ಶುದ್ಧ ಗಾಳಿಯ ರಕ್ಷಕ ಸೋಹಮ್ : ನೀವು ಉಸಿರಾಡುವ ಗಾಳಿ ಶುದ್ಧವೇ, ಗುಣಮಟ್ಟವನ್ನು ಪರೀಕ್ಷಿಸುವುದು ಹೇಗೆ?

ಇತ್ತೀಚೆಗಿನ ದಿನಗಳಲ್ಲಿ ಉಸಿರಾಡಲು ಶುದ್ಧಗಾಳಿಯೇ ಇಲ್ಲದಂತಾಗಿದೆ. ಈ ಮನುಷ್ಯನ ಎಲ್ಲೇ ಮೀರಿದ ಚಟುವಟಿಕೆಗಳಿಂದ ಗಾಳಿಯೂ ಸಂಪೂರ್ಣವಾಗಿ ಕಲುಷಿತವಾಗಿದೆ. ಆದರೆ ಜೀವಿಗಳ ಉಳಿವಿಗಾಗಿ ಶುದ್ಧ ಗಾಳಿಯೂ ಅತ್ಯಗತ್ಯವಾಗಿದ್ದು, ಈ ಗಾಳಿಯ ಗಾಳಿಯ ಗುಣಮಟ್ಟವನ್ನು ಪರೀಕ್ಷಿಸಲು AQI.in ಪ್ರಮುಖ ಸಾಧನವಾಗಿದೆ.ಇದೊಂದು ಪ್ಲಾಟ್‌ಫಾರ್ಮ್ ಮಾನಿಟರಿಂಗ್ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಆಗಿದೆ. ಆದರೆ ಇದೀಗ ಇದರಡಿಯಲ್ಲಿ ಶುದ್ಧ ಗಾಳಿಯ ಪರಿಕಲ್ಪನೆಯನ್ನು ಪ್ರತಿನಿಧಿಸುವ ಸೋಹಮ್ ಎನ್ನುವ ಹೆಸರಿನ ಸೈಟ್‌ನ್ನು ಪರಿಚಯಿಸಲಾಗಿದ್ದು, ಇದರ ಮೂಲಕ ಶುದ್ಧ ಗಾಳಿಯ ಮಟ್ಟವನ್ನು ಸುಲಭವಾಗಿ ಅಳೆಯಬಹುದು. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಶುದ್ಧ ಗಾಳಿಯ ರಕ್ಷಕ ಸೋಹಮ್ : ನೀವು ಉಸಿರಾಡುವ ಗಾಳಿ ಶುದ್ಧವೇ, ಗುಣಮಟ್ಟವನ್ನು ಪರೀಕ್ಷಿಸುವುದು ಹೇಗೆ?
ಗಾಳಿಯ ಗುಣಮಟ್ಟ ಸೂಚ್ಯಂಕ
Image Credit source: Gerard Bottino/SOPA Images/LightRocket via Getty Images

Updated on: Jun 02, 2025 | 4:46 PM

ಮನುಷ್ಯ ಸೇರಿದಂತೆ ಈ ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ಉಸಿರಾಡಲು ಶುದ್ಧಗಾಳಿ ಬೇಕು ಬೇಕು. ಆದರೆ ಇತ್ತೀಚೆಗಿನ ದಿನಗಳಲ್ಲಿ ನಗರೀಕರಣ, ವಾಯು ಮಾಲಿನ್ಯ ಸೇರಿದಂತೆ ಮಾನವನ ಮಿತಿಮೀರಿದ ಚಟುವಟಿಕೆಯಿಂದ ಶುದ್ಧಗಾಳಿಯೇ ಇಲ್ಲದಂತಾಗಿದೆ. ಹೀಗಾಗಿ ಜನರು ಈ ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಾವು ಉಸಿರಾಡುವ ಗಾಳಿಯು ಎಷ್ಟು ಶುದ್ಧವಾಗಿದೆಯೇ ಎಂದು ಗಾಳಿಯ ಗುಣ ಮಟ್ಟದ ಸೂಚ್ಯಂಕ (Air Quality Index) ದಿಂದ ತಿಳಿದುಕೊಳ್ಳಬಹುದು. ಆದರೆ ಇದರಡಿಯಲ್ಲಿ ಶುದ್ಧ ಗಾಳಿಯ ಪರಿಕಲ್ಪನೆಯನ್ನು ಪ್ರತಿನಿಧಿಸುವ ಸೋಹಮ್” (Sohum) ಎಂಬ ಉಪಕ್ರಮವನ್ನು ಒಳಗೊಂಡಿದೆ. ಈ ಸೈಟ್ ಮೂಲಕ ಗಾಳಿಯ ಗುಣಮಟ್ಟ ಹೇಗಿದೆ? ಹಾಗೂ ಗಾಳಿ ಗುಣಮಟ್ಟವನ್ನು ಹೇಗೆ ಪರೀಕ್ಷಿಸಲಾಗುತ್ತದೆ?ಎನ್ನುವ ಕುರಿತು ತಿಳಿದುಕೊಳ್ಳುವುದು ಬಹಳ ಮುಖ್ಯ.

ಹೆಚ್ಚಿನವರು ಈ ಗಾಳಿಯ ಗುಣಮಟ್ಟವನ್ನು ಪರಿಶೀಲಿಸಲು ಗೂಗಲ್ ಮ್ಯಾಪ್‌ನ್ನು ಅವಲಂಬಿಸಿರುತ್ತಾರೆ. ಆದರೆ ಈ ಗೂಗಲ್ ಸುಮಾರು ಒಂದು ವರ್ಷದ ಹಿಂದೆ ತನ್ನ ನ್ಯಾವಿಗೇಷನ್ ಅಪ್ಲಿಕೇಶನ್‌ಗಾಗಿ ಈ ವೈಶಿಷ್ಟ್ಯವನ್ನು ಹೊರತಂದಿದೆ. ಹೌದು, ಕಳೆದ ಐದು ವರ್ಷಗಳಲ್ಲಿ ಎಕ್ಯೂಐಗಾಗಿ ಹುಡುಕಾಟದ ನಡೆಸಿದವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಈ ಎಕ್ಯೂಐ.ಇನ್‌ನಂತಹ ಸೈಟ್ ಮೂಲಕ ಸುತ್ತಮುತ್ತಲಿನ ವಾಯು ಮಾಲಿನ್ಯದ ಮಟ್ಟ ಅಳೆಯಬಹುದು. ಅದಲ್ಲದೇ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಲು ಇದೊಂದು ಪ್ರಮುಖ ಸಾಧನಗಳಾಗಿವೆ. ಆದರೆ ಸೋಹನ್ ಸೈಟ್ ಮೂಲಕ ಗಾಳಿಯ ಗುಣಮಟ್ಟ ತಿಳಿದುಕೊಳ್ಳಬಹುದಾಗಿದ್ದು, ಇದು ಶುದ್ಧ ಗಾಳಿಯ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ.

ಸೋಹಮ್ ವಿಶಿಷ್ಟ ವಿನ್ಯಾಸ ಹೇಗಿದೆ?

ಗಾಳಿಯ ಗುಣ ಮಟ್ಟವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಿಭಿನ್ನವಾಗಿರುವ ಕಾರಣ ಸಮಯಕ್ಕೆ ಸರಿಯಾದ ಗಾಳಿಗುಣಮಟ್ಟದ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ
ವಿಜಯಪುರ ಕೆನರಾ ಬ್ಯಾಂಕ್​ನಲ್ಲಿದ್ದ 58 ಕೆಜಿ ಚಿನ್ನ ಕಳ್ಳತನ!
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಹಳೇ ವೈಷಮ್ಯ: ಅಂಗಲಾಚಿದರು ಬಿಡದ ದುಷ್ಕರ್ಮಿಗಳು, ಬೇಕರಿಗೆ ನುಗ್ಗಿ ವ್ಯಕ್ತಿಯ
RCBಗಾಗಿ ಕಾರನ್ನು ವಿಶೇಷವಾಗಿ ಸಿದ್ಧಪಡಿಸಿದ ಮೈಸೂರಿನ ಅಭಿಮಾನಿಗಳು
  • 0ಯಿಂದ 50ರವರೆಗಿನ ಗಾಳಿಯ ಗುಣಮಟ್ಟ ಸೂಚ್ಯಾಂಕ – ಉತ್ತಮ
  •  51ರಿಂದ 100 ಗಾಳಿಯ ಗುಣಮಟ್ಟ ಸೂಚ್ಯಂಕ – ತೃಪ್ತಿದಾಯಕ
  • 101ರಿಂದ 200 ಗಾಳಿಯ ಗುಣಮಟ್ಟ ಸೂಚ್ಯಂಕ – ಸಾಧಾರಣ
  • 201ರಿಂದ 300 ಗಾಳಿಯ ಗುಣಮಟ್ಟ ಸೂಚ್ಯಂಕ – ಕೆಳಮಟ್ಟ
  • 301ರಿಂದ 400 ಗಾಳಿಯ ಗುಣಮಟ್ಟ ಸೂಚ್ಯಂಕ – ಅತೀ ಕೆಳಮಟ್ಟ
  • 401ರಿಂದ 500ರ ಗಾಳಿಯ ಗುಣಮಟ್ಟ ಸೂಚ್ಯಂಕ – ಅತೀ ಗಂಭೀರ ಎಂದು ಪರಿಗಣಿಸಲಾಗಿದೆ.

ಬಟ್ಟೆಗಳ ಬಣ್ಣ ಬದಲಾವಣೆಯೇ ಗಾಳಿಯ ಗುಣಮಟ್ಟ ಅಳೆಯಲು ಸಹಕಾರಿ

ಗಾಳಿಯ ಗುಣಮಟ್ಟವನ್ನು ಸೂಚ್ಯಂಕದಿಂದ ಮಾತ್ರವಲ್ಲದೇ ಧರಿಸುವ ಬಟ್ಟೆಗಳ ಬಣ್ಣ ಬದಲಾವಣೆಯಿಂದ ಅಳೆಯಲು ಸಾಧ್ಯ. ನಮ್ಮ ಸುತ್ತಮುತ್ತಲಿನ ಗಾಳಿಯ ಗುಣ ಮಟ್ಟವನ್ನು ಆಧರಿಸಿ ಬಟ್ಟೆಗಳು ಬಣ್ಣವನ್ನು ಬದಲಾಯಿಸುತ್ತದೆ.

  • ಹಸಿರು : ಉತ್ತಮ ಗಾಳಿಯ ಗುಣಮಟ್ಟ
  • ಹಳದಿ : ಮಧ್ಯಮ ಗಾಳಿಯ ಗುಣಮಟ್ಟ
  • ಕಿತ್ತಳೆ : ಸೂಕ್ಷ್ಮ ಗುಂಪುಗಳಿಗೆ ಅನಾರೋಗ್ಯಕರ
  • ಕೆಂಪು : ಅನಾರೋಗ್ಯಕರ
  • ನೇರಳೆ : ಅನಾರೋಗ್ಯಕರ
  • ಮೆರೂನ್ : ಅಪಾಯಕಾರಿ

ಇದನ್ನೂ ಓದಿ : ವಿಜಯಪುರ ಕೆನರಾ ಬ್ಯಾಂಕ್​ನಲ್ಲಿದ್ದ 58 ಕೆಜಿ ಚಿನ್ನ ಕಳ್ಳತನ! ಪೊಲೀಸರ ದಿಕ್ಕು ತಪ್ಪಿಸಲು ವಾಮಾಚಾರ

ಭರವಸೆಯ ಸಂಕೇತ ಈ ಸೋಹಮ್

ವಾಯು ಮಾಲಿನ್ಯವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಈ ಭಾರತದಾದ್ಯಂತ ಸೋಹಮ್ ಭರವಸೆಯ ದಾರಿದೀಪವಾಗಿ ನಿಂತಿದೆ. ಶುದ್ಧ ಗಾಳಿಯ ರಕ್ಷಕವಾಗಿದ್ದು ಗಾಳಿಯ ಗುಣಮಟ್ಟ ತಿಳಿಯಲು ಅನುಕೂಲಕರವಾಗಿದೆ. ಅದಲ್ಲದೇ, ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು ಮುಂದಿನ ಪೀಳಿಗೆಗೆ ಸ್ವಚ್ಛ, ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ