ಗುಡ್​ನ್ಯೂಸ್: ಗೃಹಲಕ್ಷ್ಮಿ ಹಣದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲ ಎಂದು ಗೃಹಲಕ್ಷ್ಮಿಯರು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದರು. ಕಳೆದ ಮೂರು ತಿಂಗಳಿನಿಂದ ಹಣ ಹಾಕಿಲ್ಲ ಎನ್ನುವ ಆರೋಪಗ ಕೇಳಿಬಂದಿದ್ದು, ಈ ಕುರಿತು ಟಿವಿ9 ಕೂಡ ನಿರಂತರ ವರದಿ ಮಾಡಿತ್ತು. ಗೃಹಲಕ್ಷ್ಮಿಯರ ಅಳಲು ಸರ್ಕಾರದ ಗಮನ ತರುವ ಕೆಲಸ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಣ ಹಾಕುವ ಭರವಸೆ ನೀಡಿದ್ದಾರೆ.

ಗುಡ್​ನ್ಯೂಸ್: ಗೃಹಲಕ್ಷ್ಮಿ ಹಣದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Gruhalakshmi
Edited By:

Updated on: Feb 21, 2025 | 10:22 PM

ಬೆಂಗಳೂರು, (ಫೆಬ್ರವರಿ 21) : ಹೌದು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆ ಸಾಕಷ್ಟು ಮಹಿಳೆಯರಿಗೆ ಅನುಕೂಲ ಆಗಿದೆ. ಕೆಲವರು ಇದೇ ಹಣದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಸಮಾಜಕ್ಕೂ ಅನುಕೂಲ ಮಾಡಿ ಮಾದರಿಯಾಗಿದ್ದಾರೆ. ಆದ್ರೇ ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಮೂರು ಕಂತಿನ ಹಣ ಬಾರದೇ ಸಾಕಷ್ಟು ಮಹಿಳೆಯರು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಟಿವಿ9 ವರದಿಯ ನಿರಂತರ ಅಭಿಯಾನದಿಂದ ಇದೀಗ ಗೃಹಲಕ್ಷ್ಮಿಯರಿಗೆ ಹಣ ಸಿಗುವ ಭರವಸೆ ಕೂಡ ಸಿಕ್ಕಿದೆ. ಹೌದು.. ಟಿವಿ9 ವರದಿ ಬೆನ್ನಲ್ಲೇ ಖುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಟಿವಿ9 ಜೊತೆಗೆ ಮಾತನಾಡಿ, ನಾನು ಆಸ್ಪತ್ರೆಯಲ್ಲಿರುವ ಕಾರಣ ಮೂರು ತಿಂಗಳು ವಿಳಂಬವಾಗಿದೆ. ನಾನಿದ್ದಾಗ ಫೈನಾನ್ಸ್ ಇಲಾಖೆಗೆ ನಾನು ಒತ್ತಡ ಹಾಕುತ್ತಿದ್ದೆ. ಜೊತೆಗೆ ಮುಖ್ಯಮಂತ್ರಿ ಗಮನಕ್ಕೆ ತರುತ್ತಿದ್ದೆ.
ದುರ್ದೈವ ಅಪಘಾತ ಬಳಿಕ ನಲವತ್ತು ದಿನ ಆಸ್ಪತ್ರೆಯಲ್ಲಿದ್ದ ಕಾರಣ ತಡವಾಗಿದೆ, ಇಷ್ಟು ದಿನ ಇಲಾಖೆಯಿಂದ ಹಣ ಬಿಡುಗಡೆ ಮಾಡ್ತಿದ್ದೇವು. ಈಗ ಬೆಂಗಳೂರು ಸುತ್ತಮುತ್ತಲಿನ ನಾಲ್ಕು ತಾಲೂಕು ಪಂಚಾಯತಿಗೆ ದುಡ್ಡು ಹಾಕಿ, ಅಲ್ಲಿಂದ ಸಿಡಿಪಿಒ ಮುಖಾಂತರ ಸೇಮ್ ಚಾನಲ್ ಹಣ ಬಿಡುಗಡೆ ಮಾಡಲು ಹೆಚ್ಚು ಕಮ್ಮಿ ಆಗಿದೆ . ಇನ್ನೊಂದು ವಾರ ಹತ್ತು ದಿನದಲ್ಲಿ ಖಾತೆಗಳಿಗೆ ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿ ಹಣವನ್ನು ತಾಲೂಕು ಪಂಚಾಯಿತಿ ವತಿಯಿಂದ ಬಿಡುಗಡೆ ಮಾಡುತ್ತೇವೆ. ಇನ್ನೊಂದು ವಾರ ಹತ್ತು ದಿನದಲ್ಲಿ ದುಡ್ಡು ಬರುತ್ತೆ. ಎರಡು ತಿಂಗಳ ಹಣ ಫೈನಾನ್ಸ್ ದವರು ಟ್ರಸರಿಗೆ ಹಾಕಿದ್ದಾರೆ ಎನ್ನುವ ಮಾಹಿತಿ ಇದೆ. ನಾನು ಕೂಡ ಬಜೆಟ್ ಅಧಿವೇಶನಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಈ ಬಗ್ಗೆ ಚರ್ಚೆ ಮಾಡಿ ಮೂರು ತಿಂಗಳ ದುಡ್ಡನ್ನ ಹಾಕಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಅನ್ನಭಾಗ್ಯದ ಹಣವೂ ಇಲ್ಲ, ಗೃಹಲಕ್ಷ್ಮೀ ದುಡ್ಡು ಕೊಟ್ಟಿಲ್ಲ: ಭುಗಿಲೆದ್ದ ಆಕ್ರೋಶ

ಹೊಸ ಪ್ಯಾಟರ್ನ್ ಮಾಡಿದ್ದರಿಂದಲೂ ಹಣ ಬರಲು ವಿಳಂಬವಾಗಿದೆ. ಆದ್ರೆ ಹೊಸ ಪ್ಯಾಟರ್ನ್ ದಿಂದ ಯಾವುದೇ ಗೊಂದಲ ಇಲ್ಲ. ಡೈರೆಕ್ಟ್ ಅವರ ಅಕೌಂಟ್ ಗೆ ಹಣ ಹಾಕುತ್ತೇವೆ. ಎಲ್ಲಾ ಗೃಹಲಕ್ಷ್ಮಿಯರಿಗೆ ನಿಮ್ಮ ಹಣ ಬರುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಇನ್ನೂ ಹೆಬ್ಬಾಳ್ಕರ್ ಅವರ ಮಾತಿನಿಂದ ಬಹುತೇಕ ಗೃಹಲಕ್ಷ್ಮಿಯರು ಖುಷಿ ಯಾಗಿದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಟಿವಿ9ಗೆ ಧನ್ಯವಾದ ಹೇಳಿದ್ದಾರೆ.

ಒಟ್ಟಿನಲ್ಲಿ ಮೂರು ತಿಂಗಳ ಕಂತಿನ ಹಣ ಬಂದಿಲ್ಲ ಎಂದು ಕಂಗಾಲಾಗಿದ್ದ ಗೃಹಲಕ್ಷ್ಮಿಯರು ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭರವಸೆಯಿಂದ ಮೂರು ತಿಂಗಳ ಆರು ಸಾವಿರ ರೂಪಾಯಿ ಒಂದೇ ಸಮಯಕ್ಕೆ ಬರುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕೊಟ್ಟ ಮಾತಿನಂತೆ ಸಚಿವರು ಹಣ ಹಾಕಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 pm, Fri, 21 February 25