
ಹುಬ್ಬಳ್ಳಿ, ಏಪ್ರಿಲ್ 04: ಬೇಸಿಗೆ ರಜೆ (Summer Holiday) ಆರಂಭವಾಗಿದ್ದು, ಜನರು ತಮ್ಮ ತಮ್ಮ ಊರು ಅಥವಾ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದರಿಂದ, ರೈಲುಗಳಲ್ಲಿ (Train) ಸಹಜವಾಗಿ ದಟ್ಟಣೆ ಹೆಚ್ಚಾಗಿದೆ. ಈ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಬಿಟ್ಟಿದೆ. ಬೆಂಗಳೂರು ಮತ್ತು ಮೈಸೂರಿನಿಂದ ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ನಗರಗಳಿಗೆ ವಿಶೇಷ ರೈಲು ಬಿಟ್ಟಿದೆ. ಹಾಗೇ, ಬೆಳಗಾವಿ-ಮಿರಜ್ ನಡುವಿನ ವಿಶೇಷ ರೈಲು ಸಂಚಾರ ಸೇವೆಯನ್ನು ವಿಸ್ತರಿಸಲಾಗಿದೆ.
ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ಕಲಬುರಗಿಯ ನಡುವೆ ಎರಡೂ ಕಡೆಯಿಂದ 30 ಟ್ರಿಪ್ ವಿಶೇಷ ರೈಲುಗಳು ಸಂಚರಿಸಲಿವೆ.
ರೈಲು ಸಂಖ್ಯೆ 06519: ಎಸ್.ಎಂ.ವಿ.ಟಿ. ಬೆಂಗಳೂರು-ಕಲಬುರಗಿ ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲು ಈ ಕೆಳಕಂಡ ದಿನಾಂಕಗಳಂದು ಎಸ್.ಎಂ.ವಿ.ಟಿ. ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಡಲಿದ್ದು ಮರುದಿನ ಬೆಳಿಗ್ಗೆ 07.40ಕ್ಕೆ ಕಲಬುರಗಿಯನ್ನು ತಲುಪಲಿದೆ.
ರೈಲು ಸಂಖ್ಯೆ 06520: ಕಲಬುರಗಿ- ಎಸ್.ಎಂ.ವಿ.ಟಿ. ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲು ಈ ಕೆಳಕಂಡ ದಿನಾಂಕಗಳಂದು ಬೆಳಿಗ್ಗೆ 09.35 ಗಂಟೆಗೆ ಕಲಬುರಗಿಯಿಂದ ಹೊರಡಲಿದ್ದು ಅದೇ ದಿನ ರಾತ್ರಿ 8 ಗಂಟೆಗೆ ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.
ಈ ರೈಲುಗಳು ಹಾಸನ, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ವೆಂಟ್, ಹೊಸಪೇಟೆ ಜಂಕ್ಷನ್, ಕೊಪ್ಪಳ, ಗದಗ, ಎಸ್‌ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಪುಣೆ, ಲೋನಾವಾಲಾ, ಕಲಾಣ್, ವಸಾಯಿ ರೋಡ್, ಸೂರತ್, ವಡೋದರಾ, ರತ್ನಾಂ, ಮಂದಸೋರ್, ನಿಮಾಚ್, ಚಿತ್ತೇರ್ಗಡ್, ಭಿಲ್ವಾರಾ, ಬಿಜೈನಗರ, ನಾಸಿರಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ರೈಲು ಸಂಖ್ಯೆ 06557/06558 ಎಸ್‌ಎಂವಿಟಿ ಬೆಂಗಳೂರು – ಭಗತ್ ಕಿ ಕೋಥಿ – ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ರೈಲು ಒಟ್ಟು 8 ಟ್ರಿಟ್ ಸಂಚರಿಸಲಿದೆ.
ಈ ರೈಲುಗಳು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕರಡ್, ಸತಾರಾ, ಪುಣೆ, ಲೋನಾವಾಲಾ, ಕಲಾಣ್, ಸಾಯಿ ರೋಡ್, ಸೂರತ್, ವಡೋದರಾ, ಸಬರಮತಿ, ಮಹೇಸಾನಾ, ಭಿಲಿ, ರಾಣಿವಾರ ಮಾರ್ವಾರ್, ಬಿನ್ನಲ್ ಮೊದ್ರನ್, ಜಲೋರ್, ಮೊಕಲ್ಲರ್, ಸಂಧಾರಿ ಜಂಕ್ಷನ್, ಲುನಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಇದನ್ನೂ ನೋಡಿ: ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್‌ನಗರ, ಕೋಪರ್‌ಗಾಂವ್, ಮನ್ನಾಡ್, ಭೂಸಾವಲ್, ಖಾಂಡಾ, ಇಟಾರ್ಸಿ, ನರಸಿಂಗ್‌ಪುರ, ಜಬಲ್‌ಪುರ, ಕಟ್ಟಿ, ಸತ್ತಾ, ಮಾಣಿಕ್‌ಪುರ, ಪ್ರಯಾಗ್‌ರಾಜ್ ಛೋಕಿ, ವಂಡಿತ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್, ಅರಾ, ದಾನಾಪುರ, ಪಾಟ್ಲಿಪುತ್ರ, ಮತ್ತು ಹಾಜಿಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
Published On - 8:22 pm, Fri, 4 April 25