Illegal logging: ಅಕ್ರಮಕ್ಕೆ ಸಾಥ್ ಕೊಡದ ನೌಕರನಿಗೆ ಮಹಿಳಾ ಅರಣ್ಯಾಧಿಕಾರಿಯಿಂದ ಕಿರುಕುಳ, ವಿಡಿಯೋ ಮಾಡಿದ್ದ ಮೊಬೈಲ್ ಪೀಸ್ ಪೀಸ್!
ಶಿವಾನಂದ ಅರಣ್ಯ ಇಲಾಖೆಯ ಅಕ್ರಮಗಳನ್ನು ಬಹಿರಂಗ ಪಡಿಸಿದ ಬಳಿಕ ಈಗ ಆತನಿಗೆ ನಿರಂತರವಾಗಿ ಮಹಿಳಾ ಅರಣ್ಯಾಧಿಕಾರಿ ಟಾರ್ಚರ್ ಕೊಡುತ್ತಿದ್ದಾರೆ. ಈ ಮಹಿಳಾ ಅಧಿಕಾರಿಗೆ ಇತರೆ ಅರಣ್ಯ ಅಧಿಕಾರಿಗಳು ಸಾಥ್ ಕೊಡುತ್ತಿದ್ದಾರೆ. ಹೀಗಾಗಿ ಸದ್ಯ ನಿವೃತ್ತಿಯ ಅಂಚಿಯಲ್ಲಿರುವ ಶಿವಾನಂದಗೆ ದಿಕ್ಕೇ ತೋಚದಂತಾಗಿದೆ.
ಮಲೆನಾಡಿನಲ್ಲಿ ಅರಣ್ಯ ಸಂರಕ್ಷಣೆಯು ಒಂದು ದೊಡ್ಡ ಸವಾಲು. ನಿರಂತರವಾಗಿ ಅರಣ್ಯವು ಬೋಳಾಗುತ್ತಿದೆ. ಅರಣ್ಯಕ್ಕೆ ಕನ್ನ ಹಾಕಿ ಮರಗಳನ್ನು ಕಡಿದು ಅಕ್ರಮ ನಾಟಾ ದಂಧೆ ನಿರಂತರವಾಗಿ ನಡೆಯುತ್ತಿದೆ. ಸದ್ಯ ಅಕ್ರಮ ನಾಟಾ ದಂಧೆ ತಡೆಯಬೇಕಿದ್ದ ಅರಣ್ಯ ಅಧಿಕಾರಿಗಳು ಅಡ್ಡ ದಾರಿ ಹಿಡಿದಿದ್ದಾರೆ. ಅರಣ್ಯದಲ್ಲಿ ಸಾಗವಾನಿ ಅಕ್ರಮ ನಾಟಾದಲ್ಲಿ (Illegal logging) ಅರಣ್ಯ ಅಧಿಕಾರಿಗಳು ಶಾಮೀಲು ಆಗಿದ್ದಾರಾ? ಕುರಿತು ಒಂದು ಸ್ಥೂಲ ಚಿತ್ರಣ ಇಲ್ಲಿದೆ.. ಮಹಿಳಾ ಅರಣ್ಯಾಧಿಕಾರಿಯಿಂದ ದೌರ್ಜನ್ಯ.. ಅಕ್ರಮ ದಂಧೆ ಬಯಲು ಮಾಡಿದ ಸಿಬ್ಬಂದಿ.. ಸಿಬ್ಬಂದಿ ಮೊಬೈಲ್ ಪೀಸ್ ಪೀಸ್.. ನಿರಂತರವಾಗಿ ಸಿಬ್ಬಂದಿಗೆ ಟಾರ್ಚರ್ (Harassement).. ಮಹಿಳಾ ಅಧಿಕಾರಿಯ ದರ್ಪ… ಶಿವಮೊಗ್ಗ (Shivamogga) ತಾಲೂಕಿನ ಆಯನೂರು ಅರಣ್ಯ ವಲಯದಲ್ಲಿ ಶಿವಾನಂದ ಎನ್ನುವ ವ್ಯಕ್ತಿಯು ಕಳೆದ 36 ವರ್ಷಗಳಿಂದ ವಾಚರ್ ಆಗಿ (ಡಿ ದರ್ಜೆ ಸಿಬ್ಬಂದಿ Employee) ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಆಯನೂರಿನ ಆರ್ ಎಫ್ ಓ ಗೀತಾ ನಾಯ್ಕ್ (RFO Geetha Naik) ಅವರು ಶಿವಾನಂದಗೆ ಆಯನೂರು ಅರಣ್ಯ ಕಚೇರಿಗೆ ಬರಲು ಹೇಳುತ್ತಾರೆ. ಬಂದ ತಕ್ಷಣ ಶಿವಾನಂದ ನ ಮೊಬೈಲ್ ಒಡೆದು ಚೂರು ಚೂರು ಮಾಡುತ್ತಾರೆ.
ಬಳಿಕ ಶಿವಾನಂದಗೆ ಮಹಿಳಾ ಅಧಿಕಾರಿಯು ಹಿಗ್ಗಾಮುಗ್ಗಾ ಥಳಿಸಿದ್ದಾರಂತೆ. ಬೂಟ್ ನಿಂದ ಒದ್ದು, ಮುಖಕ್ಕೆ ಉಗಿದಿದ್ದಾರಂತೆ. ಈ ಅವಮಾನದಿಂದ ಶಿವಾನಂದ ತುಂಬಾ ನೊಂದಿಕೊಂಡಿದ್ದನು. ಪತ್ನಿಯು ಈ ಘಟನೆಯ ಕುರಿತು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಶಿವಾನಂದ ಮತ್ತು ಪತ್ನಿ ಛಾಯಾ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ ಕುರಿತು ದೂರು ನೀಡಿದ್ದರು. ಆದ್ರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಶಿವಾನಂದ ಮೇಲೆ ಕಳೆದ ಕೆಲವು ದಿನಗಳಿಂದ ನಿತಂತರವಾಗಿ ಅರಣ್ಯಾಧಿಕಾರಿ ಗೀತಾ ನಾಯ್ಕ್ ಮಾನಸಿಕ ಕಿರುಕುಳ ನೀಡುತ್ತಿದ್ದಾರಂತೆ.
ಅಷ್ಟಕ್ಕೂ ಶಿವಾನಂದ ಮೇಲೆ ಯಾಕೆ ಮಹಿಳಾ ಅಧಿಕಾರಿಯ ದೌರ್ಜನ್ಯ?
ಅರಣ್ಯಾಧಿಕಾರಿ ಗೀತಾ ನಾಯ್ಕ ಶಿವಮೊಗ್ಗ ತಾಲೂಕಿನ ದೊಡ್ಡಿಮಟ್ಟಿ ಕ್ಯಾಂಪ್ ನಲ್ಲಿ ಅಕ್ರಮ ಮರಳು ದಂಧೆ, ಅಕ್ರಮ ಮಣ್ಣು ದಂಧೆಯಲ್ಲಿ ತೊಡಗಿದ್ದಾರೆ. ಇನ್ನು ಆಯನೂರು ಅರಣ್ಯ ವಲಯದಲ್ಲಿ ಅಕ್ರಮ ಸಾಗಾವಾನಿ ನಾಟಾ ದಂಧೆಯಲ್ಲಿ ಗೀತಾ ನಾಯ್ಕ ಕೂಡಾ ಶಾಮೀಲು ಆಗಿದ್ದಾರೆ. ಅರಣ್ಯದಲ್ಲಿ ಅನೇಕ ಮರಗಳನ್ನು ಕಡಿದು ಸಾಗವಾನಿ ನಾಟವನ್ನು ಗೀತಾ ನಾಯ್ಕ್ ಮಾಡಿದ್ದಾರಂತೆ. ಈ ಅಕ್ರಮ ನಾಟಾ ಸಾಗಾಟದ ಫೋಟೋ ಶಿವಾನಂದ ಮೊಬೈಲ್ ನಲ್ಲಿ ಸೆರೆಹಿಡಿದ್ದನು. ಈತ ಅಕ್ರಮ ದಂಧೆ ಹೊರಗೆ ಹಾಕುವುದು ಗೊತ್ತಾಗುತ್ತಿದ್ದಂತೆ ಶಿವಾನಂದನನ್ನು ಕಚೇರಿಗೆ ಕರೆದು ಆತನ ಮೊಬೈಲ್ ಅನ್ನು ಪೀಸ್ ಪೀಸ್ ಮಾಡಿದ್ದಾರಂತೆ.
ಸ. ನಂ. 32 ಮತ್ತು 33ರ ಬಗರ್ ಹುಕಂ ಜಾಗದಲ್ಲಿ ಅಕ್ರಮವಾಗಿ ನೀರಿನ ಬೋರ್ ವೆಲ್ ಹಾಕಲು ಮಹಿಳಾ ಅಧಿಕಾರಿ ಲಂಚ ಪಡೆದಿದ್ದಾರಂತೆ. ಈ ಎಲ್ಲ ಸಂಗತಿಗಳನ್ನು ಸಂಬಂಧಪಟ್ಟ ಎಲ್ಲ ಹಿರಿಯ ಅರಣ್ಯ ಅಧಿಕಾರಿಗಳಿಗೆ ದೂರು ಶಿವಾನಂದ ನೀಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ತನಿಖೆ ಮಾಡದೇ ಮಹಿಳಾ ಅಧಿಕಾರಿಗೆ ಶ್ರೀರಕ್ಷೆ ನೀಡುತ್ತಿದ್ದಾರೆ ಎನ್ನುವುದು ಹಲ್ಲೆಗೊಳಗಾದ ಅರಣ್ಯ ಸಿಬ್ಬಂದಿ ಶಿವಾನಂದ ಮತ್ತು ಆತನ ಪತ್ನಿ ಛಾಯಾ ಗಂಭೀರ ಆರೋಪ ಮಾಡಿದ್ದಾರೆ.
ಅರಣ್ಯ ಅಧಿಕಾರಿಗಳು ಅರಣ್ಯ ಸಂಕ್ಷಣೆ ಮಾಡುವುದು ಬಿಟ್ಟು ಅಕ್ರಮ ದಂಧೆಗೆ ಮುಂದಾಗಿರುವ ಘಟನೆಯು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅರಣ್ಯದಲ್ಲಿರುವ ಮರಗಳನ್ನು ಕಡಿದು ಅದನ್ನು ಕೃಷಿ ಭೂಮಿಯನ್ನಾಗಿ ಮಾಡುವ ದಂಧೆಕೋರರ ಹಾವಳಿ ಮಲೆನಾಡಿನಲ್ಲಿ ಜಾಸ್ತಿಯಾಗಿದೆ. ಅರಣ್ಯ ಭೂಮಿ ಕಬಳಿಸಿ ಬಳಿಕ ಆ ಭೂಮಿ ತಮ್ಮದೇ ಎಂದೂ, ಅನೇಕ ವರ್ಷಗಳಂದ ಉಳುಮೆ ಮಾಡುತ್ತಿದ್ದೇವೆಂದು ದಾಖಲೆಗಳನ್ನು ಸೃಷ್ಟಿ ಮಾಡುತ್ತಾರೆ.
ಹಂತ ಹಂತವಾಗಿ ಇಂತಹ ಫಲವತ್ತಾದ ಅರಣ್ಯ ಭೂಮಿಯಲ್ಲಿ ಕೃಷಿ, ಅಡಿಕೆ, ಬಾಳೆ ತೋಟ ಮಾಡಿಕೊಳ್ಳುತ್ತಾರೆ. ಸದ್ಯ ಮಲೆನಾಡಿಯಲ್ಲಿ ಅರಣ್ಯ ಭೂಮಿ ಒತ್ತುವರಿ ಮತ್ತು ಅಕ್ರಮ ನಾಟಾ ದಂಧೆಯು ದೊಡ್ಡ ಸಮಸ್ಯೆ ಆಗಿದೆ. ಇಂತಹ ಎಲ್ಲ ಅಕ್ರಮಗಳನ್ನು ತಡೆದು ಅರಣ್ಯ ಭೂಮಿ ಮತ್ತು ಬೆಲೆಬಾಳುವ ಸಾಗವಾನಿ, ಶ್ರೀಗಂಧ, ಬೀಟೆ ಮುಂತಾದ ಮರಗಳನ್ನು ಉಳಿಸಬೇಕಿದೆ. ಇಂತಹ ಕೆಲಸ ಮಾಡಬೇಕಿದ್ದ ಆಯನೂರು ವಲಯ ಅರಣ್ಯಾಧಿಕಾರಿ ಗೀತಾ ನಾಯ್ಕ್ ಅವರು ಅಕ್ರಮಗಳಿಗೆ ಕೈಜೋಡಿದ್ದಾರೆ ಎನ್ನುವುದನ್ನು ಸ್ವತಃ ಅವರ ಜೊತೆ ಕೆಲಸ ಮಾಡಿಕೊಂಡಿರುವ ಡಿ ದರ್ಜೆ ಅರಣ್ಯ ಸಿಬ್ಬಂದಿ ಗಂಭೀರ ಆರೋಪ ಮಾಡಿದ್ದಾರೆ.
ಶಿವಾನಂದ ಅರಣ್ಯ ಇಲಾಖೆಯ ಅಕ್ರಮಗಳನ್ನು ಬಹಿರಂಗ ಪಡಿಸಿದ ಬಳಿಕ ಈಗ ಆತನಿಗೆ ನಿರಂತರವಾಗಿ ಮಹಿಳಾ ಅರಣ್ಯಾಧಿಕಾರಿ ಟಾರ್ಚರ್ ಕೊಡುತ್ತಿದ್ದಾರೆ. ಈ ಮಹಿಳಾ ಅಧಿಕಾರಿಗೆ ಇತರೆ ಅರಣ್ಯ ಅಧಿಕಾರಿಗಳು ಸಾಥ್ ಕೊಡುತ್ತಿದ್ದಾರೆ. ಹೀಗಾಗಿ ಸದ್ಯ ನಿವೃತ್ತಿಯ ಅಂಚಿಯಲ್ಲಿರುವ ಶಿವಾನಂದಗೆ ದಿಕ್ಕೇ ತೋಚದಂತಾಗಿದೆ. ಪತಿಯ ಪರವಾಗಿ ಪತ್ನಿಯು ಈಗ ಹೋರಾಟಕ್ಕೆ ಮುಂದಾಗಿದ್ದಾಳೆ. ಈ ಎಲ್ಲ ಬೆಳವಣಿಗೆ ಕುರಿತು ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳುವುದು ನೋಡಿದರೆ ಎಲ್ಲ ಸಂಗತಿ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ಇವರು ಕೂಡಾ ಪ್ರಕರಣಗ ಬಯಲಿಗೆಳೆದ ಅರಣ್ಯ ಸಿಬ್ಬಂದಿಯ ವಿರುದ್ಧವಾಗಿ ಮತ್ತು ಮಹಿಳಾ ಅಧಿಕಾರಿ ಪರವಾಗಿ ಬ್ಯಾಟಿಂಗ್ ಆಡಿದ್ದಾರೆ.
ಸದ್ಯ ಆಯನೂರು ವಲಯ ಅರಣ್ಯದಲ್ಲಿ ಕೆಲವು ದಿನಗಳ ಹಿಂದೆ ನಡೆದ ಘಟನೆಯು ಈಗ ಸದ್ದು ಮಾಡುತ್ತಿದೆ. ನ್ಯಾಯಕ್ಕಾಗಿ ಹಿರಿಯ ಅರಣ್ಯ ಅಧಿಕಾರಿಗಳ ಕಚೇರಿ ಅಲೆದು ಸುಸ್ತಾಗಿರುವ ದೌರ್ಜನ್ಯಕ್ಕೊಳಗಾದ ಅರಣ್ಯ ಸಿಬ್ಬಂದಿ ಮತ್ತು ಆತನ ಪತ್ನಿಯು ಈಗ ಬೀದಿಗೆ ಇಳಿದು ಹೋರಾಟಕ್ಕೆ ಮುಂದಾಗಿದ್ದಾರೆ… ಬಡಪಾಯಿ ಶಿವಾನಂದಗೆ ನ್ಯಾಯ ಕೊಡುವವರು ಯಾರು ಎನ್ನುವ ಪ್ರಶ್ನೆ ಸದ್ಯ ಉದ್ಭವವಾಗಿದೆ?
ಶಿವಮೊಗ್ಗ ಜಿಲ್ಲಾ ವರದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ