ಪತಿ ಕೊಲೆ ಕೇಸ್​ ತನಿಖೆ ಬಗ್ಗೆ ಸಿಎಂಗೆ ಮನವಿ ಮಾಡಿದ ಪತ್ನಿ: ಪರಿಶೀಲಿಸುವಂತೆ ಎಸ್ಪಿಗೆ ಸಿದ್ದರಾಮಯ್ಯ ಸೂಚನೆ

ಆಗಸ್ಟ್ 22 ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದವಾದಕ್ಕೆ ಸಂಬಂಧಿಸಿದಂತೆ ತಮ್ಮಂದಿರಿಂದಲೇ ಅಣ್ಣ ಸಂಜಯ್ ಕುರ್ಡಿಕರ್ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬಗ್ಗೆ ಸಂಜಯ್ ಕುರ್ಡಿಕರ್​ ಪತ್ನಿ ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದು, ರಾಯಚೂರು ಎಸ್​ಪಿಗೆ ಪರಿಶೀಲಿಸಲು ಸೂಚನೆ ನೀಡಿದ್ದಾರೆ.

ಪತಿ ಕೊಲೆ ಕೇಸ್​ ತನಿಖೆ ಬಗ್ಗೆ ಸಿಎಂಗೆ ಮನವಿ ಮಾಡಿದ ಪತ್ನಿ: ಪರಿಶೀಲಿಸುವಂತೆ ಎಸ್ಪಿಗೆ ಸಿದ್ದರಾಮಯ್ಯ ಸೂಚನೆ
ಪತಿ ಕೊಲೆ ಕೇಸ್​ ತನಿಖೆ ಬಗ್ಗೆ ಸಿಎಂಗೆ ಮನವಿ ಮಾಡಿದ ಪತ್ನಿ: ಪರಿಶೀಲಿಸುವಂತೆ ಎಸ್ಪಿಗೆ ಸಿದ್ದರಾಮಯ್ಯ ಸೂಚನೆ
Follow us
ಪ್ರಸನ್ನ ಗಾಂವ್ಕರ್​
| Updated By: ಗಂಗಾಧರ​ ಬ. ಸಾಬೋಜಿ

Updated on: Sep 17, 2024 | 6:44 PM

ಕಲಬುರಗಿ, ಸೆಪ್ಟೆಂಬರ್​ 17: ನಗರದಲ್ಲಿ ವಿಶೇಷ ಸಚಿವ ಸಂಪುಟ ಸಭೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಸಂಪುಟ ಸದಸ್ಯರು ಬಸ್​​ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಿದ್ದಾರೆ. ಈ ವೇಳೆ ಕೊಲೆಯಾದ ಸಂಜಯ್ ಕುರ್ಡಿಕರ್ ​ಪತ್ನಿ ಶಾಂತಮ್ಮ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಕೊಲೆ ಪ್ರಕರಣದ ತನಿಖೆಯನ್ನು ಖುದ್ದು ಪರಿಶೀಲಿಸಲು ರಾಯಚೂರು ಎಸ್​ಪಿಗೆ ಸೂಚನೆ ನೀಡಿದ್ದಾರೆ.

ಶಾಂತಮ್ಮ ಅವರ ಗೋಳಾಟ ನೋಡಿ ಮರುಗಿದ ಸಿಎಂ, ಸ್ಥಳದಲ್ಲೇ ದೂರವಾಣಿ ಮೂಲಕ ರಾಯಚೂರು ಎಸ್​ಪಿ ಅವರನ್ನು ಸಂಪರ್ಕಿಸಿ ಕೊಲೆ ಪ್ರಕರಣದ ವಿವರಣೆ ಕೇಳಿದರು. ಬಳಿಕ ಕೊಲೆ ಪ್ರಕರಣದ ತನಿಖೆಯನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Cabinet Meeting: ಕಲ್ಯಾಣ ಕರ್ನಾಟಕಕ್ಕೆ ಭರ್ಜರಿ ಕೊಡುಗೆ; ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭ

ಈವರೆಗೆ ನಡೆದಿರುವ ತನಿಖೆ ಸಮರ್ಪಕವಾಗಿದೆಯೇ? ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದು ಅವರು ತಪ್ಪಿಸಿಕೊಂಡಿದ್ದಾರಾ? ನಿಜವಾದ ಆರೋಪಿಗಳು ಹೊರಗೆ ಇದ್ದರೆ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ದೊರಕಲು ಸಾಧ್ಯವಿಲ್ಲ. ಆದ್ದರಿಂದ ಖುದ್ದಾಗಿ ಕೊಲೆ ಪ್ರಕರಣದ ತನಿಖೆಯ ಮೇಲೆ ನಿಗಾ ವಹಿಸಬೇಕು, ಬಳಿಕ ಈ ಬಗ್ಗೆ ನನಗೆ ವರದಿ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಘಟನೆ ಹಿನ್ನೆಲೆ 

ಆಗಸ್ಟ್ 22 ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದವಾದಕ್ಕೆ ಸಂಬಂಧಿಸಿದಂತೆ ತಮ್ಮಂದಿರಿಂದಲೇ ಅಣ್ಣ ಸಂಜಯ್ ಕುರ್ಡಿಕರ್ ಕೊಲೆ ನಡೆದಿತ್ತು. ಗ್ರಾಮದಲ್ಲಿ ಹಾಡುಹಗಲೇ ತಮ್ಮಂದಿರು ಅಣ್ಣನಿಗೆ ಕಬ್ಬಿಣದ ರಾಡ್​ ಮತ್ತು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದರು. ಆಸ್ತಿ ಜಗಳ ಅಣ್ಣ ಸಂಜಯ್ ಕುರ್ಡಿಕರ್ ಕೊಲೆಯಲ್ಲಿ ಅಂತ್ಯವಾಗಿತ್ತು.

ಇದನ್ನೂ ಓದಿ: ಕಲಬುರಗಿಯನ್ನು ಸ್ಮಾರ್ಟ್​ ಸಿಟಿ ಮಾಡಲು 1685 ಕೋಟಿ ರೂ: ಸಿಎಂ ಸಿದ್ದರಾಮಯ್ಯ ಘೋಷಣೆ

ಸದ್ಯ ಸಂಜೀವ್​, ಸಂಘರ್ಷ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದಂತೆ ಆರು ಜನರು ಪರಾರಿಯಾಗಿದ್ದಾರೆ. ಮಾನ್ವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.