ಕಾಂಗ್ರೆಸ್ ಗೆದ್ದಿದ್ದಕ್ಕೆ ರಣರಂಗವಾಯ್ತು ಮಸ್ಕಿ; ಪ್ರತಾಪ್​ ಗೌಡ ಪಾಟೀಲರ ಮಕ್ಕಳಿಂದ ಗಲಾಟೆ, ಮಹಿಳೆಯ ಮಾನಭಂಗಕ್ಕೂ ಯತ್ನ !

|

Updated on: May 03, 2021 | 7:44 PM

ಪ್ರತಾಪ್​ ಗೌಡ ಪಾಟೀಲರ ಮಕ್ಕಳಾದ ಪ್ರಸನ್ನ ಪಾಟೀಲ್, ಚೇತನ್​ ಪಾಟೀಲ್​ ಹಾಗೂ ಮತ್ತಿತರ ಬಿಜೆಪಿ ಕಾರ್ಯಕರ್ತರು ಸೇರಿ ಗಲಾಟೆ ನಡೆಸಿದ್ದು, ಕಾಂಗ್ರೆಸ್​​ನ್ನು ಬೆಂಬಲಿಸಿದ್ದ ಮಹಿಳೆಯೊಬ್ಬಳ ಮಾನಭಂಗಕ್ಕೂ ಪ್ರಯತ್ನಿಸಿದ್ದಾರೆ.

ಕಾಂಗ್ರೆಸ್ ಗೆದ್ದಿದ್ದಕ್ಕೆ ರಣರಂಗವಾಯ್ತು ಮಸ್ಕಿ; ಪ್ರತಾಪ್​ ಗೌಡ ಪಾಟೀಲರ ಮಕ್ಕಳಿಂದ ಗಲಾಟೆ, ಮಹಿಳೆಯ ಮಾನಭಂಗಕ್ಕೂ ಯತ್ನ !
ದಾಂಧಲೆ ನಡೆಸಿದವರನ್ನು ಬಂಧಿಸಲು ಆಗ್ರಹಿಸಿ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು
Follow us on

ರಾಯಚೂರು: ಇಲ್ಲಿನ ಮಸ್ಕಿ ಉಪಚುನಾವಣೆಯಲ್ಲಿ ನಿನ್ನೆ ಕಾಂಗ್ರೆಸ್​ ಗೆದ್ದ ಬೆನ್ನಲ್ಲೇ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪರಾಜಿತ ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್​ರ ಮಕ್ಕಳು, ಬಿಜೆಪಿ ಕಾರ್ಯಕರ್ತರು ಸಿಕ್ಕಾಪಟೆ ಗಲಾಟೆ ಮಾಡುತ್ತಿದ್ದು, ಮಸ್ಕಿ ಎಂಬುದು ರಣರಂಗವಾದಂತಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಕಂಡಲ್ಲಿ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ.

ಪ್ರತಾಪ್​ ಗೌಡ ಪಾಟೀಲರ ಮಕ್ಕಳಾದ ಪ್ರಸನ್ನ ಪಾಟೀಲ್, ಚೇತನ್​ ಪಾಟೀಲ್​ ಹಾಗೂ ಮತ್ತಿತರ ಬಿಜೆಪಿ ಕಾರ್ಯಕರ್ತರು ಸೇರಿ ಗಲಾಟೆ ನಡೆಸಿದ್ದು, ಕಾಂಗ್ರೆಸ್​​ನ್ನು ಬೆಂಬಲಿಸಿದ್ದ ಮಹಿಳೆಯೊಬ್ಬಳ ಮಾನಭಂಗಕ್ಕೂ ಪ್ರಯತ್ನಿಸಿದ್ದಾರೆ. ಈ ಸಂಬಂಧ ಮಹಿಳೆ ಮಸ್ಕಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗಲಾಟೆಗೆ ಸಂಬಂಧಪಟ್ಟಂತೆ, ಪ್ರತಾಪ್​ ಗೌಡ ಪಾಟೀಲ್​​ರ ಇಬ್ಬರು ಮಕ್ಕಳು ಸೇರಿ ಒಟ್ಟು 13 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಮಸ್ಕಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಎಸ್​ಪಿಗೆ ಕರೆ ಮಾಡಿದ ಸಿದ್ದರಾಮಯ್ಯ
ಇನ್ನು ಗೆದ್ದ ಕಾಂಗ್ರೆಸ್​ ಅಭ್ಯರ್ಥಿ ಬಸವನಗೌಡ ತುರುವಿಹಾಳ್ ಅವರು ಸಿದ್ದರಾಮಯ್ಯನವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಪ್ರತಾಪ್ ಗೌಡ ಪಾಟೀಲರ ಮಕ್ಕಳು ಮನೆಮನೆಗೆ ನುಗ್ಗಿ ದಾಂಧಲೆ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ನೀವೇ ಇಲ್ಲಿನ ಎಸ್​ಪಿ ಜತೆ ಮಾತನಾಡಿ ಎಂದೂ ಮನವಿ ಮಾಡಿದ್ದಾರೆ. ಅದಾದ ಬಳಿಕ ರಾಯಚೂರು ಎಸ್​ಪಿಗೆ ಕರೆ ಮಾಡಿದ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಜನರ ತೀರ್ಪು. ಆದಾಗ್ಯೂ ಅವರೇಕೆ ಗೂಂಡಾಗಿರಿ ಮಾಡುತ್ತಿದ್ದಾರೆ? ಸುಮ್ಮನೆ ಮನೆಯಲ್ಲಿ ಇರಲು ಹೇಳಿ, ಕ್ರಮ ಕೈಗೊಳ್ಳಿ ಎಂದು ಎಸ್​ಪಿಗೆ ಸಿದ್ದರಾಮಯ್ಯನವರು ಹೇಳಿದ್ದಾರೆ.

ಇದನ್ನೂ ಓದಿ: ಅರ್ಜುನ್​ ಜನ್ಯ ಅಣ್ಣ ಕೊರೊನಾದಿಂದ ನಿಧನ; ನೋವು ತೋಡಿಕೊಂಡ ಸಂಗೀತ ನಿರ್ದೇಶಕ

ಸಿಟಿ ಸ್ಕ್ಯಾನ್, ರಕ್ತ ತಪಾಸಣೆ, ಸ್ಟೀರಾಯ್ಡ್ ಯಾವಾಗ ಅಗತ್ಯ?-ಅಪಾಯದ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ ಏಮ್ಸ್​ ನಿರ್ದೇಶಕ

Published On - 7:37 pm, Mon, 3 May 21