AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2025: ಖಗೋಳದಲ್ಲಿ ಮತ್ತೊಂದು ವಿಸ್ಮಯ; ಸೆ 21 ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ!

ಸೆಪ್ಟೆಂಬರ್ 21ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಆ ಮೂಲಕ ಮತ್ತೊಮ್ಮೆ ಕೌತುಕ ಕಣ್ತುಂಬಿಕೊಳ್ಳಲು ಜನರೊಂದಿಗೆ ಇಡೀ ವಿಜ್ಞಾನ ಲೋಕವೆ ಸಜ್ಜಾಗಿದೆ. ಹಾಗಾದರೆ ಸೂರ್ಯಗ್ರಹಣ ಸಂಭವಿಸುವ ಸಮಯ, ಭಾರತದಲ್ಲಿ ಈ ಗ್ರಹಣ ಗೋಚರಿಸುತ್ತದೆಯೋ ಇಲ್ಲವೋ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Solar Eclipse 2025: ಖಗೋಳದಲ್ಲಿ ಮತ್ತೊಂದು ವಿಸ್ಮಯ; ಸೆ 21 ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ!
ಪ್ರಾತಿನಿಧಿಕ ಚಿತ್ರ
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 19, 2025 | 9:06 AM

Share

ಬೆಂಗಳೂರು, ಸೆಪ್ಟೆಂಬರ್​ 19: ಈ ವರ್ಷದ ಕೊನೆಯ ಸೂರ್ಯಗ್ರಹಣ (Solar Eclipse) ಸೆ. 21 ರಂದು ಮಹಾಲಯ ಅಮವಾಸೆ (Amavasya) ದಿನದಂದು ಸಂಭವಿಸಲಿದೆ. ಆ ಮೂಲಕ ಖಗೋಳದಲ್ಲಿ ನಡೆಯಲಿರುವ ಮತ್ತೊಂದು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಇಡೀ ವಿಜ್ಞಾನ ಲೋಕವೆ ಸಜ್ಜಾಗಿದೆ. ಕೇವಲ ಹದಿನೈದು ದಿನಗಳ ಅಂತರದಲ್ಲಿ ಸೂರ್ಯ-ಚಂದ್ರ ಗ್ರಹಣಕ್ಕೆ ಖಗೋಳ ಸಾಕ್ಷಿಯಾಗುತ್ತಿದ್ದು, ವಿಜ್ಞಾನದ ಆಸಕ್ತರಿಗೆ ಇದು ಸಾಕಷ್ಟು ಮಹತ್ವಕ್ಕೆ ಕಾರಣವಾಗಿದೆ.

ಕಳೆದ ಒಂದು ವಾರದ ಹಿಂದೆಯಷ್ಟೇ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಿತ್ತು. ಇದಾದ ಹದಿನೈದು ದಿನಗಳ ಅಂತರದಲ್ಲಿ ಇದೀಗ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇದು 2025 ರ ಅಂತಿಮ ಸೂರ್ಯ ಗ್ರಹಣವೂ ಹೌದು.

ಇದನ್ನೂ ಓದಿ: Solar Eclipse 2025: ಸೆ. 21 ಸೂರ್ಯಗ್ರಹಣ; ಈ 3 ರಾಶಿಯವರು 6ತಿಂಗಳು ಅತ್ಯಂತ ಜಾಗರೂಕರಾಗಿರಿ

ಸೂರ್ಯನನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಒಟ್ಟು ಗ್ರಹಣಕ್ಕಿಂತ ಭಿನ್ನವಾಗಿದೆ ಅಂತಿದ್ದಾರೆ ವಿಜ್ಞಾನಿಗಳು. ಇದು ಭಾಗಶಃ ಸೂರ್ಯ ಗ್ರಹಣವಾಗಿದ್ದು, ವಿಜ್ಞಾನಿಗಳಿಗೆ ಹಾಗೂ ಆಸಕ್ತರಿಗೆ ವಿಶೇಷವಾಗಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಈ ಅಪರೂಪದ ಸೂರ್ಯ ಗ್ರಹಣ ಸಂಭವಿಸುತ್ತದೆ. ಭೂಮಿಯ ಮೇಲೆ ತನ್ನ ನೆರಳನ್ನು ಬೀಳಿಸಿ ಸೂರ್ಯನ ಬೆಳಕನ್ನು ಭಾಗಶಃ ಅಥವಾ ಸಂಪೂರ್ಣವಾಗಿ ನಿರ್ಬಂಧಿಸುತ್ತದೆ. ಈ ಅಪರೂಪದ ಘಟನೆಯನ್ನು ಚಂದ್ರನ ನೆರಳು ಮಾರ್ಗದಲ್ಲಿ ನಿರ್ದಿಷ್ಟ ಪ್ರದೇಶಗಳಿಂದ ಮತ್ತು ಅಮಾವಾಸ್ಯೆಯ ಸಮಯದಲ್ಲಿ ಮಾತ್ರ ಕಾಣಬಹುದಾಗಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ಚಂದ್ರ ಗ್ರಹಣ ಮುಗಿದ ಬೆನ್ನಲ್ಲೇ ಸೂರ್ಯ ಗ್ರಹಣವೂ ಬಂದಿದೆ. ಸೆ. 7ರಂದು ಚಂದ್ರಗ್ರಹಣ ನಡೆದಿತ್ತು. ಗ್ರಹಣ ಹಿಡಿದ ಚಂದ್ರನನ್ನ ನೋಡಲೂ ಸಾಧ್ಯವಾಗಿತ್ತು. ಇದೀಗ ಸೆ.21ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಪಿತೃಪಕ್ಷದ ಅಮಾವಾಸ್ಯೆಯ ದಿನವಾದ ಸೆ. 21ರಂದು ಸಂಭವಿಸಲಿರುವ ಸೂರ್ಯ ಗ್ರಹಣವು 2025ರ ಎರಡನೇ ಮತ್ತು ಕೊನೆಯ ಗ್ರಹಣವಾಗಿರಲಿದೆ. ಈ ವರ್ಷದ ಮೊದಲ ಸೂರ್ಯ ಗ್ರಹಣ ಮಾರ್ಚ್‌ 29ರಂದು ಸಂಭವಿಸಿತ್ತು. ಸೆ. 21 ರಂದು ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ.

ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರ

ಭೂಮಿ ಮತ್ತು ಸೂರ್ಯನ ನಡುವೆ ಸಮಾನಾಂತರ ರೇಖೆಯಲ್ಲಿ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೆ.21ರಂದು ರಾತ್ರಿ 11 ಗಂಟೆಯಿಂದ ಮರುದಿನ ಮುಂಜಾನೆ 3.23ರವರೆಗೆ ಸೂರ್ಯಗ್ರಹಣ ಇರಲಿದೆ. ಈ ಸಲ ಆಗುತ್ತಿರುವುದು ಭಾಗಶಃ ಅಥವಾ ಖಂಡಗ್ರಾಸ ಸೂರ್ಯಗ್ರಹಣ ಅಂದರೆ ಚಂದ್ರನ ನೆರಳು ಸೂರ್ಯನ ಒಂದು ಭಾಗಕ್ಕೆ ಮಾತ್ರ ಆವರಿಸುತ್ತದೆ. ಸೆ.7ರ ಚಂದ್ರ ಗ್ರಹಣವು ಭಾರತದಾದ್ಯಂತ ಕಾಣಿಸಿತ್ತು. ಆದರೆ ಸೆ.21ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.

ಸೆ.21ರ ಖಂಡಗ್ರಾಸ ಸೂರ್ಯಗ್ರಹಣ ಅಮೆರಿಕಾದ ಸಮೋವಾ, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಕುಕ್‌ ಐಸ್‌ಲ್ಯಾಂಡ್‌, ಫಿಜಿ, ಫ್ರೆಂಚ್‌ ಪೋಲಿನೇಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ಓಷಿಯಾನಿಯಾ ಮತ್ತಿತರ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ.

ನೆಹರು ತಾರಾಲಯ ನಿರ್ದೇಶಕ ಗುರು ಪ್ರಸಾದ್​​ ಹೇಳಿದ್ದಿಷ್ಟು

ಈ ಸಲ ಸೂರ್ಯನಿಗೆ ಗ್ರಹಣ ಸಂಭವಿಸುವ ಸಮಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ, ಅಂದರೆ ಭಾರತದಲ್ಲಿ ಸೂರ್ಯ ಅದಾಗಲೇ ಅಸ್ತಂಗತನಾಗಿರುತ್ತಾನೆ. ಹೀಗಾಗಿ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ ಎಂದು ನೆಹರು ತಾರಾಲಯ ನಿರ್ದೇಶಕ ಗುರು ಪ್ರಸಾದ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: Lunar Eclipse 2025: ರಾಹುಗ್ರಸ್ತ ರಕ್ತ ಚಂದ್ರಗ್ರಹಣ; ಈ 6 ರಾಶಿಯವರಿಗೆ ಉದ್ಯೋಗ ಜೀವನದ ಮೇಲೆ ವಿಶೇಷ ಪ್ರಭಾವ

ಗ್ರಹಣಕ್ಕೆ ಧಾರ್ಮಿಕವಾಗಿ ವಿಶೇಷ ಸ್ಥಾನವಿದೆ. ಗ್ರಹಣವೆಂದರೆ ದೋಷ ಎಂದೂ ನಂಬಿಕೆಯಿದೆ. ಗ್ರಹಣವು ವಿವಿಧ ರಾಶಿಗಳ ಮೇಲೆ ಕೆಟ್ಟ ಪ್ರಭಾವವನ್ನೂ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಗ್ರಹಣ ಕಾಲದಲ್ಲಿ ಅನೇಕರು ಕಟ್ಟುನಿಟ್ಟಾಗಿ ಕೆಲವು ನಿಯಮಗಳನ್ನ ಪಾಲನೆ ಮಾಡುತ್ತಾರೆ. ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ ಭಾರತದಲ್ಲಿ ಈ ಸೂರ್ಯ ಗ್ರಹಣ ತುಂಬ ವಿಶೇಷ ಸ್ಥಾನ ಪಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ