AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಕ್ಕೆ ಪರಿಷತ್​​ನಲ್ಲಿ ಹಿನ್ನಡೆ!

ವಿಧಾನಸಭೆಯಲ್ಲಿ ಸೋಮವಾರ ಪರ ವಿರೋಧದ ನಡುವೆಯೂ ಅಂಗೀಕಾರವಾಗಿದ್ದ 'ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಪರಿಷತ್​ನಲ್ಲಿ ಹಿನ್ನಡೆಯಾಗಿದೆ. ಪರಿಷತ್​ನಲ್ಲಿ ಸೌಹಾರ್ದ ಸಹಕಾರಿ ತಿದ್ದುಪಡಿ ಬಿಲ್ ಮೇಲೆ ಚರ್ಚೆ ನಡೆದಿದ್ದು, ಪರಿಶೀಲನಾ ಸಮಿತಿ ರಚನೆ ಮಾಡುವಂತೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಬಿಗಿಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಪ್ರಸ್ತಾವನೆಯನ್ನು ಮತಕ್ಕೆ ಹಾಕುವ ಮೂಲಕ ಪರಿಶೀಲನಾ ಸಮಿತಿ ರಚನೆಗೆ ನಿರ್ಧರಿಸಲಾಗಿದೆ.

ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಕ್ಕೆ ಪರಿಷತ್​​ನಲ್ಲಿ ಹಿನ್ನಡೆ!
ವಿಧಾನಸೌಧ
TV9 Web
| Edited By: |

Updated on: Feb 21, 2024 | 8:18 PM

Share

ಬೆಂಗಳೂರು, (ಫೆಬ್ರವರಿ 21): ಸಹಕಾರ ಸಂಘಗಳಿಗೆ ಮೀಸಲು ಆಧಾರಿತವಾಗಿ ಮೂವರನ್ನು ರಾಜ್ಯ ಸರಕಾರದಿಂದ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲು ಅವಕಾಶ ಕಲ್ಪಿಸುವುದೂ ಸೇರಿದಂತೆ ಇತರೆ ಬದಲಾವಣೆಗಳನ್ನೊಳಗೊಂಡ ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ವಿಧೇಯಕ-2024’ಕ್ಕೆ(Karnataka Souharda co-operative amendment bill 2024 ) ಹಿನ್ನಡೆಯಾಗಿದೆ. ವಿಧಾನಸಭೆಯಲ್ಲಿಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ವಿಧೇಯಕ ವಿಧಾನ ಪರಿಷತ್​ನಲ್ಲಿ ಹಿನ್ನಡೆಯಾಗಿದ್ದು, ಪರಿಶೀಲನಾ ಸಮಿತಿ ರಚನೆಗೆ ನಿರ್ಧರಿಸಲಾಗಿದೆ.

ಸಹಕಾರ ಸಚಿವ ಕೆಎನ್​ ರಾಜಣ್ಣ ಅವರು ಇಂದು(ಫೆಬ್ರವರಿ 21) ವಿಧಾನಪರಿಷತ್​ನಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ವಿಧೇಯಕ ಮಂಡಿಸಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ನಾಯಕರ ಮಧ್ಯೆ ಚರ್ಚೆ ನಡೆದಿದ್ದು, ಪರಿಶೀಲನಾ ಸಮಿತಿ ರಚನೆ ಮಾಡುವಂತೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಬಿಗಿಪಟ್ಟು ಹಿಡಿದಿದ್ದರು. ಮತ್ತೊಂದೆಡೆ ಆಡಳಿತರೂಢ ಕಾಂಗ್ರೆಸ್​​, ಪರಿಶೀಲನಾ ಸಮಿತಿ ಬೇಕಿಲ್ಲ ಬಿಲ್ ಅಂಗೀಕರಿಸಿ ಎಂದು ಆಗ್ರಹಿಸಿದರು. ಕೆಳಮನೆಯಲ್ಲಿ ವಿಧೇಯಕ ಅಂಗೀಕಾರವಾಗಿದೆ. ಇಲ್ಲೂ ಅಂಗೀಕರಿಸಿ ಎಂದು ವಿಧಾನಪರಿಷತ್​ನಲ್ಲಿ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಮನವಿ ಮಾಡಿದರು. ಅಂತಿಮವಾಗಿ ಉಪ ಸಭಾಪತಿ ಪ್ರಾಣೇಶ್ ಅವರು ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರು.

ಇದನ್ನೂ ಓದಿ: ಶಾಲೆಗಳಿಂದ 100 ಮೀ. ವ್ಯಾಪ್ತಿಯಲ್ಲಿ ಸಿಗರೇಟ್ ನಿಷೇಧ, ದಂಡ ಹೆಚ್ಚಳ: ಮಸೂದೆ ಪಾಸ್

ಬಳಿಕ ನಡೆದ ಮತಗಳ ಎಣಿಕೆಯಲ್ಲಿ ಪರಿಶೀಲನಾ ಸಮಿತಿ ರಚನೆಗೆ ಬಿಜೆಪಿ ಸದಸ್ಯರ ಬೆಂಬಲ ಸೂಚಿಸಿದ್ದಾರೆ. ಪರಿಶೀಲನಾ ಸಮಿತಿ ರಚನೆ ಪರ ಒಟ್ಟು 33 ಮತಗಳು ಚಲಾವಣೆಯಾಗಿದ್ದು, ಪರಿಶೀಲನಾ ಸಮಿತಿ ರಚನೆ ವಿರುದ್ಧ ಒಟ್ಟು 21 ಮತಗಳು ಬಿದ್ದಿವೆ. ಇನ್ನು ಬಿಜೆಪಿಯ ಹೆಚ್​.ವಿಶ್ವನಾಥ್ ಅವರು ಯಾವುದಕ್ಕೂ ಎದ್ದು ನಿಲ್ಲದೆ ತಟಸ್ಥರಾಗಿದ್ದರು.

ಪರಿಶೀಲನಾ ಸಮಿತಿ ರಚನೆ ಪರ ಒಟ್ಟು 33 ಮತಗಳು ಬಿದ್ದಿದ್ದರಿಂದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ಪರಿಶೀಲನಾ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ. ಇದರೊಂದಿಗೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಕ್ಕೆ ಪರಿಷತ್​​ನಲ್ಲಿ ಹಿನ್ನಡೆಯಾಗಿದೆ.

ಚರ್ಚೆ ವೇಳೆ ವಿಶ್ವನಾಥ್ ಹೇಳಿದ್ದೇನು?

ಸಹಕಾರಿ ಬಿಲ್ ಮಂಡನೆ ಚರ್ಚೆ ವೇಳೆ ಮಾತನಾಡಿದ ವಿಶ್ವನಾಥ್, ಮೀಸಲಾತಿ ಬಗ್ಗೆ ಚರ್ಚೆ ಮಾಡುವುದೇ ಒಂದು ಅವೈಜ್ಞಾನಿಕ. ಸಂವಿಧಾನ ವಿರೋಧಿ ಸಹ ಹೌದು. ಎಷ್ಟು ಜನ ಅಪೇಕ್ಷ ಬ್ಯಾಂಕ್ ನಲ್ಲಿ ಇದಾರೆ..? ಪ್ರತಿಯೊಂದು ಕಡೆ ಮೀಸಲಾತಿ ಬಗ್ಗೆ ಚರ್ಚೆ ಆಗ್ತಿದೆ. ಸಹಕಾರಿಯಲ್ಲಿ ಮೀಸಲಾತಿಯೇ ಬೇಡ ಅಂದರೆ ಹೇಗೆ..? ಎಲ್ಲರನ್ನೂ ಒಳಗೊಂಡು ಹೋಗುವುದೇ ಜನತಂತ್ರವಾದ ಎಂದು ಮನಮೋಹನ್ ಸಿಂಗ್ ಹೇಳಿದ್ರು .ಗದಗ ನಲ್ಲಿ ಸಹಕಾರಿ ಬ್ಯಾಂಕ್ ಶುರುವಾಗಿತ್ತು. ಇಂದು ಇಡೀ ಜಗತ್ತಿನಲ್ಲಿ ಸಹಕಾರಿ ಬ್ಯಾಂಕ್ ವಿಸ್ತಾರ ಆಗಿದೆ. ಸಹಕಾರಕ್ಕೆ ಸರ್ಕಾರದ ಕಾನೂನು ಲೇಪನ ಕೊಟ್ಟಿದ್ದೇವೆ. ಮೀಸಲಾತಿ ಸಹಕಾರಿ ಬ್ಯಾಂಕ್ ವಿಧೇಯಕದಲ್ಲಿ ಇರಲೇಬೇಕು/ ಜಾತ್ಯಾತೀತ ಶಕ್ತಿ ಸೇರಿದಂತೆ ಎಲ್ಲರೂ ಒಳಗೊಂಡು ಹೋಗಬೇಕು. ಸಹಕಾರಿ ವಲಯದಲ್ಲಿ ಕಾನೂನು ಸ್ವಲ್ಪ ಜಾಲು ಜಾಲಾಗಿದೆ. ಸಹಕಾರಿ ವಲಯ ಇಲ್ಲ ಅಂದರೆ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ. ರಾಜಣ್ಣ ಅವರಿಗೆ ಏನು ಹೇಳಿಕೊಡುವ ಅವಶ್ಯಕತೆ ಇಲ್ಲ. ನಾನು ಸಹ ಸಹಕಾರಿ ಇಲಾಖೆ‌ ಮಂತ್ರಿ ಆಗಿದ್ದೆ. ರಾಜೀವ್ ಗಾಂಧಿ ಅವರು ಆವತ್ತೇ 50% ಮಹಿಳೆಯರಿಗೆ ಮೀಸಲಾತಿ ತಂದಿದ್ದರು. ಸಾಲ ಕೊಡುವುದರಲ್ಲಿ ಮೀಸಲಾತಿ ಇರಬೇಕು. ನಮ್ಮ ಸಹಕಾರಿ ವಲಯ ಬಲ ಆಗಲು ಮೀಸಲಾತಿ ಕಡ್ಡಾಯ ಆಗಬೇಕು ಎಂದರು.

1710 ಕೋಟಿ ರೂ. ಅವ್ಯವಹಾರ

ಈಗಿನ ವಿಧೇಯಕದಲ್ಲಿ ಮೀಸಲಾತಿ ತಂದಿಲ್ಲ. ಕೆಲ ಸದಸ್ಯರು ಕನ್‌ಫ್ಯೂಸ್ ಮಾಡಿಕೊಂಡು ಮಾತಾಡಿದ್ದಾರೆ ಪರಿಶೀಲನಾ ಸಮಿತಿಗೆ ಹಾಕಿ ಅಂತ ಹೇಳಿದ್ದಾರೆ. ಸೌಹಾರ್ದ ಸೊಸೈಟಿಯಲ್ಲಿ ವಾಸ್ತವಾಂಶ ಏನಾದ್ರೂ ಹೇಳಿದರೆ ನಾಳೆ ಬೆಳಗ್ಗೆನೇ ಠೇವಣಿದಾರರು ಕ್ಯೂನಲ್ಲಿ ನಿಂತು ಬಿಡುತ್ತಾರೆ. 1710 ಕೋಟಿ ರೂ. ಅವ್ಯವಹಾರ ಆಗಿದೆ. ಸೌಹಾರ್ದ ‌ಒಂದರಲ್ಲೇ ಇಷ್ಟು ಆಗಿದೆ. ಅದಕ್ಕೆ ನಾನು ಜಾಸ್ತಿ ಏನೂ ಹೇಳೋಕೆ ಆಗಲ್ಲ. ಅದೂ ಕೂಡ ಬೆಂಗಳೂರಲ್ಲಿ. ಬೆಂಗಳೂರಿನಲ್ಲಿ ಹೆಚ್ಚು ಬಡ್ಡಿ ಕೊಡುತ್ತಾರೆ ಎಂದು ಬೆಂಗಳೂರಲ್ಲಿ ಠೇವಣಿ ಇಡ್ತಾರೆ. 12% 13% ಡೆಪಾಸಿಟ್ ತಗೊಂಡ್ರೆ ಇವರ ಠೇವಣಿ ವಾಪಸ್ ಹೇಗೆ ಕೊಡುತ್ತಾರೆ ಎಂದು ಗೊತ್ತಿಲ್ಲ. ನನ್ನ ಬಳಿ ಒಂದು‌ ಲಿಸ್ಟೇ ಇದೆ, ಅದೆಲ್ಲಾ ಹೇಳಿದರೆ ಸರಿ ಹೋಗಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.​

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!