AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಜೊತೆ ಸಹೋದರನ ಚಕ್ಕಂದ: ತೋಟಕ್ಕೆ ಕರೆದೊಯ್ದು ತಮ್ಮನನ್ನು ಅಣ್ಣನೇ ಕೊಂದ!

ತನ್ನ ಪತ್ನಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ತಮ್ಮನನ್ನು ಅಣ್ಣನೇ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ. ಪೊಲೀಸರು ಮಿಸ್ಸಿಂಗ್​​ ಕೇಸ್​​ ಬೆನ್ನತ್ತಿದ್ದ ವೇಳೆ ಪ್ರಕರಣಕ್ಕೆ ಬಿಗ್​​​ ಟ್ವಿಸ್ಟ್​​​ ಸಿಕ್ಕಿದ್ದು, ಸಹೋದರನ ಶವವನ್ನು ತೋಟದಲ್ಲಿ ಅಣ್ಣ ಹೂತಿಟ್ಟ ವಿಚಾರ ಗೊತ್ತಾಗಿದೆ. ಮಾಹಿತಿ ಆಧಾರದಲ್ಲಿ ಗುಂಡಿ ತೆಗೆದು ಪರಿಶೀಲಿಸಿದಾಗ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ.

ಪತ್ನಿ ಜೊತೆ ಸಹೋದರನ ಚಕ್ಕಂದ: ತೋಟಕ್ಕೆ ಕರೆದೊಯ್ದು ತಮ್ಮನನ್ನು ಅಣ್ಣನೇ ಕೊಂದ!
ಶವಕ್ಕಾಗಿ ತೋಟದಲ್ಲಿ ಶೋಧ
Basavaraj Yaraganavi
| Edited By: |

Updated on: Dec 17, 2025 | 12:41 PM

Share

ಶಿವಮೊಗ್ಗ, ಡಿಸೆಂಬರ್​​ 17: ಅತ್ತಿಗೆ ಜೊತೆಗಿನ ಅನೈತಿಕ ಸಂಬಂಧಕ್ಕೆ ವ್ಯಕ್ತಿಯೋರ್ವ ಅಣ್ಣನಿಂದಲೇ ಕೊಲೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜೇಡಿಗೆರೆ ಗ್ರಾಮದಲ್ಲಿ ನಡೆದಿದೆ. ರಾಮಚಂದ್ರ (28) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಸಹೋದರ ಮಾಲತೇಶನೇ ಆರೋಪಿಯಾಗಿದ್ದಾನೆ. ಮಿಸ್ಸಿಂಗ್​​ ಕೇಸ್​​ ಬೆನ್ನತ್ತಿ ತನಿಖೆ ನಡೆಸಿದ ಪೊಲೀಸರು ತಮ್ಮನನ್ನು ಕೊಂದು ಅಮಾಯಕನಂತೆ ನಟಿಸುತ್ತಿದ್ದ ಅಣ್ಣನ ಕಳ್ಳಾಟವನ್ನು ಕುಟುಂಬದ ಎದುರು ಬಹಿರಂಗಪಡಿಸಿದ್ದಾರೆ.

ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ರಾಮಚಂದ್ರ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆಗೆ ಮುಂದಾದಾಗ ಕೇಸ್​​ಗೆ ಬಿಗ್​​​ ಟ್ವಿಸ್ಟ್​​ ಸಿಕ್ಕಿದೆ. ಪತ್ನಿ ಜೊತೆಗಿನ ಅನೈತಿಕ ಸಂಬಂಧ ಕಾರಣ ರಾಮಚಂದ್ರನನ್ನು ಕೊಂದ ಮಾಲತೇಶ್​​, ಆತನನ್ನು ತೋಟದಲ್ಲಿ ಹೂತು ಹಾಕಿರೋದು ಗೊತ್ತಾಗಿದೆ. ಮಾಹಿತಿಯ ಆಧಾರದಲ್ಲಿ ತೋಟದಲ್ಲಿ ಗುಂಡಿ ತೆಗೆದು ಪರಿಶೀಲನೆ ನಡೆಸಿದಾಗ ರಾಮಚಂದ್ರನ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತೆಯ ಲವ್ ಕಾಟಕ್ಕೆ ಪೊಲೀಸ್ ಇನ್​ಸ್ಪೆಕ್ಟರೇ ಬೇಸ್ತು!

ಪಕ್ಕಾ ಪ್ಲ್ಯಾನ್​​ ಮಾಡಿ ಮರ್ಡರ್​​

ಹೆಂಡತಿ ಜೊತೆಗೆ ತಮ್ಮ ರಾಮಚಂದ್ರನ ಅಕ್ರಮ ಸಂಬಂಧ ವಿಷಯಕ್ಕೆ ಅಣ್ಣ ಮಾಲತೇಶ್​​ ಸಿಟ್ಟಾಗಿದ್ದ. ಹೀಗಾಗಿ ಆತನ ಕೊಲೆಗೆ ಪ್ಲ್ಯಾನ್​​ ಮಾಡಿದ್ದ ಈತ, ಬೇಗ ಮದುವೆಯಾಗಲೆಂದು ಪೂಜೆ ನೆಪದಲ್ಲಿ ಜೇಡಿಗೆರೆ ಬಳಿ ತಾನು ಕೆಲಸ ಮಾಡುತ್ತಿದ್ದ ತೋಟಕ್ಕೆ ರಾಮಚಂದ್ರನನ್ನು ಕೆರೆದುಕೊಂಡು ಹೋಗಿದ್ದ. ಪೂಜೆ ನೆಪದಲ್ಲಿ ತಮ್ಮನಿಗೆ ಸರಿಯಾಗಿ ಮದ್ಯ ಕುಡಿಸಿ, ನಂತರ ಕಂಬಕ್ಕೆ ಕಟ್ಟಿ ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಕೊಲೆಗೂ ಮೊದಲೇ ಶವ ಹೂತು ಹಾಕಲು ಗುಂಡಿ ತೋಡಿ ಇಟ್ಟಿದ್ದ. ಬಳಿಕ ಯಾರಿಗೂ ಗೊತ್ತಾಗದಂತೆ ಶವವನ್ನು ಗುಂಡಿಯಲ್ಲಿ ಹೂತು ಹಾಕಿದ್ದ. ರಾಮಚಂದ್ರ ನಾಪತ್ತೆ ಬಗ್ಗೆ ಕುಟುಂಬ ಆತಂಕದಲ್ಲಿದ್ದರೂ ತಾನು ಅಮಾಯಕ ಎಂಬ ರೀತಿ ಓಡಾಡಿಕೊಂಡಿದ್ದ. ಆದರೆ ಮೊಬೈಲ್​​ ಟವರ್​​ ಲೊಕೇಶನ್​​ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಕೊಲೆ ವಿಚಾರ ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.