ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೌಂಟ್ಡೌನ್, ಅತೃಪ್ತಿ ಮಧ್ಯೆ ಯಾಱರಿಗೆ ಸಿಗುತ್ತೆ ಮಂತ್ರಿ ಸ್ಥಾನ?
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಒಂದೇ ದಿನ ಬಾಕಿ ಇದೆ. ತಲೆನೋವಾಗುವ ಮಟ್ಟಕ್ಕೆ ಇದ್ದ ಬಿಜೆಪಿಯೊಳಗಿನ ಅಸಮಾಧಾನ ಒಂದಷ್ಟು ಮಟ್ಟಿಗೆ ತಣಿದಂತಾಗಿದೆ. ಮತ್ತೊಂದೆಡೆ, ತಿರುಪತಿಗೆ ತೆರಳಿದ್ದ ಶಾಸಕರು ರಾತ್ರಿ ಬೆಂಗಳೂರಿಗೆ ವಾಪಾಸಾಗಿದ್ದಾರೆ. ನಿತ್ಯ ಸರ್ಕಸ್. ದಿನಕ್ಕೊಂದು ಹೈಡ್ರಾಮಾ. ನಿರಂತರ ಹಗ್ಗಜಗ್ಗಾಟ. ಕಗ್ಗಂಟಾಗಿ ಕಾಡುತ್ತಿದ್ದ ಸಂಪುಟ ವಿಸ್ತರಣೆಗೆ ಕೌಂಟ್ಡೌನ್ ಶುರುವಾಗಿದೆ. ಸಚಿವ ಸ್ಥಾನ ಅಲಂಕರಿಸೋಕೆ ಹಾತೊರೆಯುತ್ತಿದ್ದ ಆಕಾಂಕ್ಷಿಗಳಲ್ಲಿ ಕಾತರ ಕುತೂಹಲ ಮನೆ ಮಾಡಿದೆ. ಎಲ್ಲರೂ ಸಿಎಂ ಕರೆಯತ್ತ ಚಿತ್ತ ನೆಟ್ಟು ಕೂರುವಂತಾಗಿದೆ. ಯಾಕಂದ್ರೆ, ಸಚಿವ ಸಂಪುಟ ಸೇರೋದ್ಯಾರು ಅನ್ನೋ […]
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಒಂದೇ ದಿನ ಬಾಕಿ ಇದೆ. ತಲೆನೋವಾಗುವ ಮಟ್ಟಕ್ಕೆ ಇದ್ದ ಬಿಜೆಪಿಯೊಳಗಿನ ಅಸಮಾಧಾನ ಒಂದಷ್ಟು ಮಟ್ಟಿಗೆ ತಣಿದಂತಾಗಿದೆ. ಮತ್ತೊಂದೆಡೆ, ತಿರುಪತಿಗೆ ತೆರಳಿದ್ದ ಶಾಸಕರು ರಾತ್ರಿ ಬೆಂಗಳೂರಿಗೆ ವಾಪಾಸಾಗಿದ್ದಾರೆ.
ನಿತ್ಯ ಸರ್ಕಸ್. ದಿನಕ್ಕೊಂದು ಹೈಡ್ರಾಮಾ. ನಿರಂತರ ಹಗ್ಗಜಗ್ಗಾಟ. ಕಗ್ಗಂಟಾಗಿ ಕಾಡುತ್ತಿದ್ದ ಸಂಪುಟ ವಿಸ್ತರಣೆಗೆ ಕೌಂಟ್ಡೌನ್ ಶುರುವಾಗಿದೆ. ಸಚಿವ ಸ್ಥಾನ ಅಲಂಕರಿಸೋಕೆ ಹಾತೊರೆಯುತ್ತಿದ್ದ ಆಕಾಂಕ್ಷಿಗಳಲ್ಲಿ ಕಾತರ ಕುತೂಹಲ ಮನೆ ಮಾಡಿದೆ. ಎಲ್ಲರೂ ಸಿಎಂ ಕರೆಯತ್ತ ಚಿತ್ತ ನೆಟ್ಟು ಕೂರುವಂತಾಗಿದೆ. ಯಾಕಂದ್ರೆ, ಸಚಿವ ಸಂಪುಟ ಸೇರೋದ್ಯಾರು ಅನ್ನೋ ಗುಟ್ಟು ರಟ್ಟಾಗಿಲ್ಲ.
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೌಂಟ್ಡೌನ್..! ಯೆಸ್. ರಾಜ್ಯ ಸಂಪುಟ ವಿಸ್ತರಣೆಗೆ ಇನ್ನೊಂದೇ ದಿನ ಬಾಕಿ ಇದೆ. ಜೆಷ್ಟ್ ಶಾಸಕರಾಗಿದ್ದ ಕೆಲವರು ನಾಳೆ ಮಂತ್ರಿ ಆಗ್ತಾರೆ. ಆದ್ರೆ, ಶಾಸಕರಲ್ಲದವರಿಗೆ ಸಚಿವ ಸ್ಥಾನ ನೀಡ್ತಿರೋದು ಕೇಸರಿ ಪಡೆಯಲ್ಲಿ ಕೋಲಾಹಲ ಎಬ್ಬಿಸಿದೆ. ಅದ್ರಲ್ಲೂ ಸಿ.ಪಿ. ಯೋಗೇಶ್ವರ್ ಸಚಿವರಾಗುತ್ತಾರೆ ಅನ್ನೋ ವಿಚಾರವಾಗಿ ಕಿತ್ತಾಟ ತಾರಕಕ್ಕೇರಿದೆ.
ಆದ್ರೆ, ಮೊನ್ನೆ ಯೋಗೇಶ್ವರ್ಗೆ ಸಚಿವ ಸ್ಥಾನ ಬೇಡ ಅಂತಾ ಬಹಿರಂಗ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕರು, ನಿನ್ನೆ ಸಭೆ ನಡೆಸಿದ್ದು ಹೊರತುಪಡಿಸಿದರೆ ಬಹಿರಂಗ ಪ್ರತಿಕ್ರಿಯೆಯಿಂದ ದೂರ ಉಳಿದಿದ್ದಾರೆ. ಹೀಗಾಗಿ, ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಇಂದು ಸಭೆ ನಡೆಸುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಮತ್ತೊಂದೆಡೆ ಕರಾವಳಿ ಕರ್ನಾಟಕ ಭಾಗದ ಶಾಸಕರ ಬೇಸರವನ್ನು ಬೆಳೆಯುವ ಮುನ್ನವೇ ಶಮನಗೊಳಿಸುವ ಕೆಲಸವೂ ನಡೆದುಹೋಗಿದೆ.
ತಿರುಪತಿಯಿಂದ ವಾಪಸ್ ಬಂದ ಮಿತ್ರಮಂಡಳಿ: ಇಲ್ಲಿ ಸಂಪುಟ ವಿಸ್ತರಣೆಯ ಕದನ ಜೋರಾಗಿದ್ರೆ, ಈ ಮಧ್ಯೆ ರಮೇಶ್ ಜಾರಕಿಹೊಳಿ ಮಿತ್ರಮಂಡಳಿ ದೇಗುಲ ಯಾತ್ರೆಗೆ ತೆರಳಿತ್ತು. ಮೊನ್ನೆ ತಿರುಪತಿಗೆ ತೆರಳಿದ್ದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಸಿ.ಪಿ. ಯೋಗೇಶ್ವರ್ ರಾತ್ರಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಮಹೇಶ್ ಕುಮಟಳ್ಳಿಗೆ ಜೂನ್ನಲ್ಲಿ ಮಂತ್ರಿ ಸ್ಥಾನದ ಭರವಸೆ ನೀಡಲಾಗಿದ್ರಿಂದ ಇಂದು ರಮೇಶ್ ಜಾರಕಿಹೊಳಿ ಕ್ಯಾಂಪ್ನಲ್ಲಿ ಸಭೆ ನಡೆಸೋ ಸಾಧ್ಯತೆ ಇದೆ.
ಒಟ್ನಲ್ಲಿ, ಸದ್ಯ ಸಿಎಂ ಯಡಿಯೂರಪ್ಪ ಅವರಿಗೆ 2 ದಿನಗಳ ಹಿಂದೆ ಇದ್ದಷ್ಟು ಒತ್ತಡದ ಪ್ರಮಾಣ ಕಡಿಮೆ ಆಗಿದೆ. ಅದ್ರೆ, ಸಚಿವ ಸ್ಥಾನಾಕಾಂಕ್ಷಿ ಶಾಸಕರಲ್ಲಿ ಬೇಸರ ಮಾತ್ರ ಯಾವ ಪರಿಹಾರವೂ ಸಿಗದೆ ಹಾಗೆಯೇ ಉಳಿದಿದೆ. ಸರ್ಕಾರ ರಚನೆಗೆ ಸಹಾಯ ಮಾಡಿದವರನ್ನು ಸಮಾಧಾನಿಸುವ ಭರದಲ್ಲಿ ತಮ್ಮ ಬೇಡಿಕೆಗಳು ಹಾಗೆಯೇ ಉಳಿದುಹೋಗುತ್ತಿವೆ. ತಮ್ಮ ಮಾತಿಗೆ ಬೆಲೆಯೇ ಇಲ್ಲದಂತಾಗುತ್ತಿದೆ ಎಂಬ ಬೇಸರ ಬಿಜೆಪಿ ಶಾಸಕರಲ್ಲಿ ಉಳಿದಿದ್ದಂತೂ ಸುಳ್ಳಲ್ಲ.