AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Azim Premji University: ಕೋವಿಡ್​ನಿಂದ ಮಕ್ಕಳಲ್ಲಿ ಶೇ. 92ರಷ್ಟು ಕಲಿಕೆಯ ಗ್ರಹಿಕೆ ನಷ್ಟ, ಜ್ಞಾನದ ಅಡಿಪಾಯ ಮತ್ತೆ ಗಟ್ಟಿಗೊಳಿಸುವ ಅನಿವಾರ್ಯತೆ ಇದೆ

Azim Premji University: ಶೇ 92ರಷ್ಟು ಮಕ್ಕಳು, ಗಣಿತ ವಿಷಯದಲ್ಲಿ ಮೊದಲಿನಿಗಿಂತ ಶೇ 80ರಷ್ಟು ಮರೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಉದಾಹರಣೆಗೆ ಅವರ ಸ್ವಂತಿಕೆ ಪದಗಳಲ್ಲಿ ವ್ಯಕ್ತಪಡಿಸುವುದರಲ್ಲಿ, ಅದರಲ್ಲೂ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಕೂಡುವುದು, ಕಳೆಯುವುದರಲ್ಲಿ ಮಕ್ಕಳು ಮೊದಲಿಗಿಂತ ಈಗ ಸೋಲುತ್ತಿದ್ದಾರೆ.

Azim Premji  University: ಕೋವಿಡ್​ನಿಂದ ಮಕ್ಕಳಲ್ಲಿ ಶೇ. 92ರಷ್ಟು ಕಲಿಕೆಯ ಗ್ರಹಿಕೆ ನಷ್ಟ, ಜ್ಞಾನದ ಅಡಿಪಾಯ ಮತ್ತೆ ಗಟ್ಟಿಗೊಳಿಸುವ ಅನಿವಾರ್ಯತೆ ಇದೆ
ಸಾಂದರ್ಭಿಕ ಚಿತ್ರ
shruti hegde
| Updated By: ಸಾಧು ಶ್ರೀನಾಥ್​|

Updated on: Feb 12, 2021 | 4:52 PM

Share

ಬೆಂಗಳೂರು:ಕೋವಿಡ್​ ಸಾಂಕ್ರಾಮಿಕದಿಂದಾಗಿ ಶಾಲೆ ಮುಚ್ಚಲ್ಪಟ್ಟಿದ್ದವು. ಇದರಿಂದ ಮಕ್ಕಳ ಕಲಿಕೆಯಲ್ಲಿ ಅಪಾರ ನಷ್ಟ ಉಂಟಾಗಿದೆ ಎಂಬುದನ್ನು ಅಜೀಂ ಪ್ರೆಮ್​ಜಿ ವಿಶ್ವವಿದ್ಯಾಲಯ ಕೈಗೊಂಡಿದ್ದ ಅಧ್ಯಯನದಿದ ತಿಳಿದುಬಂದಿದೆ. ‘ಸಾಂಕ್ರಾಮಿಕ ಸಮಯದಲ್ಲಿ ಕಲಿಕೆಯ ನಷ್ಟ’ ಕುರಿತಾಗಿ ನಡೆಸಿದ ಅಧ್ಯಯನವನ್ನು ಅಜೀಂ ಪ್ರೆಮ್​ಜಿ ವಿಶ್ವವಿದ್ಯಾಲಯವು ಬುಧವಾರ ಬಿಡುಗಡೆ ಮಾಡಿದೆ.

ಕೋವಿಡ್​ ಸಾಂಕ್ರಾಮಿಕ ರೋಗವು ಶಿಕ್ಷಣದ ಮೇಲೆ ಅತಿಯಾದ ಪರಿಣಾಮ ಬೀರಿದೆ. ಸುಮಾರು 10 ತಿಂಗಳುಗಳ ಕಾಲ ಮುಚ್ಚಲ್ಪಟ್ಟಿದ್ದ ಶಾಲೆಗಳಿಂದಾಗಿ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬಿದ್ದಿದೆ. ಈ ಸಂದರ್ಭದಲ್ಲಿ ಆನ್​ಲೈನ್​ ಕಲಿಕೆಯ ವಿಧಾನಗಳು ಭಾರತದಾದ್ಯಂತ ಪರ್ಯಾಯವಾಗಿ ಉಪಯೋಗಿಸಿಕೊಳ್ಳಲಾಯಿತು. ಆದರೆ, ಹಿಂದುಳಿದ ಅಥವಾ ಹಳ್ಳಿಗಳಲ್ಲಿನ ಮಕ್ಕಳಿಗೆ ಇದು ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.

ಜನವರಿ 21ಕ್ಕೆ ಕೈಗೆತ್ತಿಕೊಂಡ ಈ ಅಧ್ಯಯನದ ಪ್ರಕಾರ, ಶಾಲೆಗಳ ತರಗತಿಯಲ್ಲಿ ಕೂತು ಕಲಿಯುತ್ತಿದ್ದ ಗ್ರಹಿಕೆಗಿಂತ, ಆನ್​ಲೈನ್​ ಕಲಿಕೆಯಿಂದಾಗಿ ಮಕ್ಕಳು ಹಿಂದಿನ ತರಗತಿಯಲ್ಲಿ ಕಲಿತ ವಿಷಯವನ್ನು ಹೆಚ್ಚು ಮರೆಯವ ಸಾಮರ್ಥ್ಯವನ್ನು ಹೊಂದುತ್ತಿದ್ದಾರೆ. 5 ರಾಜ್ಯಗಳಲ್ಲಿ, 44 ಜಿಲ್ಲೆಗಳ 1137 ಶಾಲೆಗಳಲ್ಲಿ 16,067 ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಕಲಿಕೆಯನ್ನು ಮರೆತ ಉದಾಹರಣೆಗಳು ಕಾಣಸಿಗುತ್ತವೆ.

ಇದನ್ನೂ ಓದಿ: Budget 2021 | ಶಿಕ್ಷಣ ವಲಯದ ನಿರೀಕ್ಷೆಗಳೇನು? ಡಿಜಿಟಲ್ ಶಿಕ್ಷಣಕ್ಕೆ ಸಿಗಬಹುದೇ ಒತ್ತು?

ಗ್ರಹಿಕಾ ಸಾಮರ್ಥ್ಯದ ನಷ್ಟ: ಶೇ 92ರಷ್ಟು ಮಕ್ಕಳು, ಗಣಿತ ವಿಷಯದಲ್ಲಿ ಮೊದಲಿನಿಗಿಂತ ಶೇ 80ರಷ್ಟು ಮರೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಉದಾಹರಣೆಗೆ ಒಂದು ಸಾರಾಂಶವನ್ನು ಓದುವ ಗ್ರಹಿಕೆಯಾಗಲೀ, ಅವರ ಸ್ವಂತಿಕೆಯಲ್ಲಿ ಪದಗಳಲ್ಲಿ ವ್ಯಕ್ತಪಡಿಸುವುದರಲ್ಲಿ, ಅದರಲ್ಲೂ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಕೂಡುವುದು, ಕಳೆಯುವುದರಲ್ಲಿ ಮಕ್ಕಳು ಮೊದಲಿಗಿಂತ ಈಗ ಸೋಲುತ್ತಿದ್ದಾರೆ.

ಮಾರ್ಚ್​ 2020ರಿಂದ ಜನವರಿ 2021ರ ವರೆಗೆ ಅಂದರೆ ಶಾಲೆಗಳು ಮುಚ್ಚಲ್ಪಟ್ಟ ದಿನದವರೆಗೆ ಅಜೀಂ​ ಪ್ರೇಮ್​ಜಿ ಫೌಂಡೇಶನ್​ನ 200ಕ್ಕೂ ಹೆಚ್ಚು ಶಿಕ್ಷಕರು ಮತ್ತು 400ಕ್ಕೂ ಹೆಚ್ಚು ಸದಸ್ಯರು ಮಕ್ಕಳ ಶಿಕ್ಷಣದ ಕುರಿತಾಗಿ ಮೌಲ್ಯಮಾಪನ ಮಾಡಿದ್ದಾರೆ.

ಶಾಲೆಗಳು ತೆರೆದ ನಂತರ ಹೆಚ್ಚು ಬೆಂಬಲ ಅಗತ್ಯ: ಭಾರತಕ್ಕೆ ಹಾಗೂ ಇಡೀ ವಿಶ್ವಕ್ಕೆ ಕೊರೊನಾ ಸಾಂಕ್ರಾಮಿಕದಿಂದ ದೊಡ್ಡ ಮಟ್ಟದ ಹೊಡೆತ ಉಂಟಾಗಿದೆ. ಶಿಕ್ಷಣಕ್ಕೆ ನೀಡಿದ ಹೊಡೆತದ ನಷ್ಟವನ್ನು ಎದುರಿಸಬೇಕಾಗಿದೆ. ಬಹುಮುಖ್ಯವಾಗಿ, ಶಾಲೆಗಳು ಮತ್ತೆ ತೆರೆದಾಗ ಈ ಕೊರತೆಯನ್ನು ನೀಗಿಸಲು ಶಿಕ್ಷಕರಿಗೆ ಸಮಯ ನೀಡಬೇಕು. ಇವುಗಳಲ್ಲಿ, ಶಾಲೆಯ ರಜಾ ದಿನಗಳನ್ನು ರದ್ದುಗೊಳಿಸುವುದು, 2021ರ ಶೈಕ್ಷಣಿಕ ಅವಧಿಯನ್ನು ವಿಸ್ತರಿಸುವುದು ಮತ್ತು ಪಠ್ಯಕ್ರಮಗಳನ್ನು ಪುನರ್​ರಚಿಸುವುದು, ಕಾಲೇಜು ಸಮಯವನ್ನು ಮರುರೂಪಿಸುವುದು ಒಳಗೊಂಡಿದೆ ಎಂದು ಅಜೀಂ​ ಪ್ರೇಮ್​ಜಿ ವಿಶ್ವವಿದ್ಯಾಲಯದ ಉಪಕುಲಪತಿ ಅನುರಾಗ್ ಬೆಹರ್ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್​ನಿಂದಾಗಿ ಕಲಿಕೆಯ ನಷ್ಟಕ್ಕೆ ಪರಿಹಾರ: ಮಕ್ಕಳು ಶಾಲೆಗೆ ಮತ್ತೆ ಹೋಗುವಾಗ ಹಿಂದಿನ ತರಗತಿಯ ಜ್ಞಾನದ ಅಡಿಪಾಯವನ್ನು ಮತ್ತೆ ಗಟ್ಟಿಗೊಳಿಸುವ ಅನಿವಾರ್ಯತೆ ಇದೆ. ಇದಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮಗಳು, ಸಮಯದ ಅವಧಿ ಹಾಗೂ ಸುಜ್ಜಿತ ಶಿಕ್ಷಣಕ್ಕೆ ಸಂಬಂಧಿಸಿದ ಬೆಂಬಲ ಅಗತ್ಯವಿದೆ ಎಂದು ವರದಿ ತಿಳಿಸಿದೆ.

ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯದ ಕುರಿತಾಗಿ ಶಿಕ್ಷಕರು ಗಮನವಹಿಸಬೇಕು. ಶಿಕ್ಷಣ ಮತ್ತು ಇತರ ಕಲಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಅಗತ್ಯವಾದ ಮೌಲ್ಯಮಾಪನ ಹೊಂದಿರಬೇಕು. ಒಟ್ಟಿನಲ್ಲಿ ಕಲಿಕೆಯ ನಷ್ಟವನ್ನು ಸುಧಾರಿಸಲು ಶಿಕ್ಷಕರಿಗೆ ಸಮಯದ ಅಗತ್ಯವಿದೆ ಎಂಬುದನ್ನು ಅಧ್ಯಯನ ತಿಳಿಸಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ