School reopen in Karnataka: ಅಕ್ಟೋಬರ್ ಬಳಿಕ ಶಾಲೆಗಳ ಪುನರಾಂಭದ ಸುಳಿವು ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
S Suresh kumar: ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಶಾಲೆಗಳ ಭೇಟಿ ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು ಶಾಲೆ ಆರಂಭಿಸುವ ಬಗ್ಗೆ ಅಕ್ಟೋಬರ್ನಲ್ಲಿ ತೀರ್ಮಾನಿಸ್ತೇವೆ ಎಂದಿದ್ದಾರೆ.

ದೇವನಹಳ್ಳಿ: ಕೊರೊನಾ ಸೋಂಕಿನಿಂದಾಗಿ ಕಳೆದ ಒದೂವರೆ ವರ್ಷದಿಂದ ಶಾಲೆಗಳು ಪ್ರಾರಂಭವಾಗದೆ ಮಕ್ಕಳು ಮನೆಯಲ್ಲೇ ಉಳಿಯುವಂತಾಗಿದೆ. ಶಿಕ್ಷಣ ಎಂಬುದು ಕೈಗೆಟುಕದಂತಾಗಿದೆ. ಈ ಮಧ್ಯೆ, ಕೊರೊನಾ ಮೂರನೆ ಅಲೆ ಹಾವಳಿ ಎದುರಿಗೇ ಧುತ್ತನೆ ಎದುರಾಗಿದೆ. ಆದರೂ ಮಕ್ಕಳ ಶಾಲೆ ಪುನರಾರಂಭದ ಬಗ್ಗೆ ಆಗಾಗ್ಗೆ ಮಾತುಗಳು ಕೇಳೀಬರುತ್ತಿವೆ. ಈ ಬಾರಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಕ್ಟೋಬರ್ ಬಳಿಕ ಶಾಲೆಗಳ ಪುನರಾಂಭದ ಸುಳಿವು ನೀಡಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಶಾಲೆಗಳ ಭೇಟಿ ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್ ಅವರು ಶಾಲೆ ಆರಂಭಿಸುವ ಬಗ್ಗೆ ಅಕ್ಟೋಬರ್ನಲ್ಲಿ ತೀರ್ಮಾನಿಸ್ತೇವೆ ಎಂದಿದ್ದಾರೆ.
ತಜ್ಞರು, ಪೋಷಕರು, ಶಿಕ್ಷಕರ ಜೊತೆ ಸಭೆ ಮಾಡಲಾಗಿದೆ. ಆರೋಗ್ಯ ಇಲಾಖೆಯ ಸಹಮತ ಕೇಳುತ್ತಿದ್ದೇವೆ. ಶಾಲೆಗಳನ್ನು ಯಾವಾಗ ಪ್ರಾರಂಭ ಮಾಡಬೇಕು, ಯಾವ ರೀತಿ ಆರಂಭ ಮಾಡಬೇಕೆಂದು ತೀರ್ಮಾನಿಸ್ತೇವೆ. ಈ ಕುರಿತು ಅಕ್ಟೋಬರ್ ಮೊದಲ ವಾರದಲ್ಲಿ ತೀರ್ಮಾನ ಮಾಡಲಾಗುವುದು ಎಂದು ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
(schools in karnataka may be reopened after october in 2021 hints education minister s suresh kumar)