ತುಮಕೂರಿನಲ್ಲಿ ನೃತ್ಯಗಾರ್ತಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಯತ್ನ! ಆರ್ಕೆಸ್ಟ್ರಾ ಮಾಲೀಕ ವಿರುದ್ಧ ಆರೋಪ

ದಿನಕ್ಕೆ 1,500ರಿಂದ 2 ಸಾವಿರ ರೂಪಾಯಿ ಕೊಡುತ್ತೇನೆ. ತಮ್ಮ ಜತೆ ಪ್ರವಾಸಕ್ಕೆ ಬರುವಂತೆ ನೃತ್ಯಗಾರ್ತಿಯನ್ನು ಒಪ್ಪಿಸುವಂತೆ ನಾನಿ ಯುವತಿಯೊಬ್ಬರಿಗೆ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ತುಮಕೂರಿನಲ್ಲಿ ನೃತ್ಯಗಾರ್ತಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಯತ್ನ! ಆರ್ಕೆಸ್ಟ್ರಾ ಮಾಲೀಕ ವಿರುದ್ಧ ಆರೋಪ
ಸಂಜಯ್ ಆರ್ಕೆಸ್ಟ್ರಾ ಮಾಲೀಕ ನಾನಿ ಹಂದ್ರಾಳ್
TV9kannada Web Team

| Edited By: sandhya thejappa

Feb 07, 2022 | 8:34 AM

ತುಮಕೂರು: ನೃತ್ಯಗಾರ್ತಿಯರನ್ನು (Dancers) ವೇಶ್ಯಾವಾಟಿಕೆಗೆ (Prostitution) ಬಳಸಿಕೊಳ್ಳಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಸಂಜಯ್ ಆರ್ಕೆಸ್ಟ್ರಾ ಮಾಲೀಕ ನಾನಿ ಹಂದ್ರಾಳ್ ವಿರುದ್ಧ ಆರೋಪ ಕೇಳಿ ಬಂದಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊರೊನಾ ಹಿನ್ನೆಲೆ ಯಾವುದೇ ಕಾರ್ಯಕ್ರಮಗಳು ಇಲ್ಲ. ದಿನಕ್ಕೆ 1,500ರಿಂದ 2 ಸಾವಿರ ರೂಪಾಯಿ ಕೊಡುತ್ತೇನೆ. ತಮ್ಮ ಜತೆ ಪ್ರವಾಸಕ್ಕೆ ಬರುವಂತೆ ನೃತ್ಯಗಾರ್ತಿಯನ್ನು ಒಪ್ಪಿಸುವಂತೆ ನಾನಿ ಯುವತಿಯೊಬ್ಬರಿಗೆ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಲ್ಪತರು ನಾಡು ತುಮಕೂರು ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಕ್ಷೇಮಾಭಿವೃದ್ಧಿ ಸಂಘ ಜಯನಗರ ಪೊಲೀಸ್ ಠಾಣೆಯಲ್ಲಿ ನಾಣಿ ಹಂದ್ರಾಲ್ ವಿರುದ್ಧ ದೂರು ದಾಖಲಿಸಿದೆ.

ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ:

ಈ ಹಿಂದೆ ನೆಲಮಂಗಲದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿ ಯುವತಿಯನ್ನು ರಕ್ಷಣೆ ಮಾಡಿದ್ದರು. ಸೋಮೇಗೌಡ(25), ಜಯಕುಮಾರ್(32), ಭವಾನಿ(25) ಎಂಬುವರನ್ನು ಬಂಧಿಸಿದ್ದರು. ಆರೋಪಿಗಳು ಕೆಲಸ ಕೊಡಿಸುವುದಾಗಿ ಸುಳ್ಳು ಹೇಳಿ ಬೆಂಗಳೂರಿನ ಕೆ.ಆರ್.ಪುರಂ ನಿಂದ 24ವರ್ಷದ ಯುವತಿಯನ್ನ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿ ಯುವತಿಯನ್ನು ರಕ್ಷಿಸಿದ್ದರು.

ಬಾಡಿಗೆ ಮನೆ ಪಡೆದು ಫೋನ್ ಕಾಲ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಬಳಿಕ ಪೊಲೀಸ್ ಇನ್ಸ್​ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿ

ಲತಾಜೀ ಹಾಡೋದು ಕಡಿಮೆ ಮಾಡಿದ್ದಕ್ಕೆ ಇದೆ ಮುಖ್ಯ ಕಾರಣ; ಲೆಜೆಂಡರಿ ಗಾಯಕಿಯ ನೇರ ಮಾತು ಇಲ್ಲಿದೆ..

‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್​ ಬಗ್ಗೆ ಸೃಜನ್​ ಲೋಕೇಶ್​ ಮಾತು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada