
ತುಮಕೂರು/ಮೈಸೂರು, ಜುಲೈ 17: ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಟ್ರ್ಯಾಕ್ಟರ್ನಲ್ಲಿದ್ದ ಛತ್ತೀಸ್‌ಗಢದ ಬಾರಿ ಲಾಲ್(30) ಮತ್ತು ಗೋಲು(35) ಮೃತ ದುರ್ದೈವಿಗಳಾಗಿದ್ದಾರೆ. ಬೆಂಗಳೂರು ಕಡೆ ಬರುತ್ತಿದ್ದ ಟ್ರ್ಯಾಕ್ಟರ್‌ಗೆ ಬೆಳಿಗ್ಗಿನ ಜಾವ 3 ಗಂಟೆ ಸುಮಾರಿಗೆ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ನಲ್ಲಿ ಕೂಲಿಗೆಂದು ಬಂದಿದ್ದ ಹಲವರು ಇದ್ದರು ಎನ್ನಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದ ಪರಿಣಾಮ ನವವಿವಾಹಿತೆ ದುರ್ಮರಣ ಹೊಂದಿರುವ ಘಟನೆ ಮೈಸೂರಿನ ಆರ್.ಟಿ.ನಗರದ ಸಮೀಪ ನಡೆದಿದೆ. ಮೇಘನಾ(20) ಮೃತ ದುರ್ದೈವಿಯಾಗಿದ್ದು, 15 ದಿನಗಳ ಹಿಂದಷ್ಟೇ ಈಕೆಯನ್ನು ಮೂಕನಹುಂಡಿಯಿಂದ ಬಿದರಗೂಡಿಗೆ ವಿವಾಹ ಮಅಡಿಕೊಡಲಾಗಿತ್ತು. ಹೆಲ್ಮೆಟ್ ಧರಿಸದಿದ್ದರಿಂದ ಗಂಭೀರ ಗಾಯವಾಗಿ ಮೇಘನಾ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಘಟನೆ ಬಗ್ಗೆ ಕುವೆಂಪುನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ; 70 ಅಪರಾಧ ಪ್ರಕರಣ ಭೇದಿಸಿ 94 ಖದೀಮರ ಬಂಧನ!

ಹೆದ್ದಾರಿ ಬಿಟ್ಟು ಪಕ್ಕದ ಜಮೀನಿಗೆ ನುಗ್ಗಿರುವ KSRTC ಬಸ್
ಮುಂಭಾಗದ ಆ್ಯಕ್ಸೆಲ್ ಕಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬಿಟ್ಟು ಪಕ್ಕದ ಜಮೀನಿಗೆ KSRTC ಬಸ್ ನುಗ್ಗಿರುವ ಘಟನೆ ಬಾಗಲಕೋಟೆ ಸಮೀಪದ ವಿಜಯಪುರ-ಹುಬ್ಬಳ್ಳಿ ಹೆದ್ದಾರಿಯ ಕುಳಗೇರಿ ಕ್ರಾಸ್ ಮತ್ತು ಗೋವನಕೊಪ್ಪ ಗ್ರಾಮದ ಮಧ್ಯೆ ನಡೆದಿದೆ. ಅಪಘಾತದಲ್ಲಿ ಬಸ್ನಲ್ಲಿದ್ದ 6-7 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಭವನೀಯ ದೊಡ್ಡ ಅವಘಡ ತಪ್ಪಿದ್ದು, ಬಸ್ನಲ್ಲಿ ಚಾಲಕ ಕಂ ನಿರ್ವಾಹಕರಾಗಿ ಓರ್ವ ಸಿಬ್ಬಂದಿ ಮಾತ್ರ ಇದ್ದರು ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:13 pm, Fri, 17 July 26