AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KEA Recruitment 2026: 233 ಫಾರ್ಮಸಿ, ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 99,400ರೂ. ವರೆಗೆ ವೇತನ

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ. ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಸೇರಿದಂತೆ 233 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್ 30ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದ ಅಂತಿಮ ಮತ್ತು ಅಧಿಕೃತ ಮಾಹಿತಿಗಾಗಿ KEA ವೆಬ್‌ಸೈಟ್‌ನಲ್ಲಿರುವ ಅಧಿಸೂಚನೆಯನ್ನೇ ಪರಿಗಣಿಸುವುದು ಸೂಕ್ತ.

KEA Recruitment 2026: 233 ಫಾರ್ಮಸಿ, ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 99,400ರೂ. ವರೆಗೆ ವೇತನ
ಸರ್ಕಾರಿ ಉದ್ಯೋಗImage Credit source: Getty Images
ಅಕ್ಷತಾ ವರ್ಕಾಡಿ
|

Updated on:Aug 08, 2026 | 1:50 PM

Share

ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ. KEA ವತಿಯಿಂದ ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಸೇರಿದಂತೆ ಒಟ್ಟು 233 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 30 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

233 ಹುದ್ದೆಗಳಿಗೆ ನೇಮಕಾತಿ:

ಈ ನೇಮಕಾತಿಯಲ್ಲಿ ಕರ್ನಾಟಕದ ಉಳಿದ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ (KK) ವೃಂದದ ಹುದ್ದೆಗಳು ಸೇರಿವೆ. ಒಟ್ಟು 233 ಹುದ್ದೆಗಳಲ್ಲಿ 98 ಫಾರ್ಮಸಿ ಆಫೀಸರ್ RPC, 90 ನರ್ಸಿಂಗ್ ಆಫೀಸರ್ RPC, 11 ಫಾರ್ಮಸಿ ಆಫೀಸರ್ KK ಹಾಗೂ 34 ನರ್ಸಿಂಗ್ ಆಫೀಸರ್ KK ಹುದ್ದೆಗಳು ಒಳಗೊಂಡಿವೆ.

ಹುದ್ದೆವಾರು ವಿವರ:

ಫಾರ್ಮಸಿ ಆಫೀಸರ್ – RPC ವಿಭಾಗದಲ್ಲಿ 98 ಹುದ್ದೆಗಳು, ನರ್ಸಿಂಗ್ ಆಫೀಸರ್ – RPC ವಿಭಾಗದಲ್ಲಿ 90 ಹುದ್ದೆಗಳು ಖಾಲಿ ಇವೆ. ಅದೇ ರೀತಿ ಫಾರ್ಮಸಿ ಆಫೀಸರ್ – KK ವಿಭಾಗದಲ್ಲಿ 11 ಹಾಗೂ ನರ್ಸಿಂಗ್ ಆಫೀಸರ್ – KK ವಿಭಾಗದಲ್ಲಿ 34 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟಾರೆಯಾಗಿ 233 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಶೈಕ್ಷಣಿಕ ಅರ್ಹತೆ ಏನು?

ಫಾರ್ಮಸಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಫಾರ್ಮಸಿಯಲ್ಲಿ ಡಿಪ್ಲೊಮಾ ಸೇರಿದಂತೆ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು. ನರ್ಸಿಂಗ್ ಆಫೀಸರ್ ಹುದ್ದೆಗೆ ನರ್ಸಿಂಗ್‌ನಲ್ಲಿ ಡಿಪ್ಲೊಮಾ, GNM ಅಥವಾ B.Sc Nursing ಸೇರಿದಂತೆ ಅಧಿಸೂಚನೆಯಲ್ಲಿ ಸೂಚಿಸಿರುವ ಅರ್ಹತೆ ಹೊಂದಿರಬೇಕು. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ ಹಾಗೂ ಇತರ ಅರ್ಹತಾ ಮಾನದಂಡಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿದ ಬಳಿಕವೇ ಅರ್ಜಿ ಸಲ್ಲಿಸುವುದು ಸೂಕ್ತ.

ತಿಂಗಳಿಗೆ 99,400ರೂ.ವರೆಗೆ ವೇತನ:

KEA ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಉತ್ತಮ ವೇತನ ದೊರೆಯಲಿದೆ. ಫಾರ್ಮಸಿ ಆಫೀಸರ್ ಹುದ್ದೆಗೆ ತಿಂಗಳಿಗೆ 44,425ರಿಂದ 83,700 ರೂ. ರವರೆಗೆ ಹಾಗೂ ನರ್ಸಿಂಗ್ ಆಫೀಸರ್ ಹುದ್ದೆಗೆ 54,175ರಿಂದ 99,400 ರೂ. ರವರೆಗೆ ವೇತನ ನಿಗದಿಪಡಿಸಲಾಗಿದೆ.

ವಯೋಮಿತಿ ಎಷ್ಟು?

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷ ಎಂದು ತಿಳಿಸಲಾಗಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ. 2A, 2B, 3A ಮತ್ತು 3B ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC, ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. SC/ST, ಪ್ರವರ್ಗ-1 ಮತ್ತು ESM ಅಭ್ಯರ್ಥಿಗಳಿಗೆ 500, ಪಿಎಚ್‌/PwD ಅಭ್ಯರ್ಥಿಗಳಿಗೆ 250ರೂ. ಹಾಗೂ ಇತರ ಎಲ್ಲಾ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕವಿದೆ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಅಭ್ಯರ್ಥಿಗಳ ಆಯ್ಕೆಯು ನೇಮಕಾತಿ ಪ್ರಕ್ರಿಯೆಯಲ್ಲಿನ ನಿಯಮಗಳ ಆಧಾರದ ಮೇಲೆ ನಡೆಯಲಿದೆ. ನೀಡಿರುವ ಮಾಹಿತಿಯ ಪ್ರಕಾರ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಆಯ್ಕೆ ಪ್ರಕ್ರಿಯೆಯ ಭಾಗವಾಗಿರಲಿದೆ. ಪರೀಕ್ಷಾ ಮಾದರಿ, ಅಂಕಗಳ ವಿವರ ಹಾಗೂ ಅಂತಿಮ ಆಯ್ಕೆ ವಿಧಾನದ ಕುರಿತು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಸುವುದು ಹೇಗೆ?

KEA ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ ನೇಮಕಾತಿ ವಿಭಾಗವನ್ನು ತೆರೆಯಿ, ಸಂಬಂಧಿತ ಅರ್ಜಿ ಲಿಂಕ್‌ ಆಯ್ಕೆ ಮಾಡಬೇಕು. ಅರ್ಜಿಯಲ್ಲಿ ಕೇಳಲಾಗಿರುವ ವೈಯಕ್ತಿಕ, ಶೈಕ್ಷಣಿಕ ಹಾಗೂ ಇತರ ವಿವರಗಳನ್ನು ಸರಿಯಾಗಿ ನಮೂದಿಸಿ, ಅಗತ್ಯ ದಾಖಲೆಗಳು ಮತ್ತು ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಬೇಕು. ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಸಂಖ್ಯೆ ಅಥವಾ ನೋಂದಣಿ ವಿವರವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಭವಿಷ್ಯದಲ್ಲಿ ಪ್ರವೇಶ ಪತ್ರ, ಪರೀಕ್ಷೆ ಅಥವಾ ಇತರ ನೇಮಕಾತಿ ಪ್ರಕ್ರಿಯೆಗಳಿಗೆ ಇದು ಅಗತ್ಯವಾಗಬಹುದು.

ಪ್ರಮುಖ ದಿನಾಂಕಗಳು:

KEA ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 7 ರಂದು ಆರಂಭವಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ.

ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ:

ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವಯೋಮಿತಿ, ವೃತ್ತಿಪರ ಅರ್ಹತೆ, ಶುಲ್ಕ ಮತ್ತು ಇತರ ನಿಯಮಗಳನ್ನು ಅಧಿಕೃತ KEA ಅಧಿಸೂಚನೆಯಲ್ಲಿ ಪರಿಶೀಲಿಸಬೇಕು. ನೇಮಕಾತಿಗೆ ಸಂಬಂಧಿಸಿದ ಅಂತಿಮ ಮತ್ತು ಅಧಿಕೃತ ಮಾಹಿತಿಗಾಗಿ KEA ವೆಬ್‌ಸೈಟ್‌ನಲ್ಲಿರುವ ಅಧಿಸೂಚನೆಯನ್ನೇ ಪರಿಗಣಿಸುವುದು ಸೂಕ್ತ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:50 pm, Sat, 8 August 26

Follow Us