ಸಚಿವ-ಶಾಸಕ ಮುಸುಕಿನ ಗುದ್ದಾಟ: ಉತ್ತರ ಕನ್ನಡದಲ್ಲಿ ಮುಂದುವರಿದ ಅಧಿಕಾರಿಗಳ ವರ್ಗಾವಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 19, 2024 | 5:41 PM

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಹಾಲಿ ಮತ್ತು ಮಾಜಿ ಸಚಿವರ ಕಾದಾಟದಿಂದ ಹಿರಿಯ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ದೊರೆತಿದೆ. ಇದೀಗ ಜಿಲ್ಲಾ ಉಸ್ತುವರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರನ್ನು ರಾಯಚೂರಿಗೆ ವರ್ಗಾಯಿಸಲಾಗಿದೆ. ಸಚಿವ ವೈದ್ಯರೊಂದಿಗಿನ ವಿವಾದದ ನಂತರ ಈ ವರ್ಗಾವಣೆ ನಡೆದಿದೆ.

ಸಚಿವ-ಶಾಸಕ ಮುಸುಕಿನ ಗುದ್ದಾಟ: ಉತ್ತರ ಕನ್ನಡದಲ್ಲಿ ಮುಂದುವರಿದ ಅಧಿಕಾರಿಗಳ ವರ್ಗಾವಣೆ
ಸಚಿವ-ಶಾಸಕ ಮುಸುಕಿನ ಗುದ್ದಾಟ: ಉತ್ತರ ಕನ್ನಡದಲ್ಲಿ ಮುಂದುವರಿದ ಅಧಿಕಾರಿಗಳ ವರ್ಗಾವಣೆ
Follow us on

ಕಾರವಾರ, ಡಿಸೆಂಬರ್​ 19: ಉತ್ತರ ಕನ್ನಡ ಜಿಲ್ಲಾ ಉಸ್ತುವರಿ ಕಾರ್ಯದರ್ಶಿ ರಿತೇಶ್ ಕುಮಾರ ಸಿಂಗ್ ವರ್ಗಾವಣೆ (Transfer) ಮಾಡಲಾಗಿದ್ದು, ಅವರನ್ನು ರಾಯಚೂರು ಜಿಲ್ಲಾ ಉಸ್ತುವರಿ ಕಾರ್ಯದರ್ಶಿ ಆಗಿ ನೇಮಕ ಮಾಡಲಾಗಿದೆ. ಇನ್ನು ಜಿಲ್ಲಾ ಉಸ್ತುವರಿ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಸುಷಮಾ ಗೋಡಬೋಲೆ ನೇಮಕ ಮಾಡಲಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದೆ.

ರಿತೇಶ್ ಕುಮಾರ ವಿರುದ್ದ ಸಚಿವ ವೈದ್ಯ ಅಸಮಾಧಾನ

ಒಂದು ತಿಂಗಳ ಹಿಂದೆ ರಿತೇಶ್ ಕುಮಾರ ವಿರುದ್ದ ಬಹಿರಂಗವಾಗಿ ಸಚಿವ ವೈದ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಜಿಲ್ಲಾ ಉಸ್ತುವರಿ ಕಾರ್ಯದರ್ಶಿ ಜಿಲ್ಲೆಗೆ ಡೀಲ್ ಕುದುರಿಸಲು ಬರುತ್ತಾರೆ. ರಿತೇಶ್ ಕುಮಾರ ನಾನು ಕರೆದ ಒಂದೇ ಒಂದು ಸಭೆಗೆ ಬರುವುದಿಲ್ಲ. ನಮಗೆ ಹೇಳದೆ, ಕೇಳದೆ ತಮಗೆ ಬೇಕಾದ ಹಾಗೆ ನಿರ್ಣಯ ಕೈಗೊಳ್ಳುತ್ತಾರೆ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ: ಸಾರ್ವಜನಿಕರಿಂದ ದೂರು: ಬೆಸ್ಕಾಂ, ಜಲಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಸಚಿವರ ಮಾತಿಗೆ ಪತ್ರಿಕಾ ಪ್ರಕಟಣೆ ಮೂಲಕವೇ ರಿತೇಶ್ ಕುಮಾರ ತಿರುಗೇಟು ಕೊಟ್ಟಿದ್ದರು. ಸಚಿವರು ಮಾಡುವ ಆರೋಪ ಆಧಾರ ರಹಿತ ಎಂದಿದ್ದರು. ಇದರಿಂದ ಮತ್ತಷ್ಟು ಗರಂ ಆಗಿದ್ದ ಸಚಿವ ವೈದ್ಯ, ಉಸ್ತುವರಿ ಕಾರ್ಯದರ್ಶಿ ಜಿಲ್ಲೆಯಲ್ಲಿ ಏನು ಕೆಲಸ ಇರುತ್ತೆ ಎಂಬುವುದನ್ನು ತಿಳಿದುಕೊಳ್ಳಲಿ ಎಂದು ಸವಾಲ್ ಹಾಕಿದ್ದರು. ಸಚಿವರ ಮಾತಿಗೆ ಕ್ಯಾರೆ ಎನ್ನದ ಹಿರಿಯ ಐಎಎಸ್ ಅಧಿಕಾರಿ ತಮ್ಮ ಕೆಲಸ ಮುಂದುವರೆಸಿದ್ದರು.

ರಿತೇಶ್ ಕುಮಾರ ನಮ್ಮ ಜಿಲ್ಲೆಗೆ ಬೇಡವೆ ಬೇಡ ಎಂದು ಸಿಎಂ ಸಿದ್ದರಾಮಯ್ಯ ಬಳಿ ಸಚಿವ ವೈದ್ಯ ಪಟ್ಟು ಹಿಡಿದಿದ್ದರು. ಕೊನೆಗೂ ಸಚಿವರ ಮಾತಿನ ಪ್ರಕಾರ ಸಿಎಂ ವರ್ಗಾವಣೆಗೆ ಅಸ್ತು ಹೇಳಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಜಿಲ್ಲೆಯ ಹಿರಿಯ ಅಧಿಕಾರಿಗಳನ್ನ ವರ್ಗಾವಣೆ ಮಾಡುವಲ್ಲಿ ವಿಫಲ ಆಗಿದ್ದ ಸಚಿವ ವೈದ್ಯ,
ಕೊನೆಗೂ ಹಿರಿಯ ಐಎಎಸ್ ಅಧಿಕಾರಿ ವರ್ಗಾವಣೆಯಲ್ಲಿ ಯಶಸ್ಸು ಕಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜತೆ ಹೊಂದಾಣಿಕೆ ಆರೋಪ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಕಾಂಗ್ರೆಸ್ ಶಾಸಕರಿಂದಲೇ ಆಗ್ರಹ

ಸಚಿವ ವೈದ್ಯಗೆ ಆಪ್ತರಾಗಿದ್ದ ಎಸ್​ಪಿ ಮತ್ತು ಡಿಸಿ ಅನ್ನು ಅವಧಿ ಪೂರ್ವ ವರ್ಗಾವಣೆ ಮಾಡಲಾಗಿತ್ತು. ಎಡಿಸಿ ಮತ್ತು ಎಎಸ್​ಪಿ ಕೂಡ ವರ್ಗಾವಣೆ ಮಾಡಲಾಗಿತ್ತು. ಆ ಮೂಲಕ ರಿತೇಶ್ ಕುಮಾರ ಮೂಲಕ ಆರ್​ವಿ ದೇಶಪಾಂಡೆ ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಮುಂದಾಗಿದ್ದರು. ಈಗ ದೇಶಪಾಂಡೆ ಪರವಾಗಿದ್ದ ಉಸ್ತುವರಿ ಕಾರ್ಯದರ್ಶಿಯನ್ನ ವರ್ಗಾವಣೆ ಮಾಡಿಸಿದ್ದು, ಹಾಲಿ, ಮಾಜಿ ಸಚಿವರ ಕಾದಾಟದಿಂದ ಹಿರಿಯ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ದೊರೆತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.