AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಫ್​ ಎಫೆಕ್ಟ್​​: ಬೆಂಗಳೂರಲ್ಲಿ ಅ.1ರವರೆಗೂ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಮುನ್ಸೂಚನೆ

ಶಾಂತವಾಗಿದ್ದ ನದಿಗಳು ಮತ್ತೆ ರೌದ್ರರೂಪ ತಾಳಿವೆ. ಜೀವನಾಡಿಯಾಗಿದ್ದ ಜಲಮೂಲಗಳೇ ಜೀವ ಹಿಂಡುತ್ತಿವೆ. ಪ್ರವಾಹದ ಹೊಡೆತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ಆತಂಕ ಎದುರಾಗಿದೆ. ಈ ಮಧ್ಯೆ ಪೂರ್ವ ಅರಬ್ಬೀ ಸಮುದ್ರದ ಕರಾವಳಿ ತೀರಗಳಲ್ಲಿ ಟ್ರಫ್ ಎಫೆಕ್ಟ್ ತಟ್ಟಿದೆ. ಹೀಗಾಗಿ ಕರ್ನಾಟಕದಲ್ಲಿ 40-50 ಕೀ.ಮೀ. ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.

ಟ್ರಫ್​ ಎಫೆಕ್ಟ್​​: ಬೆಂಗಳೂರಲ್ಲಿ ಅ.1ರವರೆಗೂ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಮುನ್ಸೂಚನೆ
ಟ್ರಫ್​ ಎಫೆಕ್ಟ್​​: ಬೆಂಗಳೂರಲ್ಲಿ ಅ.1ರವರೆಗೂ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಮುನ್ಸೂಚನೆImage Credit source: Daijiworld
Vinayak Hanamant Gurav
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 28, 2024 | 4:13 PM

Share

ಬೆಂಗಳೂರು, ಆಗಸ್ಟ್​ 28: ಪೂರ್ವ ಅರಬ್ಬೀ ಸಮುದ್ರದ ಕರಾವಳಿ ತೀರಗಳಲ್ಲಿ ಟ್ರಫ್ ಎಫೆಕ್ಟ್ ಹಿನ್ನೆಲೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಆ.30ರ ವರೆಗೆ ಹಾಗೂ ಬೆಂಗಳೂರಲ್ಲಿ ಅ.1ರ ವರೆಗೂ ಹಗುರದಿಂದ ಸಾಧಾರಣ ಮಳೆ (Rain) ಸಾಧ್ಯತೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ. 40-50 ಕೀ.ಮೀ. ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಗಳಿಗೆ ಆ.30ರ ವರೆಗೆ ಆರೆಂಜ್​ ಅಲರ್ಟ್​ ಮತ್ತು ಕೊಡಗು, ಬೆಳಗಾವಿ ಜಿಲ್ಲೆಗಳಿಗೆ ಆ.30ರ ವರೆಗೆ ಯಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದ 6 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್​

ಕ್ಯಾಸಲ್​ರಾಕ್, ಕೊಟ್ಟಿಗೆಹಾರ, ಪುತ್ತೂರು, ಭಾಗಮಂಡಲ, ಆಗುಂಬೆ, ಮಂಕಿ, ಶಿರಾಲಿ, ಲಿಂಗನಮಕ್ಕಿ, ಮಾಣಿ, ಸಿದ್ದಾಪುರ, ಗೇರುಸೊಪ್ಪ, ಬೆಳ್ತಂಗಡಿ, ಶೃಂಗೇರಿ, ಪೊನ್ನಂಪೇಟೆ, ಹೊನ್ನಾವರ, ಉಪ್ಪಿನಂಗಡಿ, ಕಳಸ, ಹುಂಚದಕಟ್ಟೆ, ಕಮ್ಮರಡಿ, ಮೂರ್ನಾಡು, ನಾಪೋಕ್ಲು, ಪಣಂಬೂರು, ಉಡುಪಿ, ಮಂಗಳೂರು, ಕುಮಟಾದಲ್ಲಿ ಮಳೆಯಾಗಿದೆ.

ಉತ್ತರಕನ್ನಡದಲ್ಲಿ ದಾಖಲೆ ಮಳೆ: 24 ಗಂಟೆಯಲ್ಲಿ 403.6mm ಮಳೆ!

ಶಿರೂರು ಗುಡ್ಡ ಕುಸಿತದಿಂದ ಆತಂಕಗೊಂಡಿದ್ದ, ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಮತ್ತೆ ವರುಣಾಘಾತ ಎದುರಾಗಿದೆ.  403.6 ಮಿಲಿ ಮೀಟರ್​ನಷ್ಟು ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಹೊನ್ನಾವರದಲ್ಲಿ 74.6 ಮಿಲಿ ಮೀಟರ್​ನಷ್ಟು ಮಳೆ ಆಗಿದ್ದು, ಕಾರವಾರದಲ್ಲಿ 48 ಮಿಲಿ ಮೀಟರ್​ನಷ್ಟು ಆರ್ಭಟಿಸಿದೆ. ಇತ್ತ ಅಂಕೋಲಾದಲ್ಲಿ 45 ಮಿಲಿ ಮೀಟರ್​ನಷ್ಟು ಮಳೆ ದಾಖಲಾಗಿತ್ತು. ಮತ್ತೆ ವರುಣದೇವ ಆರ್ಭಟಿಸ್ತಿರೋದು ಉತ್ತರಕನ್ನಡ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿತ್ತು.

ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಭಾರಿ ಮಳೆ

ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲೂ ವರುಣಾರ್ಭಟ ಜೋರಾಗಿತ್ತು. ಹೀಗಾಗಿ ಹೊಸಪೇಟೆ ತಾಲೂಕಿನ ಜಿ.ನಾಗಲಾಪೂರ ಗ್ರಾಮದಲ್ಲಿ ಹೆಣ ಸಾಗಿಸಲು ಹೆಣಗಾಡುವಂತಾಗಿತ್ತು. ಹರಿಯುವ ಹಳ್ಳದಲ್ಲಿಯೇ ಹೆಣ ಹೊತ್ತು ಸಾಗೋ ಸ್ಥಿತಿ ಗ್ರಾಮಸ್ಥರಿಗೆ ಎದುರಾಗಿತ್ತು. ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜಿಟಿ ಜಿಟಿ ಮಳೆ ಸುರಿದಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:57 pm, Wed, 28 August 24

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ