ಚಿನ್ನದ ಬೆಲೆ 10 ಗ್ರಾಂಗೆ ₹ 280 ಏರಿಕೆ

|

Updated on: Nov 15, 2019 | 2:16 PM

ಬೆಂಗಳೂರು: ಮಹಿಳೆಯರು, ಬಂಡವಾಳ ಹೂಡಿಕೆದಾರರು ಚಿನ್ನದ ಬೆಲೆಗೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಚಿನ್ನ ಎನ್ನುವುದು ಕೇವಲ ವಸ್ತು ಎಂಬುವುದಕ್ಕಿಂತ ಪರಂಪರೆ ಮತ್ತು ಸಿರಿತನದ ಸಂಕೇತ ಎಂದು ಭಾವಿಸುವುದುಂಟು. ಹೀಗಿರುವಾಗ ಚಿನ್ನದ ದರವು ದಿನದಿಂದ ದಿನ ಭಿನ್ನವಾಗಿರುತ್ತದೆ. ದರದಲ್ಲಿ ಏರಿಳಿತಗಳು ಸಾಮಾನ್ಯ. ಪ್ರಸ್ತುತ ದೇಶದಾದ್ಯಂತ ಚಿನ್ನದ ಬೆಲೆ ಏರಿಕೆ ಕಂಡಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯುವುದಾದರೆ.. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ: 1 ಗ್ರಾಂ ಚಿನ್ನಕ್ಕೆ ನಿನ್ನೆ ₹3,570 ಇತ್ತು ಈಗ ಅದು […]

ಚಿನ್ನದ ಬೆಲೆ 10 ಗ್ರಾಂಗೆ ₹ 280 ಏರಿಕೆ
Follow us on

ಬೆಂಗಳೂರು: ಮಹಿಳೆಯರು, ಬಂಡವಾಳ ಹೂಡಿಕೆದಾರರು ಚಿನ್ನದ ಬೆಲೆಗೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಚಿನ್ನ ಎನ್ನುವುದು ಕೇವಲ ವಸ್ತು ಎಂಬುವುದಕ್ಕಿಂತ ಪರಂಪರೆ ಮತ್ತು ಸಿರಿತನದ ಸಂಕೇತ ಎಂದು ಭಾವಿಸುವುದುಂಟು. ಹೀಗಿರುವಾಗ ಚಿನ್ನದ ದರವು ದಿನದಿಂದ ದಿನ ಭಿನ್ನವಾಗಿರುತ್ತದೆ. ದರದಲ್ಲಿ ಏರಿಳಿತಗಳು ಸಾಮಾನ್ಯ. ಪ್ರಸ್ತುತ ದೇಶದಾದ್ಯಂತ ಚಿನ್ನದ ಬೆಲೆ ಏರಿಕೆ ಕಂಡಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯುವುದಾದರೆ..

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ:
1 ಗ್ರಾಂ ಚಿನ್ನಕ್ಕೆ ನಿನ್ನೆ ₹3,570 ಇತ್ತು ಈಗ ಅದು ₹3,595 ಆಗಿದೆ. ಹೀಗಾಗಿ ನಿನ್ನೆಗಿಂತ ಇವತ್ತು ₹25 ಹೆಚ್ಚಾಗಿದೆ. 8ಗ್ರಾಂ ಚಿನ್ನಕ್ಕೆ ನಿನ್ನೆ ₹ 28,560 ಇತ್ತು ಇಂದು 28,760ಕ್ಕೆ ಬಂದಿದೆ. ನಿನ್ನೆಗಿಂತ ಇವತ್ತು ₹200 ಹೆಚ್ಚಾಗಿದೆ. 10ಗ್ರಾಂ ಚಿನ್ನಕ್ಕೆ ನಿನ್ನೆ ₹ 35,700 ರಿಂದ 35,950ಕ್ಕೆ ಏರಿಕೆಯಾಗಿದೆ. ನಿನ್ನೆಗಿಂತ ಇವತ್ತು ₹250 ಹೆಚ್ಚಾಗಿದೆ. ಇನ್ನೂ 100 ಗ್ರಾಂ ಚಿನ್ನದ ಬೆಲೆ ನಿನ್ನೆ 3,57,000 ಇತ್ತು. ಇಂದು 3,59,500 ಆಗಿದೆ. ನಿನ್ನೆಗಿಂತ ಇವತ್ತು ₹2,500 ಏರಿಕೆಯಾಗಿದೆ. ಈ ರೀತಿ ಚಿನ್ನದ ದರ ಮತ್ತೇ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ:
1 ಗ್ರಾಂ ಚಿನ್ನಕ್ಕೆ ನಿನ್ನೆ ₹3,893 ಇತ್ತು ಈಗ ಅದು ₹3,921 ಆಗಿದೆ. ಹೀಗಾಗಿ ನಿನ್ನೆಗಿಂತ ಇವತ್ತು ₹28 ಹೆಚ್ಚಾಗಿದೆ. 8ಗ್ರಾಂ ಚಿನ್ನಕ್ಕೆ ನಿನ್ನೆ ₹ 31,144ಇತ್ತು ಇಂದು ₹31,368ಕ್ಕೆ ಬಂದಿದೆ. ನಿನ್ನೆಗಿಂತ ಇವತ್ತು ₹224 ಹೆಚ್ಚಾಗಿದೆ. 10ಗ್ರಾಂ ಚಿನ್ನಕ್ಕೆ ನಿನ್ನೆ ₹ 38,930 ರಿಂದ 39,210ಕ್ಕೆ ಏರಿಕೆಯಾಗಿದೆ. ನಿನ್ನೆಗಿಂತ ಇವತ್ತು ₹280 ಹೆಚ್ಚಾಗಿದೆ. ಇನ್ನೂ 100 ಗ್ರಾಂ ಚಿನ್ನದ ಬೆಲೆ ನಿನ್ನೆ 3,89,300 ಇತ್ತು. ಇಂದು 3,92,100 ಆಗಿದೆ. ನಿನ್ನೆಗಿಂತ ಇವತ್ತು ₹2,800 ಏರಿಕೆಯಾಗಿದೆ.

ಈ ರೀತಿ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 250 ರೂಪಾಯಿ ಹೆಚ್ಚಾಗಿದ್ದು, 24 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 280 ರೂಪಾಯಿ ಹೆಚ್ಚಾಗಿದೆ.

ಇನ್ನು ಬೆಂಗಳೂರಿನಲ್ಲಿ ಬೆಳ್ಳಿಯ ದರ ಹೇಗಿದೆ ಅಂತ ನೋಡುವುದಾದರೆ..
1 ಗ್ರಾಂ ಬೆಳ್ಳಿ ನಿನ್ನೆ ₹ 48.77 ಇತ್ತು. ಇಂದು ₹ 48.84 ಆಗಿದೆ. ₹ 0.07 ಪೈಸೆಯಷ್ಟು ಏರಿಕೆಯಾಗಿದೆ. 8ಗ್ರಾಂ ಬೆಳ್ಳಿ ನಿನ್ನೆ ₹390.16 ಇತ್ತು. ಇಂದು ₹390.72 ಆಗಿದೆ. ₹ 0.56 ಅಷ್ಟು ಏರಿಕೆಯಾಗಿದೆ. 10ಗ್ರಾಂ ಬೆಳ್ಳಿ ನಿನ್ನೆ ₹ 487.70 ಇತ್ತು. ಇಂದು ₹488.40 ಆಗಿದೆ. ₹0.70ಅಷ್ಟು ಏರಿಕೆಯಾಗಿದೆ. ಇನ್ನು 100 ಗ್ರಾಂ ಬೆಳ್ಳಿಯ ದರ ನಿನ್ನೆ ₹ 4,877 ಇತ್ತು. ಇಂದು ₹ 4,884 ಆಗಿದೆ. ₹ 7 ಹೆಚ್ಚಾಗಿದೆ. 1 ಕೆಜಿ ಬೆಳ್ಳಿಯ ದರ ₹ 48,770 ರಿಂದ ₹ 48,840ಕ್ಕೆ ಜಿಗಿದಿದ್ದು, ₹ 70 ಹೆಚ್ಚಾಗಿದೆ.

Published On - 8:31 pm, Thu, 14 November 19