AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೆಸ್ತೇಷಿಯಾ ಕೋರ್ಸ್ ಮುಗಿಸಿದ 6 ಸಾವಿರ ಮಂದಿ ಈಗ ಕೋಮಾ ಸ್ಥಿತಿಗೆ, ಕಾರಣ ಇಲ್ಲಿದೆ..

ಈ ಕೋರ್ಸ್​ನಡಿ ಹುದ್ದೆಗಳು ಅವಶ್ಯಕತೆ ಇದ್ಯಾ, ಇಲ್ವಾ ಎಂದು ತಿಳಿದುಕೊಳ್ಳಲು ಆರ್‌ಟಿಐನಡಿ ಮಾಹಿತಿ ಕೇಳಿದ್ದಾರೆ. ಆಗ ಜಿಲ್ಲಾ ಅಧಿಕಾರಿಗಳು ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಅನೆಸ್ತೇಷಿಯಾ ಕೋರ್ಸ್ ಮುಗಿಸಿದ 6 ಸಾವಿರ ಮಂದಿ ಈಗ ಕೋಮಾ ಸ್ಥಿತಿಗೆ, ಕಾರಣ ಇಲ್ಲಿದೆ..
ಪೃಥ್ವಿಶಂಕರ
|

Updated on: Nov 28, 2020 | 8:31 AM

Share

ಬಾಗಲಕೋಟೆ: ಸರ್ಕಾರವೇ ಮುತುವರ್ಜಿ ವಹಿಸಿ ಆ ಕೋರ್ಸ್ ಪ್ರಾರಂಭ ಮಾಡಿತ್ತು. ಕೋರ್ಸ್ ಪ್ರಾರಂಭ ಆಗಿ 23 ವರ್ಷಗಳು ಕಳೆದಿವೆ. ಆದ್ರೆ ಇದೇ ಕೋರ್ಸ್​ನಡಿ ಒಬ್ಬನೇ ಒಬ್ಬ ಅಭ್ಯರ್ಥಿ ನೇಮಕಾತಿಗೊಂಡಿಲ್ಲ. ಕೋರ್ಸ್ ಕಲಿತ ಕೆಲವರು ವಯಸ್ಸು ಮುಗಿದು ಬೇರೆ ದಾರಿ ನೋಡಿಕೊಂಡ್ರೆ, ವಯಸ್ಸು ಮೀರುತ್ತಿರೋ ಇನ್ನು ಕೆಲವರು ಸರ್ಕಾರ ಇನ್ನಾದ್ರೂ ಮನಸ್ಸು ಮಾಡಬಹುದು ಅಂತಾ ಕನಸು ಕಾಣ್ತಿದಾರೆ.

ಹೀಗೆ ತಮ್ಮ ಅಳಲು ತೋಡಿಕೋಳ್ತಿರೋ ಇವರೆಲ್ಲ ಆಪರೇಷನ್ ಥಿಯೇಟರ್ ಹಾಗೂ ಅನೆಸ್ತೇಷಿಯಾ ಟೆಕ್ನಾಲಜಿ ಕೋರ್ಸ್ ಕಲಿತವರು. ಕೋರ್ಸ್ ಮುಗಿಸಿ ಹಲವು ವರ್ಷಗಳೇ ಕಳೆದ್ರೂ ಸರ್ಕಾರ ನೇಮಕಾತಿ ಮಾಡಿಕೊಂಡಿಲ್ಲ. ಅಂದಹಾಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ತುಂಬಾ ಅವಶ್ಯಕತೆ ಇದೆ ಅಂತಾ ರಾಜ್ಯ ಸರ್ಕಾರ 1997 ರಲ್ಲಿಯೇ ಆಪರೇಷನ್ ಥಿಯೇಟರ್ ಹಾಗೂ ಅನೆಸ್ತೇಷಿಯಾ ಕೋರ್ಸ್ ಪ್ರಾರಂಭ ಮಾಡಿವೆ.

ಕೋರ್ಸ್ ಪ್ರಾರಂಭ ಆಗಿ 23ವರ್ಷಗಳು ಕಳೆದಿವೆ.. ಈ ಕೋರ್ಸ್ ಪ್ರಾರಂಭ ಆಗಿ 23ವರ್ಷಗಳು ಕಳೆದಿವೆ. ಆದ್ರೂ ಒಮ್ಮೆಯೂ ಆಪರೇಷನ್ ಥಿಯೇಟರ್ ಹಾಗೂ ಅನೆಸ್ತೇಷಿಯಾ ಕೋರ್ಸ್‌ನಡಿ ಒಂದೇ ಒಂದು ಹುದ್ದೆಯನ್ನು ಇದುವರೆಗೂ ತುಂಬಿಕೊಂಡಿಲ್ಲ. ಇದೀಗ ಈ ಕೋರ್ಸ್ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಯಾಕಾದ್ರೂ ಈ ಕೋರ್ಸ್ ಮಾಡಿದ್ವಿ ಅನ್ನೋ ಜಿಗುಪ್ಸೆಗೆ ಒಳಗಾಗಿದ್ದಾರೆ. ಇನ್ನು ಈ ಕೋರ್ಸ್​ನಡಿ ಹುದ್ದೆಗಳು ಅವಶ್ಯಕತೆ ಇದ್ಯಾ, ಇಲ್ವಾ ಎಂದು ತಿಳಿದುಕೊಳ್ಳಲು ಆರ್‌ಟಿಐನಡಿ ಮಾಹಿತಿ ಕೇಳಿದ್ದಾರೆ. ಆಗ ಜಿಲ್ಲಾ ಅಧಿಕಾರಿಗಳು ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದ್ದಾರೆ. ಆದ್ರೂ ಸರ್ಕಾರ ಯಾಕೆ ನಮ್ಮನ್ನು ನೇಮಕ ಮಾಡಿಕೊಳ್ತಿಲ್ಲ ಅನ್ನೋ ಪ್ರಶ್ನೆ ವಿದ್ಯಾರ್ಥಿಗಳದ್ದು.

ಉಪವಾಸ ಸತ್ಯಾಗ್ರಹ ಮಾಡೋದಾಗಿ ಎಚ್ವರಿಕೆ ನೀಡ್ತಿದಾರೆ.. ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಆಪರೇಷನ್ ಥಿಯೇಟರ್ ಹಾಗೂ ಅನೆಸ್ತೇಷಿಯಾ ಟೆಕ್ನಾಲಜಿ ಕೋರ್ಸ್ ಮುಗಿಸಿದ್ದಾರೆ. ಇದರಲ್ಲಿ ಎಷ್ಟೋ ಜನರ ವಯಸ್ಸು ಮಿತಿ ಮೀರಿದೆ. ಆದ್ರೂ ಸರ್ಕಾರ ಮಾತ್ರ ಇದುವರೆಗೂ ಯಾರನ್ನ ನೇಮಕ ಮಾಡಿಕೊಂಡಿಲ್ಲ. ಈ ಬಗ್ಗೆ ಹಲವು ಸಚಿವರಿಗಳಿಗೂ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನೆ ಆಗಿಲ್ಲ. ಸರ್ಕಾರ ಕೂಡಾ ಈ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ. ಮುಂದಿನ ದಿನಗಳಲ್ಲೂ ನೇಮಕಾತಿ ಮಾಡಿಕೊಳ್ಳದೇ ಹೀಗೆ ನಿರ್ಲಕ್ಷ್ಯ ಮಾಡಿದ್ರೆ, ಉಪವಾಸ ಸತ್ಯಾಗ್ರಹ ಮಾಡೋದಾಗಿ ಎಚ್ವರಿಕೆ ನೀಡ್ತಿದಾರೆ.

ಸರ್ಕಾರವೇ ತೆರೆದಂತ ಕೋರ್ಸ್ ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕಾಗಬೇಕಿತ್ತು. ಆದ್ರೆ ಅದೇ ಕೋರ್ಸ್ ವಿದ್ಯಾರ್ಥಿಗಳಿಗೆ, ನಮಗ್ಯಾಕೆ ಬೇಕಿತ್ತು ಈ ಕೋರ್ಸ್ ಅನ್ನುವಷ್ಟು ಬೇಸರ ತಂದಿದೆ.