us
| Updated By: ganapathi bhat

Updated on:Apr 06, 2022 | 8:01 PM

ಬೆಂಗಳೂರು: ಕರ್ನಾಟಕದಲ್ಲಿ ಮೀಸಲಾತಿಯ ಚರ್ಚೆ ಜೋರಾಗುತ್ತಿದೆ. ಪರಿಶಿಷ್ಟ ಜಾತಿಯ ಜನ ತಮಗೆ ನೀಡಿರುವ ಶೇ 3ರ ಮೀಸಲಾತಿ ಪ್ರಮಾಣವನ್ನು ಶೇ 7 ಕ್ಕೆ ಏರಿಸಬೇಕು ಎಂದು ಕೇಳುತ್ತಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಬೇಕೆಂಬ ಹಂಬಲವನ್ನು ಕುರುಬರು ತೋರುತ್ತಿದ್ದಾರೆ. ಜೊತೆಗೆ, ಕುರುಬರು ಈಗ ಪಡೆಯುತ್ತಿರುವ ಹಿಂದುಳಿದ ವರ್ಗದ ಮೀಸಲಾತಿಯ ಲಾಭವನ್ನು ಪಡೆಯಲು ಪಂಚಮಸಾಲಿ ಸಮುದಾಯದವರು ಕೂಡ ಮುಂದೆ ಬಂದಿದ್ದಾರೆ.

ಈ ಎಲ್ಲಾ ವಿಚಾರಗಳನ್ನು ಕೇಂದ್ರೀಕರಿಸಿಕೊಂಡು ಟಿವಿ9 ಕನ್ನಡ ಡಿಜಿಟಲ್​ ಲೈವ್​ ಸಂವಾದ ನಡೆಸಿಕೊಟ್ಟಿತು. ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್, ಪಂಚಮಸಾಲಿ ಪೀಠದ ಗುರುಗಳು ಹಾಗೂ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಸ್ವಾಮಿ ವಚನಾನಂದ ಚರ್ಚೆಯಲ್ಲಿ ಭಾಗವಹಿಸಿದರು. ನಿರೂಪಕ ಮಾಲ್ತೇಶ್ ಇಂದಿನ ಚರ್ಚೆ ನಡೆಸಿಕೊಟ್ಟರು.

ಕಳೆದ 71 ವರ್ಷಗಳಿಂದ ಮೀಸಲಾತಿ ಇದೆಯಾದರೂ, ಸಿಗಬೇಕಾದ ಜನರಿಗೆ ಅಥವಾ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ. ವಲಸಿಗರು, ಕೊಳಗೇರಿಯಲ್ಲಿ ಬದುಕುತ್ತಿರುವವರು, ಆದಿವಾಸಿ ಜನಾಂಗದವರು, ದೇವದಾಸಿಗಳು ಇಂಥವರಿಗೆ ಮೀಸಲಾತಿ ಸಿಕ್ಕಿಲ್ಲ. ಹಾಗಾಗಿ ಮೊದಲು, ಈ ಸಮುದಾಯಗಳಿಗೆ ಮೀಸಲಾತಿ ತಲುಪಿಸುವುದು ಹೇಗೆ ಎಂಬ ಚರ್ಚೆ ನಡೆಯಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.

ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ಹಾಗೂ ಉದ್ಯೋಗ ಎರಡರ ಅವಕಾಶಗಳು ಕುಸಿತಗೊಂಡಿದೆ. ಸರ್ಕಾರದ 60 ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ. 1992ರಿಂದ ಇಂದಿನವರೆಗೆ ಬಹಳಷ್ಟು ಬಂಡವಾಳ ಹಿಂತೆಗೆತವಾಗಿದೆ. ಖಾಸಗೀಕರಣ, ಹೊರಗುತ್ತಿಗೆ ಆದಾರದ ಕಾರ್ಮಿಕ ಪದ್ಧತಿ ಹೆಚ್ಚಾಗಿದೆ. ಈ ವಿಭಾಗಗಳಲ್ಲಿ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯ ಅಪ್ರಸ್ತುತ ಆಗುವಂಥ ಸಂದರ್ಭದಲ್ಲಿ ಮೀಸಲಾತಿ ಅವಕಾಶ ಹೆಚ್ಚಿಸಿಕೊಳ್ಳಬೇಕು. ಕುರುಬರು ಆರ್ಥಿಕ, ನೈತಿಕ, ಸಾಂಸ್ಕೃತಿಕವಾಗಿ ದಿವಾಳಿ ಆಗುತ್ತಿದ್ದಾರೆ. ತಮ್ಮವರನ್ನು ಓದಿಸಿಕೊಳ್ಳಲು, ಓದಿಸಿದ್ದರೆ ಕೆಲಸ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಮೀಸಲಾತಿ ನೀಡಿದರೆ ಉತ್ತಮ. ಕೆಲವಾರು ಸಮಸ್ಯೆಗಳು ಮೀಸಲಾತಿಯಿಂದ ಪರಿಹಾರ ಆಗುತ್ತವೆ. ಆದರೆ, ಇದೇ ಅಂತಿಮ ಎಂದಾಗಬಾರದು. ಬೇರೆ ಮಾರ್ಗ ಕಂಡುಕೊಳ್ಳಬೇಕು. ಜನರಿಗೆ ಅತೃಪ್ತಿ, ಸಮಸ್ಯೆ ಇರುವುದು ನಿಜ. ಹಾಗೆಂದು, ಇದೇ ಪರಿಹಾರ ಖಂಡಿತ ಅಲ್ಲ ಎಂದು ಹೇಳಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಹೋರಾಟದ ಕೂಗು ಕೇಳಿಬಂದಿದೆ. ಹರ್ಯಾಣದಲ್ಲಿ ಜಾಟ್ ಸಮುದಾಯ, ಮಹಾರಾಷ್ಟ್ರದಲ್ಲಿ ಮರಾಠಿ ಸಮುದಾಯ ಅದರಂತೆ, ಕರ್ನಾಟಕದಲ್ಲಿ ಈ ಹೋರಾಟ. ನಾವು ಈ ಹೋರಾಟವನ್ನು ದೇಶದ ಹೋರಾಟಗಳ ಭಾಗವಾಗಿ ಗಮನಿಸಬೇಕು. ಎಲ್ಲಾ ಸಮಸ್ಯೆಗಳನ್ನು ಉದ್ದೇಶಿಸಿ ವಿಚಾರ ವಿಮರ್ಶೆ ಆಗಬೇಕೆಂದರೆ, ಮೀಸಲಾತಿ ನೀತಿಯನ್ನೇ ಪುನಾರಚನೆ ಮಾಡಬೇಕು. ಪುನಾರಚನೆಗೆ ಅವಕಾಶಗಳನ್ನು ಸೃಷ್ಟಿಸಬೇಕು. ಅದಕ್ಕಾಗಿ, ದೃಢ ಹೆಜ್ಜೆ ಇಡುವುದು ಅಗತ್ಯ ಎಂದು ವಿವರಿಸಿದರು.

ಈವರೆಗೆ ಮೀಸಲಾತಿ ಅನುಭವಿಸಿದವರಿಗೆ ಈಗ ಪ್ರಮಾಣದಲ್ಲಿ ಕಡಿಮೆ ಮಾಡೋಣ. ಹಸಿದ ಹೊಟ್ಟೆಗಳಿಗೆ ಅನ್ನ ಬೇಕು. 71 ವರ್ಷಗಳಲ್ಲಿ ಅಗತ್ಯ ಅನಿಸಿಕೊಂಡವರಲ್ಲಿ ಯಾರಿಗೆ ಮೀಸಲಾತಿ ಸಿಕ್ಕಿಲ್ಲವೋ ಅಂಥವರಿಗೆ ಕೊಡಬೇಕು. ಮೂಲ ಶಿಕ್ಷಣದಿಂದ ವಂಚಿತವಾದ ಸಮುದಾಯಗಳಿಗೆ ಮೀಸಲಾತಿ ನೀಡಬೇಕು. ಮೀಸಲಾತಿ ಎನ್ನುವುದು ತಾತ್ಕಾಲಿಕ ಬಿಡುಗಡೆ ಅಷ್ಟೇ. ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಯೇ ಮೂಲಭೂತ ಹಕ್ಕುಗಳಾಗಿ ಪರಿಹಾರ ಸಿಗಬೇಕು ಎಂದು ನುಡಿದರು.

ವಾಲ್ಮೀಕಿ ಸಮುದಾಯದ ಬಗ್ಗೆ ಸರ್ಕಾರಕ್ಕೆ ಕೊಟ್ಟಿರುವ ವರದಿಯ ಬಗ್ಗೆ ಟಿವಿ9 ಪ್ರಶ್ನಿಸಿದಾಗ, ಈ ಸಂದರ್ಭದಲ್ಲಿ ವರದಿಯ ಕುರಿತು ಮಾತನಾಡುವುದು ಸೂಕ್ತವಲ್ಲ ಎಂದು ವರದಿ ವಿಚಾರ ವಿವರಿಸಲು ನಿರಾಕರಿಸಿದರು. ದೇಶದ 9 ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ. 50ಕ್ಕಿಂತ ಹೆಚ್ಚಾಗಿದೆ. ಇದಕ್ಕೆ ಕಾನೂನಿನಲ್ಲಿ ತೊಡಕಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ (exceptional circumstance) ಈ ನಿಯಮಗಳನ್ನು ಸಡಿಲಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ ಎಂದು ಹೇಳಿದರು.

ಎಸ್, ಎಸ್​ಟಿ ಅಥವಾ ಹಿಂದುಳಿದ ವರ್ಗದ ಮೀಸಲಾತಿಗೆ ರಾಷ್ಟ್ರೀಯ ಆಯೋಗಗಳಿರುತ್ತವೆ. ಅವು ಸಮೀಕ್ಷೆ ನಡೆಸಿ, ಅಧ್ಯಯನ ನಡೆಸಿ ಮಂತ್ರಿಮಂಡಲಕ್ಕೆ ಮನವಿ ಸಲ್ಲಿಸಬೇಕು. ಬಳಿಕ, ಮಂತ್ರಿಮಂಡಲ ಸಂಸತ್ತಿನಲ್ಲಿ ಈ ವಿಚಾರ ಪ್ರಸ್ತಾಪಿಸಬೇಕು. ಅಲ್ಲಿ ವಿಚಾರ ಒಪ್ಪಿತವಾದ ಬಳಿಕ ರಾಷ್ಟ್ರಪತಿಗಳು ಅನುಮೋದನೆ ಕೊಡಬೇಕು ನಂತರವಷ್ಟೇ ಮೀಸಲಾತಿ ಲಭ್ಯವಾಗುತ್ತದೆ ಎಂದು ಕೇಂದ್ರದ ಮೀಸಲಾತಿ ಪಡೆಯುವ ಹಂತಗಳನ್ನು ವಿವರಿಸಿದರು.

ಮೀಸಲಾತಿ ಯಾಕಿದೆ ಎಂಬುದನ್ನು ಎಲ್ಲರೂ ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕು. ಮೀಸಲಾತಿ ಬಡತನ ನಿವಾರಣೆಗಾಗಿ ಇರುವುದಲ್ಲ, ಜಾತಿ ವಿನಾಶ ಮಾಡಲು ಇರುವುದಲ್ಲ, ಸಮುದಾಯಗಳನ್ನು ಆರ್ಥಿಕವಾಗಿ ಸಬಲ ಮಾಡಲು ಇರುವುದಲ್ಲ. ಬದಲಾಗಿ, ಎಲ್ಲರಿಗೂ ಉದ್ಯೋಗ, ಎಲ್ಲರಿಗೂ ಶಿಕ್ಷಣ ಸಿಗುವವರೆಗೂ ಇರುವ ಅವಕಾಶಗಳನ್ನು ಹೇಗೆ ಹಂಚಿಕೊಳ್ಳಬೇಕು ಎಂಬುದಕ್ಕಾಗಿ ಮೀಸಲಾತಿ ಪದ್ಧತಿ ಇರುವುದಾಗಿದೆ ಎಂದು ಹೇಳಿದರು.

ಹಿಂದಿನ ಹಲವಾರು ವರ್ಷಗಳಲ್ಲಿ, ದೇಶದ ಅನೇಕ ವರ್ಗದ ಜನರಿಗೆ ಶಿಕ್ಷಣ ನಿರಾಕರಿಸಿದ್ದೇವೆ. ಆಡಳಿತದಲ್ಲಿ ಅವಕಾಶ ನೀಡಲಿಲ್ಲ. ನ್ಯಾಯಾಂಗ ವಿಭಾಗದಲ್ಲಿ ಭಾಗವಹಿಸಲು ಬಿಟ್ಟಿಲ್ಲ. ಸೈನ್ಯಕ್ಕೂ ಸೇರಲು ಅವಕಾಶ ನೀಡಿರಲಿಲ್ಲ. ಹೀಗೆ ಅವಕಾಶ ವಂಚಿತವಾಗಿದ್ದ ಸಮುದಾಯಗಳಿಗೆ ಸೂಕ್ತ ಅವಕಾಶ ನೀಡುವುದೇ ಮೀಸಲಾತಿಯ ಮೂಲ ಉದ್ದೇಶ ಎಂದು ತಿಳಿಸಿದರು.

ನಮ್ಮದು ಹಳೆಯ ಹೋರಾಟ: ವಚನಾನಂದ ಸ್ವಾಮೀಜಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸಕ್ರಿಯರಾಗಿರುವ ಶ್ರೀ ವಚನಾನಂದ ಸ್ವಾಮಿಗಳು ಮಾತನಾಡಿದರು. ಇದು ಇಂದು ನಿನ್ನೆ ಆರಂಭವಾದ ಚಳುವಳಿಯಲ್ಲ. ಇದು 26 ವರ್ಷಗಳ ಹೋರಾಟ. 1994ರಿಂದ ಆರಂಭವಾದ ಹೋರಾಟವು 2009ರ ವರೆಗೂ ನಡೆಯಿತು. 2009ರಲ್ಲಿ ಪಂಚಮಸಾಲಿ ಸಮುದಾಯವನ್ನು ಸಾಮಾನ್ಯ ವರ್ಗದಿಂದ 3B ಗೆ ಸೇರಿಸಲಾಯಿತು. ಆಗಲೇ ಪಂಚಮಸಾಲಿ ಸಮುದಾಯ 2Aಗೆ ಸೇರ್ಪಡೆಯಾಗಬೇಕಿತ್ತು. ಆದರೆ, ಮುಖ್ಯಮಂತ್ರಿ ಸ್ಥಾನ ಯಡಿಯೂರಪ್ಪರಿಂದ ಸದಾನಂದ ಗೌಡರಿಗೆ, ನಂತರ ಜಗದೀಶ್ ಶೆಟ್ಟರ್​ಗೆ ವರ್ಗವಾಯಿತು. ಈ ನಡುವೆ ಪಂಚಮಸಾಲಿ ಮೀಸಲಾತಿ ವಿಚಾರ ನೆನೆಗುದಿಗೆ ಬಿದ್ದಿತ್ತು. ಅಂದಿನ ಹೋರಾಟ ಈಗ ಮತ್ತೆ ಚುರುಕಾಗಿದೆ ಎಂದು ವಚನಾನಂದ ಗುರೂಜಿ ಹೋರಾಟದ ಹಿನ್ನೆಲೆಯನ್ನು ತಿಳಿಸಿದರು.

ಮೀಸಲಾತಿ ವಿಚಾರದಲ್ಲಿ 2A ನೀಡುವುದು ರಾಜ್ಯದ ಅಧಿಕಾರ ಸುಪರ್ದಿಯಲ್ಲಿದೆ. SC ಅಥವಾ ST ನೀಡುವುದು ಮಾತ್ರ ಕೇಂದ್ರದ ಅಡಿಯಲ್ಲಿ ಬರುತ್ತದೆ. ಹಾಗಾಗಿ, ಪಂಚಮಸಾಲಿ ಮೀಸಲಾತಿ ನೀಡುವಲ್ಲಿ ಮುಖ್ಯಮಂತ್ರಿಗೆ ಪೂರ್ಣ ಅಧಿಕಾರವಿದೆ. ಯಡಿಯೂರಪ್ಪ ನಮ್ಮ ಮನವಿಯನ್ನು ಪುರಸ್ಕರಿಸುತ್ತಾರೆ ಎಂದು ವಚನಾನಂದರು ವಿಶ್ವಾಸ ವ್ಯಕ್ತಪಡಿಸಿದರು.

ಮೀಸಲಾತಿ ವಿಚಾರವಾಗಿ ಕುಲಶಾಸ್ತ್ರ ಅಧ್ಯಯನ, 1994 ರಿಂದ ಶುರುವಾಗಿ 2008 ರವರೆಗೆ ನಡೆದಿದೆ. ಅದರ ಆದಾರದಲ್ಲೇ 3B ವರ್ಗ ಪಡೆದುಕೊಂಡಿದ್ದೇವೆ. ಈಗ 2A ನೀಡಿ ಎಂದು ಕೇಳುತ್ತಿದ್ದೇವೆ. ಲಿಂಗಾಯತರು ಹೇಗೆ 2A ಪಡಕೊಂಡಿದ್ದಾರೋ, ಅದೇ ಆಧಾರದಲ್ಲಿ ಪಂಚಮಸಾಲಿಗೆ ಮೀಸಲಾತಿ ನೀಡಿ ಎಂದು ತಿಳಿಸಿದರು.

ನಮ್ಮ ಸಮುದಾಯದಲ್ಲಿ ಕೃಷಿ ಅವಲಂವನೆ ಹೆಚ್ಚು. ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಉತ್ತಮವಾಗಿಲ್ಲ. ಜನಸಂಖ್ಯೆ, ಆರ್ಥಿಕ, ರಾಜಕೀಯ ಸ್ಥಾನಮಾನ ಆಧಾರಿತವಾಗಿ ಮೀಸಲಾತಿ ಕೇಳುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ ಈ ವಿಧದಲ್ಲಿ ಮೀಸಲಾತಿ ಕೇಳುತ್ತಿದ್ದೇವೆ ಸಮುದಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

Published On - 9:34 pm, Wed, 10 February 21

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್