ಸಿದ್ದರಾಮಯ್ಯ ಆಪ್ತನ ಬಣ, ಶಾಸಕ ಬಣ ಬಡಿದಾಟದ ಮಧ್ಯ ಅಧಿಕಾರಕ್ಕೇರಿದ ಜೆಡಿಎಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Aug 30, 2024 | 5:58 PM

ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಗುಳೇದಗುಡ್ಡ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದಿನ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್​‌ಗೆ ಮುಖಭಂಗ ಉಂಟಾಗಿದೆ. ಎದುರಾಳಿಗಳೇ ಇಲ್ಲದೇ ಜ್ಯೋತಿ ಗೋವಿನಕೊಪ್ಪ ಗೆದ್ದು ಬೀಗಿದ್ದಾರೆ.

ಸಿದ್ದರಾಮಯ್ಯ ಆಪ್ತನ ಬಣ, ಶಾಸಕ ಬಣ ಬಡಿದಾಟದ ಮಧ್ಯ ಅಧಿಕಾರಕ್ಕೇರಿದ ಜೆಡಿಎಸ್
ಸಿದ್ದರಾಮಯ್ಯ ಆಪ್ತನ ಬಣ , ಶಾಸಕ ಬಣ ಬಡಿದಾಟದ ಮಧ್ಯ ಅಧಿಕಾರಕ್ಕೇರಿದ ಜೆಡಿಎಸ್
Follow us on

ಬಾಗಲಕೋಟೆ, ಆಗಸ್ಟ್​ 30: ಜಿಲ್ಲೆಯ ಬಾದಾಮಿ ಕ್ಷೇತ್ರದ ಗುಳೇದಗುಡ್ಡ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಪ್ತನ ಬಣ ಮತ್ತು ಬಾದಾಮಿ ಶಾಸಕ ಬಣದ ಮಧ್ಯೆದ ಪೈಪೋಟಿಯಲ್ಲಿ ಜೆಡಿಎಸ್​​ ಗದ್ದುಗೆ ಅಲಂಕರಿಸಿದೆ. ಆ ಮೂಲಕ ಸಿದ್ದರಾಮಯ್ಯನವರ ಹಿಂದಿನ ಬಾದಾಮಿಯ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಮುಖಭಂಗ ಉಂಟಾಗಿದೆ.

ಕಾಂಗ್ರೆಸ್​ನ ಇಬ್ಬರೂ ಆಕಾಂಕ್ಷಿಗಳ ನಾಮಪತ್ರ ತಿರಸ್ಕೃತ

ನಾಮಪತ್ರದಲ್ಲಿ ಯಾವ ಸ್ಥಾನಕ್ಕೆ ಸ್ಪರ್ಧೆ ಎಂದು ನಮೂದಿಸದೆ ಯಡವಟ್ಟಾಗಿದ್ದು, ಕಾಂಗ್ರೆಸ್​ನ ಇಬ್ಬರೂ ಆಕಾಂಕ್ಷಿಗಳ ನಾಮಪತ್ರ ತಿರಸ್ಕೃತವಾಗಿದೆ. ಸಿದ್ದರಾಮಯ್ಯ ಆಪ್ತ ಹೊಳೆಬಸು ಶೆಟ್ಟರ್ ಬಣದ ಜ್ಯೋತಿ ಆಲೂರು ಮತ್ತು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಬಣದ ವಂದನಾ ಭಟ್ಟಡ ಮಧ್ಯೆ ಪೈಪೋಟಿಗೆ ಕಾರಣವಾಗಿತ್ತು. ಆದರೆ ನಾಮಪತ್ರದಲ್ಲಿ ಇಬ್ಬರೂ ಅಧ್ಯಕ್ಷ ಸ್ಥಾನಕ್ಕೆ ಎಂದು ಉಲ್ಲೇಖಿಸದೆ ಯಡವಟ್ಟು ಮಾಡಿಕೊಂಡಿದ್ದಾರೆ. ಇಬ್ಬರ ಮಧ್ಯೆ ಐದು ಸ್ಥಾನ ಹೊಂದಿರುವ ಜೆಡಿಎಸ್​ಗೆ ಪಟ್ಟ ಒಲಿದಿದೆ.

ಇದನ್ನೂ ಓದಿ: ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಇಲಾಖೆಗಳಲ್ಲಿ ಕೋಟ್ಯಾಂತರ ರೂ ಅಕ್ರಮ ಕೇಸ್​: ಸಿಐಡಿಗೆ ಹಸ್ತಾಂತರ

ಎದುರಾಳಿಗಳೇ ಇಲ್ಲದೇ ಜ್ಯೋತಿ ಗೋವಿನಕೊಪ್ಪ ಗೆದ್ದು ಬೀಗಿದ್ದಾರೆ. ಆ ಮೂಲಕ ಬಹುಮತವಿದ್ದರೂ ಕಾಂಗ್ರೆಸ್ ಪುರಸಭೆ ಗದ್ದುಗೆ ಕಳೆದುಕೊಂಡಿದೆ. ಇನ್ನು ಉಪಾಧ್ಯಕ್ಷ ಸ್ಥಾನ ಎಸ್​ಸಿಗೆ‌ ಮೀಸಲಿಡಲಾಗಿದ್ದು, ಬಿಜೆಪಿ-ಜೆಡಿಎಸ್​ನಲ್ಲಿ ಎಸ್​ಸಿ ಅಭ್ಯರ್ಥಿ ಯಾರೂ ಇಲ್ಲ.

ಇದನ್ನೂ ಓದಿ: ಬಿಜೆಪಿ ಮಾಜಿ ಸಿಎಂ ಒಬ್ಬರ ಅಶ್ಲೀಲ ವಿಡಿಯೋ ಬಿಡುಗಡೆ ಆಗಲಿದೆ: ಮಾಜಿ ಶಾಸಕ ಆನಂದ‌ ನ್ಯಾಮಗೌಡ

ಕಾಂಗ್ರೆಸ್​ನಲ್ಲಿ ರಾಜವ್ವ ಹೆಬ್ಬಳ್ಳಿ ಹಾಗೂ ರಾಜವ್ವ ಮಗ ರಾಜಶೇಖರ ಹೆಬ್ಬಳ್ಳಿ ಇಬ್ಬರು ಮಾತ್ರ ಎಸ್​ಸಿ ಅಭ್ಯರ್ಥಿಗಳು. ಅಧ್ಯಕ್ಷ ಸ್ಥಾನಕ್ಕೆ ತಮಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡದ ಹಿನ್ನೆಲೆ ಉಪಾಧ್ಯಕ್ಷ ಸ್ಥಾನಕ್ಕೂ ನಾಮಪತ್ರ ಸಲ್ಲಿಸಲಿಲ್ಲ. ಇದರಿಂದ ಅಭ್ಯರ್ಥಿಗಳೇ ಇಲ್ಲದ ಹಿನ್ನೆಲೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ. ಕಾಂಗ್ರೆಸ್: 15, ಬಿಜೆಪಿ: 2, ಜೆಡಿಎಸ್: 5, ಪಕ್ಷೇತರ: 1 ಒಟ್ಟು 23 ಗುಳೇದಗುಡ್ಡ ಪುರಸಭೆ ಸದಸ್ಯರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳು ಓದಲು ಇಲ್ಲಿ ಕ್ಲಿಕ್ ಮಾಡಿ.