AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್: ಪರ ಮತ್ತು ವಿರೋಧಗಳೇನು? ಇಲ್ಲಿದೆ ವಾಸ್ತವ ಮಾಹಿತಿ

Sharavathi Pumped Storage Project, key points to remember: ವಿದ್ಯುತ್ ಉತ್ಪಾದನೆಯಲ್ಲಿ ದೇಶದ ಗಮನ ಸೆಳೆದಿರುವ ಉತ್ತರ ಕನ್ನಡ ಜಿಲ್ಲೆ, ಈಗ ಇಂಧನ ಇಲಾಖೆಯಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲು ಮುಂದಾಗಿದೆ. ರಾಜ್ಯದ ಮೊದಲ ಪಂಪ್ಡ್ ಸ್ಟೋರೆಜ್ ಪ್ರಾಜಕ್ಟ್​ಗೆ ಶರಾವತಿ ಒಡಲಿನಲ್ಲಿ ಸಿದ್ಧತೆ ನಡೆದಿದೆ. ಮಲೆನಾಡಿನ ಸೂಕ್ಷ್ಮ ಪರಿಸರದ ಮಧ್ಯೆ ಯೋಜನೆ ನಡೆಯಲಿರುವುದರಿಂದ ಎಂದಿನಂತೆ ಹಲವು ರೀತಿಯ ಆತಂಕಗಳು ಮತ್ತು ವಿರೋಧಗಳು ವ್ಯಕ್ತವಾಗಿವೆ. ಈ ಬಗ್ಗೆ ಅಗತ್ಯ ಮಾಹಿತಿ ಇಲ್ಲಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್: ಪರ ಮತ್ತು ವಿರೋಧಗಳೇನು? ಇಲ್ಲಿದೆ ವಾಸ್ತವ ಮಾಹಿತಿ
ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 15, 2025 | 4:02 PM

Share

Sharavati Pumped Storage Project: ಇವತ್ತಿನ ಅತ್ಯಂತ ಮೂಲಭೂತ ಸೌಕರ್ಯಗಳಲ್ಲಿ ವಿದ್ಯುತ್ ಕೂಡ ಒಂದು. ಈಗ ಎಲೆಕ್ಟ್ರಿಕ್ ವಾಹನ, ಡಾಟಾ ಸೆಂಟರ್​ಗಳು ಇತ್ಯಾದಿ ಅತ್ಯಾಧುನಿಕ ಉಪಕರಣಗಳಿಗೆ ಬಹಳ ವಿದ್ಯುತ್ ಅಗತ್ಯ ಇದೆ. ವಿದ್ಯುತ್ ವಿತರಣೆಯೂ ಬಹಳ ದೊಡ್ಡ ಸವಾಲಿನ ಕೆಲಸ. ಸರಿಯಾದ ರೀತಿಯ ವಿದ್ಯುತ್ ಸಂಗ್ರಹ ವ್ಯವಸ್ಥೆ ಬೇಕು. ಈ ನಿಟ್ಟಿನಲ್ಲಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಅಥವಾ ಪಿಎಸ್​ಪಿ ಬಹಳ ಮುಖ್ಯ. ಸದ್ಯ ವಿವಾದದ ಕೇಂದ್ರ ಬಿಂದುವಾಗಿರುವ ಶರಾವತಿ ಪಿಎಸ್​ಪಿಯೂ (Sharavathi Pumped Storage Project) ಇಂಥ ಯೋಜನೆಗಳಲ್ಲಿ ಒಂದು. ಕರ್ನಾಟಕಕ್ಕೆ (Karnataka) ಇದು ಮೊದಲ ಪಿಎಸ್​ಪಿ ಎಂಬುದು ಗಮನಾರ್ಹ. ಮಲೆನಾಡಿನ ಸೂಕ್ಷ್ಮ ಪರಿಸರದಲ್ಲಿ ಈ ಯೋಜನೆ ಕೈಗೊಳ್ಳುವ ಉದ್ದೇಶ ಇರುವುದರಿಂದ ಸಹಜವಾಗಿಯೇ ವಿವಿಧ ರೀತಿಯ ಆತಂಕಗಳು, ವಿರೋಧಗಳು ವ್ಯಕ್ತವಾಗಿವೆ. ಆದರೆ, ಈ ಯೋಜನೆ ಆತಂಕಪಡುವಷ್ಟು ಸಮಸ್ಯೆಯಾಗುತ್ತದಾ?  ಇಲ್ಲಿದೆ ಒಂದಷ್ಟು ವಾಸ್ತವಿಕ ಅಂಶಗಳು.

ಹೇಗಿದೆ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್?

ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿ 10,000 ಕೋಟಿ ರೂ ವೆಚ್ಚದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಕೈಗೊಳ್ಳಲಾಗುತ್ತಿದೆ. ಶರಾವತಿ ನದಿಗೆ ಅಡ್ಡಲಾಗಿ ತಲಕಳಲೆ ಡ್ಯಾಮ್ ಇದೆ. ಇಲ್ಲಿ 0.51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇದೆ. ಹಾಗೆಯೇ, ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯ ಇದೆ. ಇಲ್ಲಿ ಹೆಚ್ಚುವರಿಯಾಗುವ ವಿದ್ಯುತ್ ಅನ್ನು ಬಳಸಿಕೊಂಡು 0.51 ಟಿಎಂಸಿ ನೀರನ್ನು ಎತ್ತರ ಪ್ರದೇಶದಲ್ಲಿರುವ ತಲಕಳಲೆ ಡ್ಯಾಮ್​ಗೆ ಹರಿಯಿಸಲಾಗುತ್ತದೆ. ಗೇರುಸೊಪ್ಪದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಆದ ಸಂದರ್ಭದಲ್ಲಿ ತಲಕಳಲೆ ಡ್ಯಾಮ್​ನಿಂದ ನೀರನ್ನು ಗೇರುಸೊಪ್ಪ ಜಲಾಶಯಕ್ಕೆ ಹರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಗೇರುಸೊಪ್ಪದಿಂದ ತಲಕಳಲೆಗೆ ನೀರು ಹರಿಸಲು 2,500 ಮೆಗಾವ್ಯಾಟ್ ವಿದ್ಯುತ್ ಬೇಕಾಗುತ್ತದೆ. ವಾಪಸ್ ಹರಿಸಿದಾಗ 2,000 ಮೆ.ವ್ಯಾ. ವಿದ್ಯುತ್ ಶಕ್ತಿ ತಯಾರಾಗುತ್ತದೆ. ಇಲ್ಲಿ ವಿದ್ಯುತ್ ಸಂಗ್ರಹ ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂಬುದು ಗಮನಾರ್ಹ.

ಇದನ್ನೂ ಓದಿ: ತಮ್ಮ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿಸಲು ಮುಂದಾದ ಸಿದ್ದರಾಮಯ್ಯ

ಶರಾವತಿ ಪಿಎಸ್​ಪಿಯಿಂದ ಪರಿಸರಕ್ಕೆ ಹಾನಿಯಾಗುತ್ತದಾ?

ಈ ಎರಡು ಜಲಾಶಯಗಳ ನಡುವೆ ನೀರು ಹರಿಯಲು ಕೊಳವೆಗಳನ್ನು ನಿರ್ಮಿಸಲಾಗುತ್ತದೆ. ಸುರಂಗ ಮೂಲಕ ಈ ಕೊಳವೆಗಳನ್ನು ಅಳವಡಿಸಲಾಗುತ್ತದೆ. ಈ ವೇಳೆ ಮಲೆನಾಡಿನ ಸೂಕ್ಷ್ಮ ಪರಿಸರ ಹಾನಿಯಾಗುತ್ತದೆ ಎನ್ನುವ ಭೀತಿ ಇದೆಯಾದರೂ ಆ ವಾದಕ್ಕೆ ಪುಷ್ಟಿ ಕೊಡುವಂತಹ ಅಂಶಗಳು ಇಲ್ಲ. ಈ ಯೋಜನೆಯಲ್ಲಿ ಹನನವಾಗುವ ಮರಗಳ ಸಂಖ್ಯೆ ಸುಮಾರು 7,000 ಇರಬಹುದು. ಕಾಲಾನುಕ್ರಮದಲ್ಲಿ ಮರಗಳನ್ನು ಇಲ್ಲಿ ಹೆಚ್ಚಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ.

ಶರಾವತಿ ಪಿಎಸ್​ಪಿ ಯೋಜನೆ ಬಗ್ಗೆ:

ಸುರಂಗಗಳನ್ನು ಕೊರೆಯಲು ಸ್ಫೋಟಕಗಳನ್ನು ಬಳಸುವುದರಿಂದ ಕಾಡಿನ ಸೂಕ್ಷ್ಮ ಪರಿಸರ ಹಾಗೂ ವನ್ಯಜೀವಿಗಳಿಗೆ ಧಕ್ಕೆಯಾಗುತ್ತದೆ ಎನ್ನುವ ವಾದದಲ್ಲೂ ಹುರುಳಿಲ್ಲ. ಶರಾವತಿ ಪಿಎಸ್​ಪಿಯಲ್ಲಿ ನಿಯಂತ್ರಿತ ಸ್ಫೋಟದ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸುರಂಗ ನಿರ್ಮಾಣಕ್ಕೆ ಹಾರ್ಡ್ ರಾಕ್ ಅನ್ನು ಬಳಸುವುದರಿಂದ ಗುಡ್ಡ ಕುಸಿತದ ಸಾಧ್ಯತೆ ಇಲ್ಲ ಎಂಬುದು ವಾಸ್ತವ.

ನಾಲ್ಕು ದಶಕಗಳ ಹಿಂದೆ ಇಲ್ಲಿ ಭೂತಳದಲ್ಲಿ ವರಾಹಿ ವಿದ್ಯುತ್ ಯೋಜನೆ ಮಾಡಿದಾಗಲೂ ಮರಗಳನ್ನು ಕಡಿಯಲಾಗಿತ್ತು. ಇಲ್ಲಿಯವರೆಗೆ ಈ ಪ್ರದೇಶದಲ್ಲಿ ಗುಡ್ಡಕುಸಿತ ಸಂಭವಿಸಿದ್ದು ಬೆಳಕಿಗೆ ಬಂದಿಲ್ಲ. ಇಲ್ಲಿಯ ಪರಿಸರ ಮತ್ತೆ ಎಂದಿನಂತೆಯೇ ಇದೆ. ಹಾಗೆಯೇ, ಪ್ರಸ್ತುತ ಶರಾವತಿ ಯೋಜನೆಗೆ ನೀರು ಹರಿಸಲು ಸುರಂಗ ನಿರ್ಮಿಸುವುದರಿಂದ ಹೆಚ್ಚಿನ ಅರಣ್ಯ ಜಾಗವಾಗಲೀ, ಖಾಸಗಿ ಜಮೀನಾಗಾಲೀ ಬೇಕಾಗುವುದಿಲ್ಲ.

ಇದನ್ನೂ ಓದಿ: ಕರ್ನಾಟಕದ ಜನತೆಗೆ ಮತ್ತೆ ಕರೆಂಟ್ ಶಾಕ್: ವಿದ್ಯುತ್ ದರ ಏರಿಕೆಗೆ ಪ್ಲ್ಯಾನ್, ಎಷ್ಟು ಗೊತ್ತಾ?

ಸಿಂಗಳೀಕಗಳಿಗೆ ತೊಂದರೆಯಾಗುತ್ತದಾ?

ಗೇರುಸೊಪ್ಪ ಮತ್ತು ತಲಕಳಲೆ ನಡುವಿನ ಜಾಗದಲ್ಲಿ ಬಹಳ ಅಪರೂಪದ ಸಿಂಗಲೀಕ ಜಾತಿಯ ಕೋತಿ ಪ್ರಬೇಧಗಳಿವೆ. ವಿಶ್ವದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಿಂಗಳೀಕಗಳು ಇರುವುದು. ಅದರಲ್ಲೇ ಹೆಚ್ಚಿನ ಸಂಖ್ಯೆಯಷ್ಟು ಸಿಂಗಲೀಕಗಳಿಗೆ (Lion-tailed macaques) ಮಲೆನಾಡು ಆವಾಸಸ್ಥಾನವಾಗಿರುವುದು ವಿಶೇಷ. ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್​ನಿಂದ ಈ ಸಿಂಗಳೀಕಗಳಿಗೆ ಆಸರೆ ಇಲ್ಲದಂತಾಗುತ್ತದೆ ಎಂದು ಕೆಲವರು ವಾದಿಸುತ್ತಿದ್ಧಾರೆ. ಆದರೆ, ಅಧಿಕಾರಿಗಳು ಹೇಳುವ ಪ್ರಕಾರ, ಈ ರೀತಿಯ ಭಯ ಪಡುವ ಅವಶ್ಯಕತೆ ಇಲ್ಲ. ಹಿಂದೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಸಿಂಗಲೀಕಗಳಿಗೆ ತೊಂದರೆಯಾಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಸಿಂಗಳೀಕಗಳಿಗೆ ಸಂಚರಿಸಲು ಅನುಕೂಲವಾಗುವಂತಹ ಮೇಲ್ಸೇತುವೆ ನಿರ್ಮಾಣ ಇತ್ಯಾದಿಯ ವ್ಯವಸ್ಥೆ ಮಾಡಲಾಗಿತ್ತು. ಯೋಜನೆ ಪೂರ್ಣಗೊಳ್ಳುವವರೆಗೂ ಮಾತ್ರ ಸಿಂಗಳೀಕಗಳಿಗೆ ತೊಂದರೆಯಾಗಿತ್ತು. ಈಗ ಅವುಗಳ ಜೀವನ ಎಂದಿನಂತೆ ನಡೆಯುತ್ತಿದೆ. ಶರಾವತಿ ಪಿಎಸ್​ಪಿಯಲ್ಲೂ ಇದೇ ಮುಂಜಾಗ್ರತೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಸೂಚಿಸಿದೆ.

ಕೇಂದ್ರ ಸರ್ಕಾರದ ವಿದ್ಯುತ್ ಗುರಿ

ವಿದ್ಯುತ್ ಸಮತೋಲನ ಸಾಧಿಸಲು ವಿದ್ಯುತ್ ಸಂಗ್ರಹಣ ವ್ಯವಸ್ಥೆ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್​ಗಳು ಬಹಳ ಅಗತ್ಯ ಇವೆ. ವಿಶ್ವಾದ್ಯಂತ ವಿವಿಧ ಸರ್ಕಾರಗಳು ಪಿಎಸ್​ಪಿಗೆ ಆದ್ಯತೆ ನೀಡುತ್ತವೆ. ಕೇಂದ್ರ ಸರ್ಕಾರ ಕೂಡ 2032-34ರೊಳಗೆ 82,000 ಮೆಗಾವ್ಯಾಟ್ ಪಿಎಸ್​ಪಿ ನಿರ್ಮಿಸುವ ಗುರಿ ಇಟ್ಟಿದೆ. ಈ ನಿಟ್ಟಿನಲ್ಲಿ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಿಗೆ ನಿರ್ದಿಷ್ಟ ಪಿಎಸ್​ಪಿಗಳ ಗುರಿ ವರ್ಗಾಯಿಸಲಾಗಿದೆ. ಇದರಲ್ಲಿ ಕರ್ನಾಟಕದ ಶರಾವತಿ ಪಿಎಸ್​ಪಿಯೂ ಇದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Mon, 15 September 25

Follow Us
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ