Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಗಾದಿ ದಿನವೇ ಕರ್ನಾಟಕದ ವಿವಿದೆಡೆ ತಂಪೆರೆದ ಮಳೆರಾಯ, ಬಿಸಿಲಿನಿಂದ ತತ್ತರಿಸಿದ್ದ ಜನ ಫುಲ್ ಖುಷ್

ಯುಗಾದಿ ದಿನವೇ ಇಂದು (ಏಪ್ರಿಲ್ 09) ಕರ್ನಾಟಕದ ಹಲವೆಡೆ ಮಳೆಯಾಗಿದೆ. ಇದೊಂದಿಗೆ ಬಿಸಿಲಿನ ತಾಪಕ್ಕೆ ಬೆಂಡಾದ ಜನರಿಗೆ ಮಳೆರಾಯ ಕೊಂಚ ತಂಪೆರೆದಿದ್ದಾನೆ. ಯುಗಾದಿ ಹಬ್ಬದ ದಿನವೇ ವಿವಿಧ ಜಿಲ್ಲೆಗಳಲ್ಲಿ ಮೊದಲ ಮಳೆ ಸುರಿದಿದೆ. ಕೊಪ್ಪಳ, ಹಾವೇರಿ ಮತ್ತು ಬಾಗಲಕೋಟೆಯಲ್ಲಿ ಮಳೆಯಾಗಿದ್ದು, , ಬರಗಾಲದಲ್ಲಿ ವರುಣನ ಆಗಮನದಿಂದ ಜನರಿಗೆ ಖುಷಿ ತಂದಿದೆ.

ಯುಗಾದಿ ದಿನವೇ ಕರ್ನಾಟಕದ ವಿವಿದೆಡೆ ತಂಪೆರೆದ ಮಳೆರಾಯ, ಬಿಸಿಲಿನಿಂದ ತತ್ತರಿಸಿದ್ದ ಜನ ಫುಲ್ ಖುಷ್
ಮಳೆ ಬಂದ ಖುಷಿಯಲ್ಲಿ ಉಚ್ಚಂಗಿದುರ್ಗದ ಜನ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Apr 09, 2024 | 9:49 PM

ಕೊಪ್ಪಳ/ಹಾವೇರಿ, (ಏಪ್ರಿಲ್ 09): ರಾಜ್ಯದಲ್ಲಿ ಈ ಭಾರಿಯ ಭೀಕರ ಬರಗಾಲ (Drought)  ಮತ್ತು ಸುಡು ಬಿಸಿಲಿನ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಮಳೆ ಯಾವಾಗ ಆಗುತ್ತೆ ಎಂದು ಜನ ಆಕಾಶದತ್ತ ಮುಖ ಮಾಡಿ ನೋಡುತ್ತಿದ್ದಾರೆ. ಆದ್ರೆ, ರಣ, ರಣ ಬಿಸಿಲಿನ ತಾಪಕ್ಕೆ ಬೆಂದಿದ್ದ ಕರ್ನಾಟಕದ(Karnataka)  ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಹೌದು.. ಯುಗಾದಿ ಹಬ್ಬದಂದು (Ugadi Festival)  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೊಪ್ಪಳ, ವಿಜಯನಗರ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ವರುಣ ತನ್ನ ಕೃಪೆ ತೋರಿಸಿದ್ದಾನೆ. ಇದರಿಂದ ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಜನಕ್ಕೆ ಮಳೆರಾಯ ಆಗಮನದಿಂದ ಕೊಂಚ ತಂಪೆರೆದಿದ್ದಾನೆ. ಇದರಿಂದ ಜನ ಕುಣಿದು ಕುಪ್ಪಳಿಸಿದ್ದಾರೆ.

ವಿಜಯನರದಲ್ಲಿ ಕುಣಿದು ಕುಪ್ಪಳಿಸಿದ ಜನ

ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಕೆಲ ಕಾಲ ಜಿಟಿ, ಜಿಟಿ ಮಳೆ ಸುರಿದಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಉಚ್ಚಂಗೆಮ್ಮನ ಜಾತ್ರೆಯಿತ್ತು. ಜಾತ್ರೆ ಸಮಯದಲ್ಲಿ ಮಳೆ ಸುರಿದಿದ್ದು ಜನ ಫುಲ್ ಖುಷಿಯಾಗಿದ್ದಾರೆ. ಕಲ್ಲು ಗುಡ್ಡದಿಂದ ತುಂಬಿದ್ದ ಉಚ್ಚೆಂಗಮ್ಮ ಜಾಗದಲ್ಲಿ ವರುಣ ತಂಪೆರೆದಿದ್ದು, ಕೆಲ ಕಾಲ ಸುರಿದ ಮಳೆಯಲ್ಲಿ ಜನ ಕುಣಿದು ಕುಪ್ಪಳಿಸಿದ್ದಾರೆ.

ಕೊಪ್ಪಳದಲ್ಲಿ ಹಾರಿ ಹೋದ ತಗಡಿನ ಛಾವಣಿ

ಇನ್ನು ಕೊಪ್ಪಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಇಂದು ಕೆಲ ಕಾಲ ಉತ್ತಮ ಮಳೆಯಾಗಿದೆ. ಯುಗಾದಿ ಹಬ್ಬದ ದಿನವೇ ವರುಣ ಕೃಪೆ ತೋರಿದ್ದು ಸಂತಸಕ್ಕೆ ಕಾರಣವಾಗಿದೆ. ಕೊಪ್ಪಳ ತಾಲೂಕು ಸೇರಿದಂತೆ ಜಿಲ್ಲೆ ಹಲವು ಗ್ರಾಮಗಳಲ್ಲಿ ಮಳೆ ಸುರಿದಿದ್ದು, ಈ ವರ್ಷ ಮಳೆ ಸಮೃದ್ಧವಾಗಲಿ, ರೈತರ ಬಾಳು ಬೆಳಗಲಿ ಎಂದು ರೈತರು ಮಳೆರಾಯನಲ್ಲಿ ಬೇಡಿಕೊಂಡಿದ್ದಾರೆ. ಇನ್ನು ಹಲಗೇರಿ ಗ್ರಾಮದಲ್ಲಿ ಗಾಳಿ ಮಳೆಯಿಂದ ಮನೆಯ ತಗಡಿನ ಛಾವಣಿ ಹಾರಿ ಹೋಗಿದೆ. ಗ್ರಾಮದ ದೇವಪ್ಪ ಗುಡದಾನೂರು ಎಂಬುವವರಿಗೆ ಸೇರಿದ ಮನೆಯ ಮೇಲೆ ಹಾಕಲಾಗಿದ್ದ ತಗಡಿನ ಛಾವಣಿ ಹಾರಿ ಹೋಗಿದ್ದು, ಅದೃಷ್ಠವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಬಾಗಲಕೋಟೆಯಲ್ಲಿ ತುಂತುರು ಮಳೆ ಹಾಗೇ ಬಾಗಲಕೋಟೆಯ ವಾಂಬೆ ಕಾಲೋನಿಯಲ್ಲಿ ತುಂತುರು ಮಳೆಯಾಗಿದೆ. ಕಳೆದ 15 ನಿಮಿಷದಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು. ಬಿರು ಬಿಸಿಲಿನಿಂದ ತತ್ತರಿಸಿದ ಜನರಿಗೆ ತಂಪೆರೆದಿದ್ದಾನೆ.

ಹಾವೇರಿಯಲ್ಲೂ ತಂಪೆರೆದ ಮಳೆರಾಯ

ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣ ಸೇರಿದಂತೆ ಸುತ್ತಮೂತ್ತಲಿಮ ಗ್ರಾಮಗಳಲ್ಲಿ ಯುಗಾದಿ ಹಬ್ಬದಂದು ಹತ್ತು ನಿಮಿಷಗಳ ಕಾಲ ಮಳೆಯಾಗಿದೆ‌.‌ ಬ್ಯಾಡಗಿ ಪಟ್ಟಣ ಸೇರಿದಂತೆ, ಬನ್ನಹಟ್ಟಿ, ಬಿಸಲಹಳ್ಳಿ ಸೇರಿದಂತೆ ಸುತ್ತಮೂತ್ತಲಿನ ಗ್ರಾಮದಲ್ಲಿ ಕೆಲಕಾಲ ಮಳೆ ಸುರಿದಿದೆ. ಇದರಿಂದ ಸುಡು ಬಿಸಿಲಿನ ಝಳಕ್ಕೆ ತತ್ತರಿ ಹೋಗಿದ್ದ ಭೂಮಿಗೆ ತಂಪಾಗಿದೆ. ಈ ವರ್ಷದ ಭೀಕರ ಬರಗಾಲಕ್ಕೆ ತತ್ತರಿಸಿ ಹೋಗಿದ್ದ ಜನರು ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

Published On - 9:44 pm, Tue, 9 April 24

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ