ಶಿವಮೊಗ್ಗ, ಜು.26: ಇಲಿ ಜ್ವರ(Rat fever)ದಿಂದ ಬಳಲುತ್ತಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಂಕ್ಲಾಪುರ ಗ್ರಾಮದ ಯುವತಿ, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪಲ್ಲವಿ(21) ಮೃತ ರ್ದುದೈವಿ. ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ಪಲ್ಲವಿ ಅವರಿಗೆ ಜುಲೈ 9ರಂದು ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಹತ್ತಿರದ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಲವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಹೌದು, ಜ್ವರದ ತೀವ್ರತೆ ಹೆಚ್ಚಾದ ಹಿನ್ನಲೆ ಮೆಗ್ಗಾನ್ ಆಸ್ಪತ್ರೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಪಲ್ಲವಿಯನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿಯೇ ಜುಲೈ 23 ರಂದು ಯುವತಿ ಮೃತಪಟ್ಟಿದ್ದಾರೆ. ಇತ್ತ ಮನೆ ಮಗಳನ್ನು ಕಳೆದುಕೊಂಡು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು ಇದು ಶಿವಮೊಗ್ಗ ಜಿಲ್ಲೆಯ ಪ್ರಕರಣವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಯಾವುದೇ ಇಲಿ ಜ್ವರ ಪ್ರಕರಣಗಳು ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಇಲಿ-ಕಚ್ಚಿದ ಜ್ವರ (RBF) ಒಂದು ಝೂನೋಟಿಕ್ ಕಾಯಿಲೆಯಾಗಿದೆ. ಇದು ನೇರವಾಗಿ ಇಲಿಗಳು, ಜರ್ಬಿಲ್‌ಗಳು ಕಚ್ಚುವಿಕೆ ಅಥವಾ ಗೀರುಗಳಿಂದ ಮನುಷ್ಯರಿಗೆ ಹರಡಬಹುದು. ಇನ್ನು ಈ RBF ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಅಳಿಲುಗಳು, ಫೆರೆಟ್‌ಗಳು, ನಾಯಿಗಳು ಮತ್ತು ಹಂದಿಗಳಲ್ಲಿಯೂ ಕಂಡುಬಂದಿದೆ. ಹೀಗಾಗಿ ಆದಷ್ಟು ಎಚ್ಚರದಿಂದ ಇರುವುದು ಉಳಿತು. ಅದರಲ್ಲೂ ಮಳೆಗಾಲದಲ್ಲಿ ತುಸು ಹೆಚ್ಚು ಜಾಗರೂಕರಾಗಿರಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ