ದೆಹಲಿ: ಕೋಲಾರ ಜಿಲ್ಲೆಯ ಅನೇಕ ತಾಲೂಕಿನ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬಹುದಾದ ಮಾರ್ಕಂಡೇಯ ಜಲಾಶಯದ ನಿರ್ಮಾಣಕ್ಕೆ ಕೊಕ್ಕೆ ಹಾಕಿದ್ದ ತಮಿಳುನಾಡಿಗೆ ಭಾರಿ ಮುಖಭಂಗವಾಗಿದೆ.
ಜಲಾಶಯದ ನಿರ್ಮಾಣ ವಿರೋಧಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ನ್ಯಾ. ಉದಯ್ ಲಲಿತ್ ನೇತೃತ್ವದ ಪೀಠ ಇಂದು ಅರ್ಜಿಯನ್ನ ವಜಾಗೊಳಿಸಿದೆ. ಕೋಲಾರ ಜಿಲ್ಲೆಯ ಮಾಲೂರು ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕ ಸರ್ಕಾರವು ಈ ಜಲಾಶಯವನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ. ಈ ಜಲಾಶಯ ನಿರ್ಮಾಣದಿಂದ ಕೋಲಾರ, ಬಂಗಾರಪೇಟೆ ತಾಲೂಕಿನ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ.
Published On - 6:05 pm, Thu, 14 November 19