ಸಿಂಗಾಪುರ್ ಏರ್ಲೈನ್ಸ್ನಲ್ಲಿ ಮಹಿಳಾ ಸಿಬ್ಬಂದಿಗೆ ಭಾರತೀಯ ಯುವಕನಿಂದ ಲೈಂಗಿಕ ಕಿರುಕುಳ
ಸಿಂಗಾಪುರ್ ಏರ್ಲೈನ್ಸ್ನಲ್ಲಿ ಮಹಿಳಾ ಸಿಬ್ಬಂದಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸಿಂಗಾಪುರದಲ್ಲಿ ನಡೆದಿದೆ. ಸಿಂಗಾಪುರ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಿಮಾನ ಸಿಬ್ಬಂದಿಯೊಬ್ಬರು ಮಹಿಳಾ ಪ್ರಯಾಣಿಕರೊಬ್ಬರನ್ನು ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದಾಗ ನೆಲದ ಮೇಲೆ ಬಿದ್ದಿದ್ದ ಟಿಶ್ಯೂ ಪೇಪರ್ನ್ನು ಗಮನಿಸಿದ್ದರು. ಅದನ್ನು ತೆಗೆದುಕೊಳ್ಳಲು ಕೆಳಗೆ ಬಾಗಿದಾಗ ಹಿಂದಿನಿಂದ ವ್ಯಕ್ತಿ ಬಂದು ಆಕೆಯನ್ನು ತಬ್ಬಿ ಶೌಚಾಲಯದೊಳಗೆ ತಳ್ಳಿದ್ದಾನೆ .

ಆಸ್ಟ್ರೇಲಿಯಾ, ಏಪ್ರಿಲ್ 24: ಭಾರತೀಯ ಯುವಕನೊಬ್ಬ ಸಿಂಗಾಪುರ್ ಏರ್ಲೈನ್ಸ್(Singapore Airlines)ನಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಆಸ್ಟ್ರೇಲಿಯಾದಿಂದ ಹೊರಟಿದ್ದ ಸಿಂಗಾಪುರ್ ಏರ್ಲೈನ್ಸ್ ವಿಮಾನದಲ್ಲಿ 28 ವರ್ಷದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ.
ಸಿಂಗಾಪುರ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಿಮಾನ ಸಿಬ್ಬಂದಿಯೊಬ್ಬರು ಮಹಿಳಾ ಪ್ರಯಾಣಿಕರೊಬ್ಬರನ್ನು ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದಾಗ ನೆಲದ ಮೇಲೆ ಬಿದ್ದಿದ್ದ ಟಿಶ್ಯೂ ಪೇಪರ್ನ್ನು ಗಮನಿಸಿದ್ದರು. ಅದನ್ನು ತೆಗೆದುಕೊಳ್ಳಲು ಕೆಳಗೆ ಬಾಗಿದಾಗ ಹಿಂದಿನಿಂದ ವ್ಯಕ್ತಿ ಬಂದು ಆಕೆಯನ್ನು ತಬ್ಬಿ ಶೌಚಾಲಯದೊಳಗೆ ತಳ್ಳಿದ್ದಾನೆ .
ಅಲ್ಲಿದ್ದವರು ತಕ್ಷಣ ಮಧ್ಯ ಪ್ರವೇಶಿಸಿ ಸಿಬ್ಬಂದಿಯನ್ನು ಶೌಚಾಲಯದಿಂದ ಹೊರಗೆ ತರಲು ಸಹಾಯ ಮಾಡಿದರು. ನಂತರ ವ್ಯಕ್ತಿಯನ್ನು ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಅಪರಾಧ ಸಾಬೀತಾದರೆ, ರಜತ್ ಎಂದು ಗುರುತಿಸಲಾದ ಶಂಕಿತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ, ದಂಡ, ಛಡಿಯೇಟು ಅಥವಾ ಈ ಶಿಕ್ಷೆಗಳ ಯಾವುದೇ ಶಿಕ್ಷೆ ವಿಧಿಸಬಹುದು. ಅವರ ಮುಂದಿನ ನ್ಯಾಯಾಲಯದ ವಿಚಾರಣೆಯನ್ನು ಮೇ 14 ರಂದು ನಿಗದಿಪಡಿಸಲಾಗಿದೆ.
ಮತ್ತಷ್ಟು ಓದಿ: ತಮಿಳುನಾಡು: ಗರ್ಭಿಣಿಗೆ ಲೈಂಗಿಕ ಕಿರುಕುಳ, ಚಲಿಸುತ್ತಿದ್ದ ರೈಲಿನಿಂದ ಹೊರಗೆಸೆದ ದುರುಳರು
ಏಪ್ರಿಲ್‌ನಲ್ಲಿ ವರದಿಯಾದ ಇಂತಹ ಎರಡನೇ ಪ್ರಕರಣ ಇದಾಗಿದೆ. 2024 ರ ನವೆಂಬರ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಿಂದ ವಿಮಾನದಲ್ಲಿ ಸಿಂಗಾಪುರ್ ಏರ್‌ಲೈನ್ಸ್‌ನ ನಾಲ್ವರು ವ್ಯವಸ್ಥಾಪಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಒಪ್ಪಿಕೊಂಡ ನಂತರ 73 ವರ್ಷದ ಭಾರತೀಯ ಪ್ರಜೆ ಬಾಲಸುಬ್ರಮಣಿಯನ್ ರಮೇಶ್‌ಗೆ ಈ ತಿಂಗಳ ಆರಂಭದಲ್ಲಿ ಒಂಬತ್ತು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ