ಪಿಡಿಒ ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಕಳ್ಳ ಅಂದರ್: ಖದೀಮನ ಬಳಿ ಸಿಕ್ಕ ಚಿನ್ನ, ನಗದು ನೋಡಿ ಪೊಲೀಸರೇ ಶಾಕ್!

ಶಿವಮೊಗ್ಗದ ಕೋಟೆ ಪೊಲೀಸರು ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ. ಆ ಮೂಲಕ ಇತ್ತೀಚೆಗೆ ಪಿಡಿಒ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿದ್ದು, ಬಂಧಿತನಿಂದ 1 ಕೋಟಿ 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಸೇರಿದಂತೆ 20 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ. ಎಸ್‌ಪಿ ಬಿ.ನಿಖಿಲ್ ನಿರ್ದೇಶನದಲ್ಲಿ ತಂಡ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದೆ.

ಪಿಡಿಒ ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಕಳ್ಳ ಅಂದರ್: ಖದೀಮನ ಬಳಿ ಸಿಕ್ಕ ಚಿನ್ನ, ನಗದು ನೋಡಿ ಪೊಲೀಸರೇ ಶಾಕ್!
ಮೊಹಮ್ಮದ್ ರಫೀಕ್ ಅಲಿಯಾಸ್ ಕರಿಯ
Image Credit source: tv9 kannada
Edited By:

Updated on: Oct 07, 2026 | 9:44 PM

ಮುಖ್ಯಾಂಶಗಳು

  • ಕುಖ್ಯಾತ ಕಳ್ಳನನ್ನು ಬಂಧಿಸಿ 1 ಕೋಟಿ ಮೌಲ್ಯದ ನಗನಾಣ್ಯ ಜಪ್ತಿ
  • ಕುಖ್ಯಾತ ಕಳ್ಳ ಮೊಹಮ್ಮದ್ ರಫೀಕ್ ಅಲಿಯಾಸ್ ಕರಿಯ ಬಂಧನ
  • ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳತನ ಕೇಸ್​ ಭೇದಿಸಿದ ಖಾಕಿ

ಶಿವಮೊಗ್ಗ, ಅಕ್ಟೋಬರ್​​ 07: ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ. ಮೊಹಮ್ಮದ್ ರಫೀಕ್ ಅಲಿಯಾಸ್ ಕರಿಯ ಬಂಧಿತ ಕುಖ್ಯಾತ ಕಳ್ಳ. ಆತನನ್ನು ಬಂಧಿಸುವುದು ಮಾತ್ರವಲ್ಲದೆ 1 ಕೋಟಿ ರೂ ಮೌಲ್ಯದ ನಗನಾಣ್ಯವನ್ನು ಜಪ್ತಿ ಮಾಡಿದ್ದಾರೆ. ಆ ಮೂಲಕ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭಾರೀ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ನಡೆದಿದ್ದೇನು?

ಹಗರಿಬೊಮ್ಮನಹಳ್ಳಿ ಮೂಲದ ಕುಖ್ಯಾತ ಕಳ್ಳ ಮೊಹಮ್ಮದ್ ರಫೀಕ್ ಅಲಿಯಾಸ್​ ಕರಿಯ ಇತ್ತೀಚೆಗೆ ವಿದ್ಯಾನಗರದಲ್ಲಿರುವ ಪಿಡಿಒ ದಂಪತಿ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಸಂಬಂಧ ಶಿವಮೊಗ್ಗದ ಕೋಟೆ ಪೊಲೀಸ್​​ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯಡಿ ಕ್ರೈಂ ನಂ. 175/2026ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

1.02 ಕೋಟಿ ರೂ ಮೌಲ್ಯದ ನಗನಾಣ್ಯ ವಶಕ್ಕೆ

ಸದ್ಯ ಬಂಧಿತ ಕುಖ್ಯಾತ ಕಳ್ಳ ಮೊಹಮ್ಮದ್ ರಫೀಕ್ ಅಲಿಯಾಸ್ ಕರಿಯನಿಂದ ಪೊಲೀಸರು ಬರೋಬ್ಬರಿ 1,02,77,435 ರೂ. ಮೌಲ್ಯದ ಕಳವು ಮಾಲನ್ನು ಜಪ್ತಿ ಮಾಡಿದ್ದಾರೆ. ಇದರಲ್ಲಿ 80.92 ಲಕ್ಷ ರೂ. ಮೌಲ್ಯದ 558.099 ಗ್ರಾಂ ಚಿನ್ನಾಭರಣಗಳು, 20 ಲಕ್ಷ ರೂ ನಗದು ಮತ್ತು 1.85 ಲಕ್ಷ ರೂ. ಮೌಲ್ಯದ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ವಿಶೇಷ ತಂಡದಿಂ ಯಶಸ್ವಿ ಕಾರ್ಯಾಚರಣೆ

​ಶಿವಮೊಗ್ಗ ಜಿಲ್ಲೆ ಎಸ್‌ಪಿ ನಿಖಿಲ್ .ಬಿ ನಿರ್ದೇಶನದಂತೆ ತನಿಖೆಗಾಗಿ ಪ್ರತ್ಯೇಕ ತಂಡವನ್ನು ರಚಿಸಲಾಗಿತ್ತು. ಹೆಚ್ಚುವರಿ ಪೊಲೀಸ್​​ ವರಿಷ್ಠಾಧಿಕಾರಿ ಕಾರಿಯಪ್ಪ ಹಾಗೂ ಡಿವೈಎಸ್‌ಪಿ ಶೀಲವಂತ ಹೊಸಮನಿ ಅವರ ನೇತೃತ್ವದಲ್ಲಿ, ಕೋಟೆ ಠಾಣೆ ಪೊಲೀಸ್​​ ಇನ್‌ಸ್ಪೆಕ್ಟರ್ ಹರೀಶ ಕೆ. ಪಟೇಲ್, ತಾಂತ್ರಿಕ ವಿಭಾಗ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಯಶಸ್ವಿ ಕಾರ್ಯಚರಣೆ ನಡೆಸುವ ಮೂಲಕ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ: ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ: ಬಹುದೊಡ್ಡ ಹಗರಣ ಆರೋಪ ಮಾಡಿದ ಜ್ಞಾನೇಂದ್ರ

ಇನ್ನು ​ಯಶಸ್ವಿ ಕಾರ್ಯಾಚರಣೆ ಮೂಲಕ ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ ಜಿಲ್ಲೆ ಎಸ್‌ಪಿ ನಿಖಿಲ್ .ಬಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Basavaraj Yaraganavi
Loading...
Unable to load recommendations.
Follow Us