ಪ್ರಜ್ವಲ್​ ರೇವಣ್ಣಗೆ ನ್ಯಾಯಾಂಗ ಬಂಧನ, 14 ದಿನ ಪರಪ್ಪನ ಅಗ್ರಹಾರ ಜೈಲೇ ಗತಿ

|

Updated on: Jun 10, 2024 | 4:05 PM

Prajwal revanna Sexual Harassment case: ಹಾಸನ ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲವು ಪ್ರಜ್ವಲ್ ರೇವಣ್ಣಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇಷ್ಟು ದಿನ ಎಸ್​ಐಟಿ ಕಸ್ಟಡಿಯಲ್ಲಿ ಪ್ರಜ್ವಲ್​ ರೇವಣ್ಣ ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ಹೋಗಲಿದ್ದಾರೆ.

ಪ್ರಜ್ವಲ್​ ರೇವಣ್ಣಗೆ ನ್ಯಾಯಾಂಗ ಬಂಧನ, 14 ದಿನ ಪರಪ್ಪನ ಅಗ್ರಹಾರ ಜೈಲೇ ಗತಿ
ಪ್ರಜ್ವಲ್ ರೇವಣ್ಣ
Follow us on

ಬೆಂಗಳೂರು, (ಜೂನ್ 10): ಲೈಂಗಿಕ ದೌರ್ಜುನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ. ಇಂದು(ಜೂನ್​ 10) ಎಸ್​ಐಟಿ ಕಸ್ಟಡಿ ಅಂತ್ಯವಾಗಿದ್ದರಿಂದ ಪ್ರಜ್ವಲ್​ ರೇವಣ್ಣನನ್ನು ಬೆಂಗಳೂರಿನ 42 ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಇದೀಗ ಕೋರ್ಟ್​ ಪ್ರಜ್ವಲ್​ಗೆ ಜೂನ್ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಈ ಮೂಲಕ ಇಷ್ಟು ದಿನ ಎಸ್​ಐಟಿ ಕಸ್ಟಡಿಯಲ್ಲಿದ್ದ ಪ್ರಜ್ವಲ್​ ರೇವಣ್ಣಗೆ ಇಂದಿನಿಂದ ಪರಪ್ಪನ ಅಗ್ರಹಾರ ಜೈಲೇ ಗತಿ.

ಬಸವನಗುಡಿ ಮನೆಯಲ್ಲಿ ಮಹಜರು

ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ SIT ತನಿಖಾ ತಂಡ ಇಂದು ಬಸವನಗುಡಿ ಮನೆಯಲ್ಲಿ ಮಹತ್ವದ ಸ್ಥಳ ಮಹಜರು ಮಾಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ಮಾಡಿರುವ ಸಂತ್ರಸ್ಥೆ ಹೇಳಿಕೆ ಮೇರೆಗೆ ಎಸ್‌ಐಟಿ ಅಧಿಕಾರಿಗಳು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಬಸವನಗುಡಿ ಮನೆಯಲ್ಲಿ ಮಹಜರು ನಡೆಸುವಾಗ ಎಸ್ಐಟಿ ತಂಡ ಕೆಲ ವಸ್ತುಗಳನ್ನು ಎವಿಡೆನ್ಸ್ ಆಗಿ ಪರಿಗಣಿಸಿದೆ. ಮಹಜರು ಪ್ರಕ್ರಿಯೆ ಮೂಲಕ ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕಲೆ ಹಾಕಲಾಗಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ದಂಧೆ, ಕಣ್ಮುಚ್ಚಿ ಕುಳಿತಿದೆಯಾ ಎಸ್​ಐಟಿ

ಹೆಚ್‌.ಡಿ ರೇವಣ್ಣ ಅವರ ಬಸವನಗುಡಿ ಮನೆಗೆ ಕಂಪ್ಯೂಟರ್ ಸಮೇತ ಅಧಿಕಾರಿಗಳು ಆಗಮಿಸಿದ್ದರು. ಸ್ಥಳ ಮಹಜರು ಮಾಡಿದ ಬಳಿಕ ಆರೋಪಿಯ ಹೇಳಿಕೆಯನ್ನು ಇದೇ ಸಿಸ್ಟಮ್‌ನಲ್ಲಿ ಟೈಪಿಂಗ್ ಮೂಲಕ ಎಸ್‌ಐಟಿ ತಂಡ ದಾಖಲಿಸಿಕೊಂಡಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ಎಲ್ಲೂ ಪ್ರಜ್ವಲ್ ಮುಖ ಕಾಣಿಸ್ತಿಲ್ಲ. ಹೀಗಾಗಿ ಮನೆಯ ಕೆಲ ಜಾಗಗಳನ್ನ ಎವಿಡೆನ್ಸ್ ಆಗಿ ಅಧಿಕಾರಿಗಳು ಪರಿಗಣಿಸಿದ್ದಾರೆ. ಸಂತ್ರಸ್ಥೆ ದೂರಿನಲ್ಲಿ ಉಲ್ಲೇಖ ಮಾಡಿರುವ ಜಾಗ, ಅಶ್ಲೀಲ ವಿಡಿಯೋದಲ್ಲಿರೋ ಜಾಗಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಸಂತ್ರಸ್ಥೆ ನೀಡಿರುವ ದೂರಿನ ಮೇರೆೆಗೆ ಈ ಸ್ಥಳ ಮಹಜರು ಪ್ರಕ್ರಿಯೆ ನಡೆದಿದೆ. ಅಶ್ಲೀಲ ವಿಡಿಯೋದಲ್ಲಿರುವ ಜಾಗಕ್ಕೂ ಬಸವನಗುಡಿ ಮನೆಯಲ್ಲಿರೋ ಜಾಗಕ್ಕೂ ತಾಳೆ ಆಗ್ತಿದೆಯಾ ಎಂದು ಪರಿಶೀಲನೆ ನಡೆಸಲಾಗಿದೆ.

ರಾಜ್ಯದ ಮತ್ತಷ್ಟುವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Mon, 10 June 24