AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ವರ್ಷಗಳ ಹಿಂದೆ ತೀವ್ರ ನಷ್ಟದ ಸುಳಿಗೆ ಸಿಲುಕಿದ್ದ ಬ್ಯಾಂಕ್​ ಇಂದು ದೇಶದಲ್ಲೇ ನಂಬರ್​ ಒನ್ !

7 ವರ್ಷಗಳ ಹಿಂದೆ ನಷ್ಟದಲ್ಲಿದ್ದ ಕೋಲಾರದ ಡಿ.ಸಿ.ಸಿ ಬ್ಯಾಂಕ್ ಇಂದು ದೇಶದಲ್ಲೇ ನಂಬರ್​ ಒನ್​ ಬ್ಯಾಂಕ್​ ಆಗಿ ಎಲ್ಲಡೆ ಹೆಸರು ಪಡೆದಿದೆ.

7 ವರ್ಷಗಳ ಹಿಂದೆ ತೀವ್ರ ನಷ್ಟದ ಸುಳಿಗೆ ಸಿಲುಕಿದ್ದ ಬ್ಯಾಂಕ್​ ಇಂದು ದೇಶದಲ್ಲೇ ನಂಬರ್​ ಒನ್ !
ಕೋಲಾರ ಡಿ.ಸಿ.ಸಿ ಬ್ಯಾಂಕ್​
ರಾಜೇಶ್ ದುಗ್ಗುಮನೆ
| Edited By: |

Updated on: Jan 31, 2021 | 3:56 PM

Share

ಕೋಲಾರ: ಏಳು ವರ್ಷಗಳ ಹಿಂದೆ ನಷ್ಟದಿಂದ ಬೀಗಹಾಕಲು ಚಿಂತನೆ ನಡೆಸಿದ್ದ ಬ್ಯಾಂಕ್​ ಇಂದು ದೇಶದಲ್ಲೇ ನಂಬರ್​ ಒನ್ ಬ್ಯಾಂಕ್​ ಆಗಿ ಹೊರಹೊಮ್ಮಿದೆ. ನಷ್ಟದ ಸುಳಿಯಲ್ಲಿದ್ದ ಕೋಲಾರದ ಡಿಸಿಸಿ ಬ್ಯಾಂಕ್   ಒಮ್ಮೆ ಮೈಕೊಡವಿ ಎದ್ದು ನಿಂತ ಪರಿಣಾಮ, ಇಂದು ಹಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ದೇಶದಲ್ಲೇ ನಂಬರ್​ ಒನ್​ ಸ್ಥಾನ ಪಡೆದುಕೊಂಡಿದೆ.

ಮನೆ ಮನೆಗೆ ಮೈಕ್ರೋ ಎಟಿಎಂ, ಮೊಬೈಲ್​ ಎಟಿಎಂ, ಮಹಿಳಾ ಸ್ತ್ರೀಶಕ್ತಿ ಸಂಘಗಳಿಗೆ ಸಾವಿರಾರು ಕೋಟಿ ರೂಪಾಯಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುವುದು, ಬೀದಿ ಬದಿ ವ್ಯಾಪಾರಿಗಳಿಗೆ ಕೈ ಸಾಲ, ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಯೋಜನೆಗಳನ್ನು ದೇಶದಲ್ಲೇ ಮೊದಲು ಜಾರಿಗೆ ತಂದ ಕೀರ್ತಿ ಕೋಲಾರದ ಡಿಸಿಸಿ ಬ್ಯಾಂಕ್​ಗೆ ಸಲ್ಲುತ್ತದೆ. ಪ್ರಚಲಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರ, ಮಹಿಳೆಯರ ಹಾಗೂ ಗ್ರಾಮೀಣ ಭಾಗದ ಜನಸ್ನೇಹಿಯಾಗಿ ದೇಶದಲ್ಲೇ ಹೆಸರು ಮಾಡಿದೆ.

ಬ್ಯಾಂಕೋ ಬ್ಲ್ಯೂ ರಿಬ್ಬನ್​-2020 ಅವಾರ್ಡ್​ ಪಡೆದ ಬ್ಯಾಂಕ್​ ಕಳೆದ ಏಳು ವರ್ಷಗಳಿಂದ ಹಣಕಾಸು, ಆಡಳಿತ, ತಾಂತ್ರಿಕತೆ, ಗಣಕೀಕರಣ, ಸಾಲ ವಸೂಲಾತಿಗೆ ವಿನೂತನ ಕ್ರಮ ಹೀಗೆ ಹಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಯಶಸ್ವಿಯಾದ ಬ್ಯಾಂಕ್  ಮಹಾರಾಷ್ಟ್ರದ ಎವಿಐಇಎಸ್ ಪಬ್ಲಿಕೇಷನ್ ಎನ್ನುವ ಸಂಸ್ಥೆ ನೀಡುವ ‘ಬ್ಯಾಂಕೋ ಬ್ಲ್ಯೂ ರಿಬನ್-2020′ ಪ್ರಶಸ್ತಿಯನ್ನು ಈ ಬಾರಿ ಕೋಲಾರ ಡಿಸಿಸಿ ಬ್ಯಾಂಕ್​ ತನ್ನದಾಗಿಸಿಕೊಂಡಿದೆ. ಇದಕ್ಕೂ ಮೊದಲು ದೇಶದಲ್ಲೆ ಮೊದಲ ಬಾರಿಗೆ ಕೋಲಾರ ಡಿಸಿಸಿ ಬ್ಯಾಂಕ್ ಮೊಬೈಲ್ ಎಟಿಎಂ ಜಾರಿಗೆ ತಂದಿತ್ತು. ಇತ್ತೀಚೆಗೆ ಮೊಬೈಲ್ ವ್ಯಾನ್ ಬ್ಯಾಂಕಿಂಗ್ ಸೇವೆಗಳನ್ನ ಆರಂಭ ಮಾಡಿತ್ತು. ಆ ಮೂಲಕ ವಿನೂತನ ಯೋಜನೆಗಳನ್ನ ಜನರಿಗೆ ತಲುಪಿಸಿ ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯಲ್ಲಿ ಜನಸ್ನೇಹಿಯಾಗಿದ್ದ ಕೋಲಾರ ಡಿಸಿಸಿ ಬ್ಯಾಂಕ್ ಈಗ ಮತ್ತೊಂದು ಹೊಸ ಗರಿಮೆ ಸಿಕ್ಕಿದೆ.

ಏನಿದು ಬ್ಯಾಂಕೋ ಬ್ಲ್ಯೂ ರಿಬ್ಬನ್​ ಪ್ರಶಸ್ತಿ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಎವಿಐಇಎಸ್ ಪಬ್ಲಿಕೇಷನ್ ಎನ್ನುವ ಸಂಸ್ಥೆ ದೇಶದಲ್ಲಿರುವ ಎಲ್ಲಾ ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕ್​ಗಳ ಕಾರ್ಯವೈಖರಿ ತಂತ್ರಜ್ಞಾನ ಅಳವಡಿಕೆ, ವಹಿವಾಟು, ಲಾಭ ಇದೆಲ್ಲದರ ಮಾಹಿತಿ ಪಡೆದುಕೊಂಡು ಈ ಪ್ರಶಸ್ತಿಯನ್ನು ನೀಡುತ್ತದೆ. 2018-19 ಹಾಗೂ 2019-20ನೇ ಸಾಲಿನಲ್ಲಿ ಬ್ಯಾಂಕಿನ ಹಣಕಾಸು ಪ್ರಗತಿ, ಆಡಳಿತ ಸಾಧನೆ, ತಾಂತ್ರಿಕತೆ, ಗಣಕೀಕರಣ ಅಂಶಗಳ ಆಧಾರದ ಮೇಲೆ ಈ ಬಾರಿ ಕೋಲಾರ ಡಿಸಿಸಿ ಬ್ಯಾಂಕ್​ಗೆ ದೇಶದ ನಂ-1 ಪಟ್ಟ ನೀಡಲಾಗಿದೆ. ಇನ್ನು ಈ ಪ್ರಶಸ್ತಿಯನ್ನು ಮಾರ್ಚ್​ ತಿಂಗಳಲ್ಲಿ ಮೈಸೂರಿನಲ್ಲಿ ನಡೆಯುವ ಬ್ಯಾಂಕೋ ಬ್ಲ್ಯೂ ರಿಬ್ಬನ್-2020 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಬ್ಯಾಂಕ್​​ನ​ ಸಾಧನೆ ಈ ಹಿಂದೆ ಕೋಲಾರ ಡಿಸಿಸಿ ಬ್ಯಾಂಕ್​ 44 ಕೋಟಿ ನಷ್ಟದಿಂದ ಹಾಗೂ ಶೇ.95 ರಷ್ಟು ಎನ್‌ಪಿಎನಿಂದಾಗಿ ಸಾಕಷ್ಟು ನಷ್ಟದ ಸುಳಿಗೆ ಸಿಲುಕ್ಕಿದ್ದ ಪರಿಣಾಮ ಬೆಂಗಳೂರು ಗ್ರಾಮಾಂತರ ಡಿಸಿಸಿ ಬ್ಯಾಂಕ್​ನೊಂದಿಗೆ ವಿಲೀನ ಮಾಡೋದಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಅಂದು ಒಂದು ಅವಕಾಶ ನೀಡಿ ಸಿದ್ದರಾಮಯ್ಯ ಸರ್ಕಾರದಲ್ಲಿ ಬ್ಯಾಂಕ್​ ಪುನಶ್ಚೇತನಕ್ಕೆ ನೆರವು ನೀಡಿದ್ದರು. ಅಂದಿನಿಂದ ಮತ್ತೆ ಮೈಕೊಡವಿ ನಿಂತ ಬ್ಯಾಂಕ್​ನಲ್ಲಿ ಸಾಧನೆಗಳ ಪಟ್ಟಿ ದೊಡ್ಡದಿದೆ. ಹಲವು ಸಾಧನೆಗಳ ಮೂಲಕ ಉತ್ತುಂಗಕ್ಕೇರಿದೆ. ಸದ್ಯ 7 ಕೋಟಿ ಲಾಭದಲ್ಲಿದೆ. ಜೊತೆಗೆ ಬ್ಯಾಂಕಿನ ಎನ್​ಪಿಎ ಕೂಡಾ ಶೇ.2 ರಷ್ಟಿದೆ.

ಇದು ಜನರು ನಮಗೆ ಕೊಟ್ಟ ಸಹಕಾರದಿಂದ ಮಾತ್ರ ಸಾಧ್ಯವಾಯಿತು. ಈ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದ ಗೌಡ  ಅಭಿಪ್ರಾಯ ಪಟ್ಟಿದ್ದಾರೆ.

ಡಿಸಿಸಿ ಬ್ಯಾಂಕ್ ಮೇಲೆ ಬಿಜೆಪಿ ಕಣ್ಣು, ಸಂಖ್ಯಾಬಲ ಇಲ್ಲದಿದ್ದರು ಕೂಡಾ ಅಧಿಕಾರದ ಗದ್ದುಗೆ ಏರಲು ಕಸರತ್ತು

Follow Us
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ