Shivamogga: ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ; ಮಾರ್ಚ್​​ 4ರವರೆಗೆ ನಿಷೇಧಾಜ್ಞೆ ಮುಂದುವರಿಕೆ

ಹರ್ಷ ಹತ್ಯೆ ಬಳಿಕ ಗಲಭೆ ಹಿನ್ನೆಲೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ, ಇದೀಗ ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ ನೀಡಿದ್ದಾರೆ.

Shivamogga: ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ; ಮಾರ್ಚ್​​ 4ರವರೆಗೆ ನಿಷೇಧಾಜ್ಞೆ ಮುಂದುವರಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Feb 27, 2022 | 10:30 PM

ಶಿವಮೊಗ್ಗ: ನಗರದಲ್ಲಿ ನಾಳೆಯಿಂದ (ಫೆಬ್ರವರಿ 28) ಶಾಲಾ- ಕಾಲೇಜು ಪುನಾರಂಭ ಆಗಲಿದೆ. ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಗಲಭೆ ಹಿನ್ನೆಲೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ, ಇದೀಗ ಸೋಮವಾರದಿಂದ ಶಾಲಾ ಕಾಲೇಜು ಪುನಾರಂಭ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ ನೀಡಿದ್ದಾರೆ. ಅದರಂತೆ ನಾಳೆಯಿಂದ ಶಾಲಾ ಕಾಲೇಜು ಮತ್ತೆ ಎಂದಿನಂತೆ ಮುಂದುವರಿಯಲಿದೆ.

ಅಲ್ಲದೆ, ಶಿವಮೊಗ್ಗ ನಗರದಲ್ಲಿ ಮತ್ತೆ ನಿಷೇಧಾಜ್ಞೆ ಮುಂದುವರಿಕೆ ಮಾಡಿ ಆದೇಶ ನೀಡಲಾಗಿದೆ. ಮಾರ್ಚ್​​ 4ರವರೆಗೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಬೆಳಗ್ಗೆ 6 ರಿಂದ ಸಂಜೆ 7ರ ವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಸಂಜೆ 7 ರಿಂದ ಬೆಳಗ್ಗೆ 6 ಗಂಟೆವರೆಗೆ ತುರ್ತು ಸೇವೆಗಷ್ಟೇ ಅನುಮತಿ ನೀಡಿ ಆದೇಶ ನೀಡಲಾಗಿದೆ.

ಈ ಮಧ್ಯೆ, ಇಂದು (ಫೆಬ್ರವರಿ 27) ಮೃತ ಬಜರಂಗದಳ ಕಾರ್ಯಕರ್ತ ಹರ್ಷ ನಿವಾಸಕ್ಕೆ ನಟ ಪ್ರಥಮ್ ಭೇಟಿ ನೀಡಿದ್ದಾರೆ. ಮೃತರ ಕುಟುಂಬಕ್ಕೆ ಪ್ರಥಮ್ ಸಾಂತ್ವನ ಹೇಳಿದ್ದಾರೆ. ಹರ್ಷನ ಕೊಲೆ ಪ್ರಕರಣದ ವಿಷಯ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ. ಈ ರೀತಿಯ ಘಟನೆ ಯಾವತ್ತೂ ಎಲ್ಲೂ ನಡೆಯಬಾರದು. ಈ ರೀತಿಯ ಘಟನೆ ನಡೆದಾಗ ಸಮಾಜ ನೊಂದ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತುಂಬಬೇಕು. ಘಟನೆ ನನಗೆ ತಡವಾಗಿ ತಿಳಿಯಿತು. ಈ ಹಿಂದೆಯೇ ಭೇಟಿ ಕೊಡಲು ಉದ್ದೇಶಿಸಿದೆ. ಆದರೆ ರಾಜಕೀಯ ಅಥವಾ ಚಿತ್ರರಂಗದ ಹಿನ್ನೆಲೆ ಕಾರಣಕ್ಕೆ ಆಗ ಬರಲಿಲ್ಲ ಎಂದು ಹೇಳಿದ್ದಾರೆ.

ಇದೀಗ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ಹರ್ಷನ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದೇನೆ. ಶಿವಮೊಗ್ಗಕ್ಕೆ ಭೇಟಿ ನೀಡುವ ಕುರಿತು ಚಿತ್ರ ನಟ ಧ್ರುವ ಸರ್ಜಾ ಅವರಿಗೆ ವಿಷಯ ತಿಳಿಸಿದೆ. ಅವರು ನೊಂದ ಕುಟುಂಬಕ್ಕೆ ನನ್ನಿಂದ ಏನಾದ್ರೂ ಸಹಾಯ ಆಗಬೇಕೆ ಎಂದು ಕೇಳಿದ್ದಲ್ಲದೇ 5 ಲಕ್ಷ ರೂಪಾಯಿಗಳ ನೆರವು ನೀಡಿದ್ದಾರೆ. ನಾನೂ ಕೂಡ ನನ್ನ ಕೈಲಾದ ನೆರವು ನೀಡಿದ್ದೇನೆ. ಅದೇ ರೀತಿ 2014ರ ಘಟನೆಯಲ್ಲಿ ಮೃತಪಟ್ಟ ಶಿವಮೊಗ್ಗದ ವಿಶ್ವನಾಥ ಶೆಟ್ಟಿ ಮನೆಗೂ ಭೇಟಿ ನೀಡಿ ಅವರಿಗೆ ನೆರವು ನೀಡಲು ಉದ್ದೇಶಿಸಿದ್ದೇನೆ. ಇಂತಹ ಘಟನೆಗಳು ಹರ್ಷನ ಸಾವಿನೊಂದಿಗೆ ಮುಕ್ತಾಯವಾಗಬೇಕು. ಇನ್ನೆಲ್ಲೋ ಘಟನೆ ಮರುಕಳಿಸಬಾರದು. ಘಟನೆಯಿಂದ ನೊಂದಿರುವ ಕುಟುಂಬಕ್ಕೆ ನೆರೆ ಹೊರೆಯವರು, ಸಮಾಜದ ವಿವಿಧ ವರ್ಗದ ಜನರು ನೆರವು ನೀಡಲು ಮಾನಸಿಕ ಸ್ಥೈರ್ಯ ತುಂಬಲು ಮುಂದೆ ಬರಬೇಕು ಎಂದು ಹೇಳಿದ್ದಾರೆ.

ಇತ್ತ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಠೋರ ಮುಸ್ಲಿಮರು ಕಾನೂನು ಪಾಲಿಸಲು ತಯಾರಿರಲಿ. ಮುಸ್ಲಿಮರು ಶರಿಯತ್ ಕಾನೂನು ಪಾಲಿಸಲು ತಯಾರಿರಲಿ. ಹರ್ಷ ಹತ್ಯೆಗೈದವರಿಗೆ ಶರಿಯತ್​ ಪ್ರಕಾರ ಶಿಕ್ಷೆ ನೀಡ್ತೀರಾ? ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸುತ್ತೀರಾ? ಕೊಲೆಗಡುಕರಿಗೆ ಶರಿಯತ್ ಕಾನೂನಿನಂತೆ ಶಿಕ್ಷೆ ನೀಡ್ತೀರಾ? ಕಠಿಣ ಶಿಕ್ಷೆ ಬೇಡ, ಹಿಜಾಬ್ ಬೇಕು ಅಂದ್ರೆ ಅದು ಆಗಲ್ಲ ಎಂದು ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಮನೆಗೆ ಭೇಟಿ ನೀಡಿದ ರೇಣುಕಾಚಾರ್ಯ ಎದುರು ದುಃಖ ತೋಡಿಕೊಂಡ ಮೃತ ಹರ್ಷನ ತಾಯಿ

ಇದನ್ನೂ ಓದಿ: ಶಿವಮೊಗ್ಗ ಎಸ್​ಪಿ ಟ್ರಾನ್ಸ್​ಫರ್ ಇಲ್ಲ, ಕಾನೂನು ಸುವ್ಯವಸ್ತೆಗೆ ಕಠಿಣ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

Published On - 5:27 pm, Sun, 27 February 22

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ