ಸುರಪುರದಲ್ಲಿ ಅನುಕಂಪ ಅಲೆ: ಶಾಸಕ ಪುತ್ರ ಅಥವಾ ಸೋತ ಬಿಜೆಪಿ ಅಭ್ಯರ್ಥಿ -ಇವರಿಬ್ಬರಲ್ಲಿ ಮತದಾರನ ಒಲವು ಯಾರತ್ತ?
ಶಾಸಕ ರಾಜಾ ವೆಂಕಟಪ್ಪ ನಾಯಕ ಅಕಾಲಿಕ ನಿಧನದಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಹಾಗೂ ಕಾಂಗ್ರೆಸ್ ನಿಂದ ರಾಜಾ ವೇಣುಗೋಪಾಲ ನಾಯಕ ಕಣದಲ್ಲಿ ಉಳಿಯುವ ಸಾಧ್ಯತೆಯಿದೆ. ಹೀಗಾಗಿ ಜಿದ್ದಾಜಿದ್ದಿನ ಕಣದಲ್ಲಿ ಅನುಕಂಪದ ಅಲೆ ವರ್ಕೌಟ್ ಆಗುತ್ತಾ ಅಥವಾ ಸೋತ ರಾಜುಗೌಡಗರನ್ನು ಗೆಲ್ಲಿಸುತ್ತಾರಾ ಅಂತ ಕಾದು ನೋಡಬೇಕಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆ ಮುಗಿದು ವರ್ಷ ಕಳೆದಿಲ್ಲ.. ಇದರ ಮಧ್ಯೆ ಸುರಪುರ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಶಾಸಕರ ಅಕಾಲಿಕ ಮರಣದಿಂದ ಉಪ ಚುನಾವಣೆಯ ಅಖಾಡ ಸಜ್ಜಾಗಿದೆ. ಚುನಾವಣೆಗೆ ದಿನಾಂಕ ಘೋಷಣೆ ಆಗ್ತಾಯಿದ್ದ ಹಾಗೆ ಕಾಂಗ್ರೆಸ್ ತನ್ನ ಅಭ್ಯರ್ಥಿ ಸಹ ಘೋಷಣೆ ಮಾಡಿದೆ. ತಂದೆಯ ಸ್ಥಾನಕ್ಕೆ ಮಗನ ಸ್ಪರ್ಧೆಯಿಂದ ಚುನಾವಣೆ ಕಣ ರಂಗೇರಲಿದೆ. ಯಸ್ ಈ ವಿದ್ಯಮಾನಗಳು ಕಂಡು ಬಂದಿರುವುದು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ.
ಹೌದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ವರ್ಷ ಕಳೆದಿಲ್ಲ. ಇದರ ಮದ್ಯೆ ಸುರಪುರ ವಿಧಾನಸಭೆಗೆ ಉಪ ಚುನಾವಣೆ ಎದುರಾಗಿದೆ. ಯಾಕೆಂದ್ರೆ ಸುರಪುರ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದ ರಾಜಾ ವೆಂಕಟಪ್ಪ ನಾಯಕ ಆಯ್ಕೆಯಾಗಿದ್ರು.. ಆಯ್ಕೆಯಾಗುವ ಮೂಲಕ ನಾಲ್ಕನೇ ಬಾರಿ ವಿಧಾನಸಭೆಗೆ ಎಂಟ್ರಿ ಕೊಟ್ಟಿದ್ರು. ಕಳೆದ ಒಂದು ತಿಂಗಳ ಹಿಂದೆಷ್ಟೇ ವೆಂಕಟಪ್ಪರಿಗೆ ಉಗ್ರಾಣ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದ್ರೆ ಅಧಿಕಾರ ಸ್ವೀಕರಿಸಿದ್ದ ವಾರದಲ್ಲೇ ಅಕಾಲಿನ ನಿಧನ ಹೊಂದಿದ್ದಾರೆ.
ಇದೆ ಕಾರಣಕ್ಕೆ ಸುರಪುರ ಕ್ಷೇತ್ರಕ್ಕೆ ಈಗ ಬೈ ಎಲೆಕ್ಷನ್ ಎದುರಾಗಿದೆ. ಲೋಕಸಭಾ ಚುನಾವಣೆಗೆಯ ಎರಡನೇ ಹಂತದಲ್ಲಿ ಸುರಪುರ ಕ್ಷೇತ್ರದ ಉಪ ಚುನಾವಣೆ ಕೂಡ ನಡೆಯಲಿದೆ. ಮೇ 7 ರಂದು ಚುನಾವಣೆ ನಡೆಯೋದಾಗಿ ಚುನಾವಣೆ ಆಯೋಗ ಘೋಷಣೆ ಮಾಡಿದೆ. ಚುನಾವಣೆಗೆ ದಿನಾಂಕ ಘೋಷಣೆ ಆಗ್ತಾಯಿದ್ದ ಹಾಗೆ ಈಗ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ. ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲಗೆ ಕಾಂಗ್ರೆಸ್ ಮಣೆ ಹಾಕಿದೆ.
ಕಾಂಗ್ರೆಸ್ ದಿವಂಗತ ಶಾಸಕ ರಾಜಾ ವೆಂಕಟಪ್ಪ ನಾಯಕ ಪುತ್ರನಿಗೆ ನಿರೀಕ್ಷೆಯಂತೆ ಟಿಕೆಟ್ ನೀಡಿದೆ. ಎಸ್ ಟಿ ಮೀಸಲು ಕ್ಷೇತ್ರವಾಗಿರುವ ಸುರಪುರದಲ್ಲಿ ವೆಂಕಟಪ್ಪ ನಾಯಕ ಕುಟುಂಬ ಕಳೆದ ನಾಲ್ಕೈದು ದಶಕದಿಂದ ರಾಜಕಾರಣ ಮಾಡ್ತಾಯಿದೆ. ಕಾಂಗ್ರೆಸ್ ನಿಂದ ಆಯ್ಕೆ ಆಗಿ ಮೃತ ಪಟ್ಟಿದ್ದಕ್ಕೆ ಈಗ ಮಗನಿಗೆ ಟಿಕೆಟ್ ನೀಡಿದೆ.
Also Read: ಅವರಿಬ್ಬರೂ ಮಹಿಳೆಯರು-ಬೀಗರು, ಈ ಹಿಂದೆ ಅವರ ಗಂಡಂದಿರೂ ಪರಸ್ಪರ ಎದುರಾಳಿ ಆಗಿದ್ದವರು… ಏನಿದು ದಾವಣಗೆರೆಯ ಕದನ ಕುತೂಹಲ!
ಯಾಕೆಂದ್ರೆ ತಂದೆಯ ಅಕಾಲಿಕ ನಿಧನದ ಅನುಕಂಪ ಅಲೆ ಇರುವ ಕಾರಣಕ್ಕೆ ಕುಟುಂಬಕ್ಕೆ ಟಿಕೆಟ್ ನೀಡಿದೆ. ಬಯಸದೆ ಬಂದ ಭಾಗ್ಯ ಎನ್ನುವ ಹಾಗೆ ಕಾಂಗ್ರೆಸ್ ನಿಂದ ವೇಣುಗೋಪಾಲ ನಾಯಕ ದುಖದಲ್ಲೇ ಚುನಾವಣೆಗೆ ಸ್ಪರ್ಧೆ ಮಾಡುವಂತಾಗಿದೆ. ತಂದೆ ಗೆದ್ದು ಐದು ವರ್ಷ ಕ್ಷೇತ್ರದ ಜನರ ಸೇವೆ ಮಾಡ್ತಾರೆ ಅಂತ ಅಂದುಕೊಂಡಿದ್ವಿ ಆದ್ರೆ ನಿಧನದಿಂದ ನಮ್ಗೆ ಬಹಳ ಶಾಕ್ ಆಗಿದೆ. ಇನ್ನು ತಂದೆ ಜೊತೆ ಕಳೆದ ಮೂರು ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಓಡಾಡಿದ್ದೆನೆ. ಹೀಗಾಗಿ ಚುನಾವಣೆಯನ್ನ ಎದರಿಸೋದು ತೀರಾ ಕಷ್ಟ ಏನು ಅಲ್ಲ. ಯಾಕೆಂದ್ರೆ ಜನ ತಂದೆ ಹಾಗೆ ನನಗೂ ಕೈ ಹಿಡಿಯುತ್ತಾರೆ ಅಂತ ಭರವಸೆಯಿದೆ. ಇನ್ನು ನಮ್ದೆ ಸರ್ಕಾರ ಆಡಳಿತದಲ್ಲಿ ಹೀಗಾಗಿ ಸರ್ಕಾರ ಇರೋ ಕಾರಣಕ್ಕೆ ಇದರ ಜೊತೆಗೆ ಗ್ಯಾರಂಟಿಗಳು ಸಹ ಇವೆ. ಹಾಗೆಯೇ ನಮ್ಮ ಮೇಲೆ ಜನರ ಅನುಕಂಪ ಕೂಡ ಇದೆ. ಹೀಗಾಗಿ ಈ ಬಾರಿ ಜನ ಖಂಡಿತ ಮತ್ತೊಮ್ಮೆ ನಮ್ಗೆ ಗೆಲ್ಲಿಸುತ್ತಾರೆ ಅಂತ ಭರವಸೆಯಿದೆ ಅಂತ ರಾಜಾ ವೇಣುಗೋಪಾಲ ನಾಯಕ ಆತ್ಮವಿಶ್ವಾಸದ ಮಾತನ್ನಾಡಿದ್ದಾರೆ.
ಇದರ ಜೊತೆಗೆ ಟಿಕೆಟ್ ಘೋಷಣೆಯಾದ ಬೆನ್ನಲೆ ಅಭ್ಯರ್ಥಿ ವೇಣುಗೋಪಾಲ ನಾಯಕ ಆಕ್ಟಿವ್ ಆಗಿದ್ದಾರೆ. ದುಃಖದಲ್ಲೇ ಕ್ಷೇತ್ರದ ಜನ ಹಾಗೂ ಕಾರ್ಯಕರ್ತರ ಸಭೆಗಳನ್ನ ಮಾಡ್ತಾಯಿದ್ದಾರೆ. ಹಾಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅಕಾಲಿಕ ನಿಧನದಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ. ಆದ್ರೆ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಕೊನೆಗೆ ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಹಾಗೂ ಕಾಂಗ್ರೆಸ್ ನಿಂದ ರಾಜಾ ವೇಣುಗೋಪಾಲ ನಾಯಕ ಕಣದಲ್ಲಿ ಉಳಿಯುವ ಸಾಧ್ಯತೆಯಿದೆ. ಹೀಗಾಗಿ ಜಿದ್ದಾಜಿದ್ದಿನ ಕಣದಲ್ಲಿ ಅನುಕಂಪದ ಅಲೆ ವರ್ಕೌಟ್ ಆಗುತ್ತಾ ಅಥವಾ ಸೋತ ರಾಜುಗೌಡಗರನ್ನು ಗೆಲ್ಲಿಸುತ್ತಾರಾ ಅಂತ ಕಾದು ನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ