ಈ ಬಾರಿ ಸಾಮಾನ್ಯವಾಗಿರಲಿದೆ ನೈಋತ್ಯ ಮಾನ್ಸೂನ್; ಹವಾಮಾನ ಇಲಾಖೆ ವರದಿಯಿಂದ ಆರ್ಥಿಕ ತಜ್ಞರು ಫುಲ್​ ಖುಷ್​

| Updated By: Digi Tech Desk

Updated on: Apr 17, 2021 | 2:56 PM

ದೀರ್ಘಾವಧಿ ಸರಾಸರಿ ಶೇ.96 ರಿಂದ ಶೇ.104ರವರೆಗೆ ಮಳೆಯಾದರೆ ಅದನ್ನು ಸಾಮಾನ್ಯ ಮಾನ್ಸೂನ್​ ಎಂದೇ ಪರಿಗಣಿಸಲಾಗುತ್ತದೆ. ಜೂನ್​ನಿಂದ ಪ್ರಾರಂಭವಾಗುವ ನೈಋತ್ಯ ಮಾನ್ಸೂನ್​ ಮುನ್ಸೂಚನಾ ವರದಿಯನ್ನು ಮೇ ತಿಂಗಳ ಕೊನೇ ವಾರದಲ್ಲಿ ಹವಾಮಾನ ಇಲಾಖೆ ನೀಡಲಿದೆ.

ಈ ಬಾರಿ ಸಾಮಾನ್ಯವಾಗಿರಲಿದೆ ನೈಋತ್ಯ ಮಾನ್ಸೂನ್; ಹವಾಮಾನ ಇಲಾಖೆ ವರದಿಯಿಂದ ಆರ್ಥಿಕ ತಜ್ಞರು ಫುಲ್​ ಖುಷ್​
ಮಳೆ (ಪ್ರಾತಿನಿಧಿಕ ಚಿತ್ರ)
Follow us on

ದೆಹಲಿ: ಈ ಬಾರಿ ದೇಶದಲ್ಲಿ ನೈಋತ್ಯ ಮಾನ್ಸೂನ್​ ಸಾಮಾನ್ಯವಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜೂನ್​​ನಲ್ಲಿ ಶುರುವಾಗುವ ಈ ನೈಋತ್ಯ ಮಾನ್ಸೂನ್​ ಮಳೆ ಸೆಪ್ಟೆಂಬರ್​ವರೆಗೆ ಬೀಳಲಿದ್ದು, ಕಳೆದ ಮೂರುವರ್ಷಗಳಿಂದ ನೈಋತ್ಯ ಮಾನ್ಸೂನ್​ ಎಫೆಕ್ಟ್​ ಸರಾಸರಿಗಿಂತ ಜಾಸ್ತಿಯೇ ಇರುತ್ತಿತ್ತು. ಈ ಬಾರಿ ನಾಲ್ಕು ತಿಂಗಳ ದೀರ್ಘಾವಧಿ ಸರಾಸರಿ (ಎಲ್​​ಪಿಎ) ಶೇ.98ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಇದು ಸಾಮಾನ್ಯ ಮಾನ್ಸೂನ್​ ಎನ್ನಿಸಿಕೊಳ್ಳಲಿದೆ ಎಂದು ಐಎಂಡಿ ಹೇಳಿದೆ.

ದೀರ್ಘಾವಧಿ ಸರಾಸರಿ ಶೇ.96 ರಿಂದ ಶೇ.104ರವರೆಗೆ ಮಳೆಯಾದರೆ ಅದನ್ನು ಸಾಮಾನ್ಯ ಮಾನ್ಸೂನ್​ ಎಂದೇ ಪರಿಗಣಿಸಲಾಗುತ್ತದೆ. ಜೂನ್​ನಿಂದ ಪ್ರಾರಂಭವಾಗುವ ನೈಋತ್ಯ ಮಾನ್ಸೂನ್​ ಮುನ್ಸೂಚನಾ ವರದಿಯನ್ನು ಮೇ ತಿಂಗಳ ಕೊನೇ ವಾರದಲ್ಲಿ ಹವಾಮಾನ ಇಲಾಖೆ ನೀಡಲಿದೆ. ಹಾಗೇ, ಜೂನ್​ನಿಂದ ಸೆಪ್ಟೆಂಬರ್​ವರೆಗೆ ಪ್ರತಿತಿಂಗಳ ಮುನ್ಸೂಚನೆಯನ್ನೂ ಅಪ್​ಡೇಟ್ ಮಾಡಲಾಗುವುದು ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮಾಧವನ್​ ರಾಜೀವನ್ ತಿಳಿಸಿದ್ದಾರೆ.

ಕೃಷಿಗೆ ತೊಡಕಿಲ್ಲ
ಇನ್ನು ಈ ಬಾರಿ ನೈಋತ್ಯ ಮಾನ್ಸೂನ್​ ಸಾಮಾನ್ಯವಾಗಿರಲಿದೆ ಎಂಬ ಹವಾಮಾನ ಇಲಾಖೆ ವರದಿಯ ಬಗ್ಗೆ ಆರ್ಥಿಕ ತಜ್ಞರು ಖುಷಿ ವ್ಯಕ್ತಪಡಿಸಿದ್ದಾರೆ. ಕೃಷಿವಲಯಕ್ಕೆ ನಿಜಕ್ಕೂ ಇದು ಗುಡ್​ನ್ಯೂಸ್ ಎಂದು ಹೇಳಿದ್ದಾರೆ. ಮಾನ್ಸೂನ್​ ಸಾಮಾನ್ಯವಾಗಿರಲಿದೆ ಎಂಬ ಹವಾಮಾನ ಇಲಾಖೆಯ ವರದಿ ನಿಜಕ್ಕೂ ಸಮಾಧಾನ ತಂದಿದೆ ಎಂದು ಐಸಿಆರ್​ಎ ಮುಖ್ಯ ಆರ್ಥಿಕ ತಜ್ಞರಾದ ಅದಿತಿ ನಾಯರ್​ ತಿಳಿಸಿದ್ದಾರೆ.

ಇದನ್ನೂ ಓದಿ:  ನನ್ನ ಸಂಪರ್ಕದಲ್ಲಿದ್ದವರೆಲ್ಲಾ ಕ್ವಾರಂಟೈನ್ ಆಗಿ, ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ: ಬಿ.ಎಸ್.ಯಡಿಯೂರಪ್ಪ ಮನವಿ

ರಾತ್ರೋರಾತ್ರಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ-ರಣವೀರ್​ ಸಿಂಗ್​! ಕೊರೊನಾ ಕಾರಣ

Published On - 5:45 pm, Fri, 16 April 21