ದಾವಣಗೆರೆ: ಭಾರಿ ಮಳೆ, ಗಾಳಿಯ ರಭಸಕ್ಕೆ ಕುಸಿದು ಬಿದ್ದ ಮನೆ: ಮಾಲೀಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ನಾಗರಾಜ್ ಭೋವಿಯವರದ್ದು ಕೆಂಪು ಹೆಂಚಿನ ಮನೆಯಾಗಿತ್ತು. ರಾತ್ರಿ ನಾಗರಾಜ್ ದಂಪತಿ ಹಾಗೂ ಮಕ್ಕಳು ಮಲಗಿದ್ದರು. ಈ ವೇಳೆ ಮಳೆಯ ರಭಸ ಜೋರಾಗಿತ್ತು. ಮಳೆ ಸಹಿತ ಗಾಳಿ ಜೋರಾಗಿ ಬೀಸುತ್ತಿದ್ದುದನ್ನು ಕಂಡ ನಾಗರಾಜ್ ಮನೆಯವರಿಗೆ ಹೊರ ಬರಲು ಹೇಳಿದ್ದಾರೆ. ಮನೆಯವರೆಲ್ಲ ಮನೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಮನೆ ಕುಸಿದು ಬಿದ್ದಿದೆ. ನಾಗರಾಜ್ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ದಾವಣಗೆರೆ: ಜಿಲ್ಲೆಯಲ್ಲಿ ನಿನ್ನೆ ವಿಪರೀತವಾಗಿ ಸುರಿದ ಮಳೆಗೆ ಚೆನ್ನಗಿರಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಮನೆ ಕುಸಿದಿದೆ. ನಾಗರಾಜ್ ಭೋವಿ ಎಂಬುವವರಿಗೆ ಸೇರಿದ ಮನೆಯಾಗಿತ್ತು. ಅದೃಷ್ಟವಶಾತ್ ಮನೆಯ ಒಳಗೆ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರಿ ಮಳೆಯಿಂದ ಮನೆ ಕುಸಿದ ಹಿನ್ನೆಲೆಯಲ್ಲಿ ಸರ್ಕಾರ ನೆರವು ನೀಡಬೇಕು. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮನೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ.. ನಾಗರಾಜ್ ಭೋವಿಯವರದ್ದು ಕೆಂಪು ಹೆಂಚಿನ ಮನೆಯಾಗಿತ್ತು. ರಾತ್ರಿ ನಾಗರಾಜ್ ದಂಪತಿ ಹಾಗೂ ಮಕ್ಕಳು ಮಲಗಿದ್ದರು. ಈ ವೇಳೆ ಮಳೆಯ ರಭಸ ಜೋರಾಗಿತ್ತು. ಮಳೆ ಸಹಿತ ಗಾಳಿ ಜೋರಾಗಿ ಬೀಸುತ್ತಿದ್ದುದನ್ನು ಕಂಡ ನಾಗರಾಜ್ ಮನೆಯವರಿಗೆ ಹೊರ ಬರಲು ಹೇಳಿದ್ದಾರೆ. ಮನೆಯವರೆಲ್ಲ ಮನೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಮನೆ ಕುಸಿದು ಬಿದ್ದಿದೆ. ನಾಗರಾಜ್ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ಮಳೆ ರಭಸ ಹೆಚ್ಚಾದ ಹಿನ್ನೆಲೆ ಹೆಂಚಿನ ಮನೆ ಕುಸಿತ
ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಸೂಚನೆ
ಇದನ್ನೂ ಓದಿ: Bangalore Rain Updates: ಬೆಂಗಳೂರಲ್ಲಿ ಮಳೆ ಆರಂಭ, 2 ದಿನ ಮುಂದುವರಿಯಲಿದೆ ಇದೇ ವಾತಾವರಣ