ಬುದ್ಧಿವಂತರ ಜಿಲ್ಲೆ ಉಡುಪಿಯಲ್ಲಿ ಪೊಲೀಸರಿಗೆ ಕಳ್ಳರ ಸವಾಲ್

ಉಡುಪಿ ಹಾಗೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈಗ ಕಳ್ಳರದ್ದೇ ತಲೆನೋವಾಗಿದೆ. ಮೇಲಿಂದ ಮೇಲೆ‌ ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನ ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ‌. ಈ ವರ್ಷದ ಸೆಪ್ಟೆಂಬರ್‌ ಅಂತ್ಯದವರೆಗೆ ಉಡುಪಿ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 25 ಕಳ್ಳತನ ಪ್ರಕರಣಗಳು ನಡೆದಿವೆ.

ಬುದ್ಧಿವಂತರ ಜಿಲ್ಲೆ ಉಡುಪಿಯಲ್ಲಿ ಪೊಲೀಸರಿಗೆ ಕಳ್ಳರ ಸವಾಲ್
ಬುದ್ದಿವಂತರ ಜಿಲ್ಲೆ ಉಡುಪಿಯಲ್ಲಿ ಪೊಲೀಸರಿಗೆ ಕಳ್ಳರ ಸವಾಲ್
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ

Updated on:Oct 17, 2024 | 9:14 PM

ಉಡುಪಿ, ಅಕ್ಟೋಬರ್​ 17: ಬುದ್ಧಿವಂತರ ಜಿಲ್ಲೆ ಉಡುಪಿಯಲ್ಲಿ ಈಗ ಕಳ್ಳರು (Thieves) ಪೊಲೀಸ್ ವ್ಯವಸ್ಥೆಗೆ ಸವಾಲಾಗಿದ್ದಾರೆ. ಮನೆ, ಅಂಗಡಿ, ವಾಹನ ಹೀಗೆ ಸಿಕ್ಕಸಿಕ್ಕದ್ದನೆಲ್ಲಾ ಕಳವು ಮಾಡುತ್ತಿರುವ ಖದೀಮರ ತಂಡ ಉಡುಪಿ ನಗರ ಠಾಣೆ ಹಾಗೂ ಮಣಿಪಾಲ ಪೊಲೀಸರಿಗೆ ತಲೆನೋವಾಗಿದ್ದಾರೆ. ಚಳ್ಳೆಹಣ್ಣು ತಿನ್ನಿಸುವ ಮೂಲಕ ಪೊಲೀಸರಿಗೆ ಸವಾಲಾಗಿದ್ದರೆ.

ಹೌದು, ಉಡುಪಿ ಹಾಗೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈಗ ಕಳ್ಳರದ್ದೇ ತಲೆನೋವಾಗಿದೆ. ಮೇಲಿಂದ ಮೇಲೆ‌ ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನ ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ‌. ಈ ವರ್ಷದ ಸೆಪ್ಟೆಂಬರ್‌ ಅಂತ್ಯದವರೆಗೆ ಉಡುಪಿ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 25 ಕಳ್ಳತನ ಪ್ರಕರಣಗಳು ನಡೆದಿವೆ. ಅಂಗಡಿಗೆ ನುಗ್ಗಿ ಕಳ್ಳತನ, ಮನೆ ಕಳವು, ಅಪಾರ್ಟ್‌ಮೆಂಟ್‌ಗೆ ನುಗ್ಗಿ ಕಳವು, ಚಿನ್ನ ಕಸಿದು ಪರಾರಿ ಹೀಗೆ ಭಿನ್ನ ಭಿನ್ನ ಮಾದರಿಯ ಲೂಟಿ ನಡೆದಿದೆ.

ಇದನ್ನೂ ಓದಿ: ರಾಯಚೂರು: ಫಸ್ಟ್ ನೈಟ್ ವಿಡಿಯೋ ಮಾಡಿಟ್ಟುಕೊಂಡು ಸರ್ಕಾರಿ ಅಧಿಕಾರಿಯಿಂದ ಪತ್ನಿಗೆ ಬ್ಲ್ಯಾಕ್​ಮೇಲ್

ಇವುಗಳಲ್ಲಿ ಪೊಲೀಸರಿಗೆ ಪತ್ತೆಹಚ್ಚಲು ಸಾಧ್ಯವಾಗಿದ್ದು ಕೇವಲ 3-4 ಪ್ರಕರಣ ಮಾತ್ರ. ಇತ್ತೀಚೆಗಷ್ಟೇ ಉಡುಪಿ ನಗರ ಠಾಣೆಯ ಸಮೀಪವೇ ನಡೆದ ಆರು ಮನೆಯ ದರೋಡೆ ಯತ್ನದಲ್ಲಿ ಎರಡು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ನಿಜಕ್ಕೂ ಜನರನ್ನು ಬೆಚ್ಚಿಬೀಳಿಸಿದೆ. ಈ ಹಿಂದೆ ಬ್ರಹ್ಮಗಿರಿಯ ಅಪಾರ್ಟ್ ಮೆಂಟ್‌ಗೆ ನಾಲ್ಕೈದು ಮಂದಿ ಮುಸುಕುಧಾರಿಗಳು ಕಳವು ಮಾಡಲು ಬಂದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದರೆ, ಅವರು ಮುಂದೆಲ್ಲಿ ಹೋದರು ಎಂಬ ಸುಳಿವಿಲ್ಲ. ಈಗ ಪರಿಸ್ಥಿತಿ ಎಲ್ಲಿವರೆಗೆ ಬಂದಿದೆ ಎಂದರೆ ಒಂಟಿ ಮನೆಗಳು ಬಿಡಿ ಅಪಾರ್ಟ್‌ಮೆಂಟ್‌ಗಳೂ ಸುರಕ್ಷಿತವಲ್ಲ ಎಂಬಂತಾಗಿದೆ.

ಹಲವು ವ್ಯಾಪಾರ ಮಳಿಗೆ, ದೇವಸ್ಥಾನದ ಹುಂಡಿ, ಜ್ಯುವೆಲ್ಲರಿ ಮಳಿಗೆ, ಮನೆ, ಬ್ಯಾಂಕ್ ಹೀಗೆ ಒಟ್ಟು ಹತ್ತು ಲಕ್ಷಕ್ಕೂ ಅಧಿಕ ನಗದು, ಚಿನ್ನಾಭರಣ ದರೋಡೆ ಮಾಡಿದ್ದಾರೆ ಚಾಲಾಕಿ ಕಳ್ಳರ ತಂಡ. ಉಡುಪಿ ಹಾಗೂ ಮಣಿಪಾಲ ಭಾಗದಲ್ಲಿ ಕಳವು ನಡೆಸುತ್ತಿರುವ ಹಲವು ಕಳ್ಳರ ತಂಡ ಪ್ರವಾಸಕ್ಕೆ ಹೋದವರ ಮನೆಯನ್ನೇ ಟಾರ್ಗೆಟ್ ಮಾಡುತ್ತಿದೆ. ಕಳೆದ ಆರು ತಿಂಗಳಲ್ಲೇ 20 ಲಕ್ಷ ರೂ. ಮೊತ್ತದ ದರೋಡೆ ಪ್ರಕರಣ ನಡೆದಿದೆ‌. ಇನ್ನು ಬ್ಯಾಂಕ್​ಗಳಲ್ಲೂ ವಿಫಲ ಯತ್ನ ಆದ ಬಳಿಕ ಬರೆದಿಟ್ಟಿದ್ದ ಚೆಕ್ ಗಳನ್ನೂ ಬಿಡುತ್ತಿಲ್ಲ ಕಳ್ಳರ ತಂಡ.

ಇದನ್ನೂ ಓದಿ: ದೇವರ ಭಜನೆ ಮಾಡುತ್ತಿದ್ದ ಮಹಿಳೆಯ ಸರ ಕಿಟಿಕಿಯಿಂದ ಕದ್ದು ಕಳ್ಳ ಪರಾರಿ: ಎಫ್​ಐಆರ ದಾಖಲು

ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಹಲವು ತಂಡಗಳನ್ನು ರಚಿಸಿದ್ದಾರೆ. ಇನ್ನು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ, ಪ್ರತೀ‌ ದಿನ ಪೊಲೀಸ್ ಬೀಟ್, ಗಸ್ತು ವಾಹನ ಸಂಖ್ಯೆ ಹೆಚ್ಚಳ, ಇನ್ಫಾರ್ಮರ್ ಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಿದ್ದಲ್ಲಿ ಪ್ರಕರಣ ಕಡಿಮೆಯಾಗಬಹುದು. ಈ‌ ನಿಟ್ಟಿನಲ್ಲಿ ಪೊಲೀಸರು ಅದ್ಯಾವ ಕ್ರಮ ಕೈಗೊಳ್ತಾರೋ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:13 pm, Thu, 17 October 24

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ