ವರದಿ ಸಲ್ಲಿಸಲು ವಿಳಂಬ; ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಬಂಧನಕ್ಕೆ ಕೋರ್ಟ್ ಆದೇಶ
ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದಲ್ಲಿ ಅಕ್ರಮವಾಗಿ ಕೆರೆ ಹೂಳು ತೆಗೆಯಲಾಗಿತ್ತು. ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ವರದಿ ಸಲ್ಲಿಸಲು ಶಿವಮೊಗ್ಗ ಜಿ.ಪಂ. ಸಿಇಒ ವಿಳಂಬ ಮಾಡಿದ ಹಿನ್ನೆಲೆ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ.
ಶಿವಮೊಗ್ಗ, ಜ.07: ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಬಂಧನಕ್ಕೆ ಕರ್ನಾಟಕ ಭೂಕಬಳಿಕೆ ನಿಷೇಧ ನ್ಯಾಯಾಲಯ ಆದೇಶ ನೀಡಿದೆ. ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದಲ್ಲಿ ಅಕ್ರಮವಾಗಿ ಕೆರೆ ಹೂಳು ತೆಗೆಯಲಾಗಿತ್ತು. ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ವರದಿ ಸಲ್ಲಿಸಲು ಶಿವಮೊಗ್ಗ ಜಿ.ಪಂ. ಸಿಇಒ ವಿಳಂಬ ಮಾಡಿದ ಹಿನ್ನೆಲೆ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ.
500 ಲೋಡ್ ಮಣ್ಣು ತೆಗೆಯಲು ಅನುಮತಿ ಪಡೆದು 15 ಸಾವಿರ ಲೋಡ್ ಮಣ್ಣು ಸಾಗಾಣೆ ಮಾಡಲಾದ ಆರೋಪ ಕೇಳಿ ಬಂದಿತ್ತು. ಖಾಸಗಿ ಲೇಔಟ್ ನಿರ್ಮಾಣಕ್ಕೆ ಮಣ್ಣು ಸಾಗಾಟ ಆರೋಪ ಕೇಳಿ ಬಂದಿತ್ತು. ಇದರಿಂದ ಸರಕಾರದ ಬೊಕ್ಕಸಕ್ಕೆ 71.45 ಲಕ್ಷ ರೂ. ನಷ್ಟ ಆಗಿದೆ. ಫೆ.16 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು. 25 ಸಾವಿರ ರೂ. ದಂಡ ಕಟ್ಟುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಬ್ಯಾಂಕ್ಗೆ ಸಾಲ ತೀರಿಸದ ಆರೋಪ: ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲು
ನೀರಿಗಾಗಿ ಶಿವಮೊಗ್ಗ ರೈತರ ಹೋರಾಟ
ಶಿವಮೊಗ್ಗದ ಮಲವಗೊಪ್ಪ (ಕಾಡಾ) ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಶಿವಮೊಗ್ಗ ಮತ್ತು ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ನಾಲ್ಕು ಜಿಲ್ಲೆಗಳಿಗೆ ಭದ್ರಾ ಡ್ಯಾಂ ನೀರು ಕುಡಿಯುವ ನೀರು ನೀರಿಗೆ ಪೂರೈಕೆ ಆಗುತ್ತದೆ. ಇದೇ ಡ್ಯಾಂ ನೀರು ಶಿವಮೊಗ್ಗ ಮತ್ತು ದಾವಣಗೆರೆಯ ರೈತರಿಗೆ ನೀರು ಪೂರೈಕೆಯಾಗುತ್ತದೆ. ಈ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ಭದ್ರಾ ಎಡ ಮತ್ತು ಬಡ ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭತ್ತವನ್ನು ಬೆಳೆಯದಂತೆ ಈಗಾಗಲೇ ಕಾಡಾ ಸೂಚನೆ ನೀಡಿದೆ. ಇನ್ನೂ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸಾವಿರಾರು ಎಕೆರೆ ಅಡಿಕೆ ತೋಟಗಳಿವೆ. ಸದ್ಯ ನೀರು ಇಲ್ಲದೇ ಅಡಿಕೆ ಬೆಳೆ ಒಣಗುತ್ತಿವೆ. ಈ ಹಿನ್ನಲೆಯಲ್ಲಿ ಎರಡು ನಾಲೆಗಳಿಗೆ ನೀರಬೀಡಬೇಕೆಂದು ಶಿವಮೊಗ್ಗ ರೈತರು ಕಳೆದ ಒಂದು ವಾರದಿಂದ ಹೋರಾಟಕ್ಕೆ ಮುಂದಾಗಿದ್ದಾರೆ.
ಶಿವಮೊಗ್ಗ ತಾಲೂಕಿನ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಎರಡು ಜಿಲ್ಲೆಯ ಅಧಿಕಾರಿಗಳು ಮತ್ತು ಶಾಸಕರು, ರೈತ ಮುಖಂಡರ ಜೊತೆ ಸಭೆ ನಡೆಸುತ್ತಿದ್ದರು. ಈ ನಡುವೆ ಶಿವಮೊಗ್ಗ ಭದ್ರಾವತಿ ಹೈವೇ ತಡೆದು ರೈತರು ತತಕ್ಷಣ ನೀರು ಬಿಡಬೇಕೆಂದು ಹೋರಾಟ ನಡೆಸಿದರು. ಹೈವೇ ತಡೆದು ಪ್ರತಿಭಟನೆ ನಡೆಸಿದರು. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ವಿಚಾರ ನೀರಿನ ಹಂಚಿಕೆ ಕುರಿತು ಭದ್ರಾ ಅಚ್ಚುಕಟ್ಟು ಸಮಿತಿ ಸಭೆಯಲ್ಲಿ ತೀರ್ಮಾನ ಆಗಿದೆ. ಎಡದಂಡೆಗೆ ಜ.10 ರಿಂದ 5 ಬಾರಿ ನೀರು ನೀಡಲು ಹಾಗೂ ಬಲದಂಡೆಗೆ 20 ರಿಂದ ನೀರು ಬಿಡುಗಡೆ ನಿರ್ಧಾರವಾಗಿದೆ. ರೈತರು ಭತ್ತ ಬೆಳೆಯಬಾರದು ಎನ್ನುವ ತೀರ್ಮಾನ ಆಗಿದೆ.
13 ಸಾವಿರ ಹೆಕ್ಟೇರ್ ಅಡಕೆ ತೋಟಕ್ಕೆ ನೀರು ಪೂರೈಕೆಯಾಗಬೇಕಿದೆ. ನೀರು ಅಗತ್ಯ ಇರುವ ಹಿನ್ನಲೆಯಲ್ಲಿ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ಏತ ನೀರಾವರಿ ಮೂಲಕ ನೀರು ಹರಿಸಬೇಕೆಂದು ಮುಖ್ಯಮಂತ್ರಿಗೆ ರಾಜ್ಯ ರೈತ ಸಂಘದ ನಾಯಕ ಕೆ.ಟಿ.ಗಂಗಾಧರ್ ಒತ್ತಾಯಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ