ತುಮಕೂರಿನಲ್ಲಿ ಮದುವೆಯಾದ ಏಳೇ ದಿನಕ್ಕೆ ಯುವಕ ಎಸ್ಕೇಪ್! ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದ ಹುಡುಗಿ ಈಗ ಬೀದಿಪಾಲು

ತುಮಕೂರಿನಲ್ಲಿ ಮದುವೆಯಾದ ಏಳೇ ದಿನಕ್ಕೆ ಯುವಕ ಎಸ್ಕೇಪ್! ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದ ಹುಡುಗಿ ಈಗ ಬೀದಿಪಾಲು
ನಿಖಿಲ್ ಮತ್ತು ಚೈತ್ರಾ ಮದುವೆ ಫೋಟೋ

ಯುವಕ, ಯುವತಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ವಿಶ್ವಕರ್ಮ ಸಮುದಾಯದ ಚೈತ್ರಾ ಮೂಲತಃ ತಿಪಟೂರು ತಾಲೂಕಿನ ಹಟ್ನ ಗ್ರಾಮದವಳು. ನಿಖಿಲ್ ಲಿಂಗಾಯತ ಸಮುದಾಯದವನು.

TV9kannada Web Team

| Edited By: sandhya thejappa

Apr 05, 2022 | 11:14 AM


ತುಮಕೂರು: ಮದುವೆಯಾದ (Marriage) ಏಳೇ ದಿನಕ್ಕೆ ಯುವಕ ಪರಾರಿಯಾಗಿದ್ದು, ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದ ಯುವತಿ ಈಗ ಬೀದಿಪಾಲಾಗಿದ್ದಾಳೆ. ಈ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಗ್ರಾಮದಲ್ಲಿ ಸಂಭವಿಸಿದೆ. ನಿಖಿಲ್ ಮತ್ತು ಚೈತ್ರಾ ಪ್ರೀತಿಸಿ (Love) ಮದುವೆಯಾಗಿದ್ದರು. ಮನೆಯವರ ವಿರೋಧದ ನಡುವೆಯೂ ಇಬ್ಬರೂ ಮದುವೆಯಾಗಿದ್ದರು. ಆದರೆ ನಿಖಿಲ್ ಹೆಂಡತಿಯನ್ನು ಬಿಟ್ಟು ಪರಾರಿಯಾಗಿದ್ದು, ಗಂಡನನ್ನು ಹುಡುಕಿಕೊಡುವಂತೆ ಚೈತ್ರಾ ಕಣ್ಣೀರು ಹಾಕಿದ್ದಾಳೆ.

ಯುವಕ, ಯುವತಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ವಿಶ್ವಕರ್ಮ ಸಮುದಾಯದ ಚೈತ್ರಾ ಮೂಲತಃ ತಿಪಟೂರು ತಾಲೂಕಿನ ಹಟ್ನ ಗ್ರಾಮದವಳು. ನಿಖಿಲ್ ಲಿಂಗಾಯತ ಸಮುದಾಯದವನು. ತುರುವೇಕೆರೆಯ ಮೊಬೈಲ್ ಶಾಪ್ ಒಂದರಲ್ಲಿ ಚೈತ್ರಾ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಅದೇ ಮೊಬೈಲ್ ಶಾಪ್ ಫೈನಾನ್ಸ್ ವಿಭಾಗದಲ್ಲಿ ನಿಖಿಲ್ ಕೆಲಸ ಮಾಡುತ್ತಿದ್ದ. ಈ ವೇಳೆ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಮುದವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದ ನಿಖಿಲ್ ಎಸ್ಕೇಪ್ ಆಗಿದ್ದಾನೆ.

ಕಳೆದ ಫೆಬ್ರವರಿ 4ರಂದು ನಿಖಿಲ್ ಮತ್ತು ಚೈತ್ರಾ ಮದುವೆಯಾಗಿತ್ತು. ಫೆಬ್ರವರಿ 7ಕ್ಕೆ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದರು. ತಿಪಟೂರು ತಾಲೂಕು ಕಿಬ್ಬನಳ್ಳಿ ಬಳಿಯ ಇಂಡಿಸ್ಕೆರೆ ಗ್ರಾಮದಲ್ಲಿ ಮನೆಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ತಾಯಿಗೆ ಹುಷಾರಿಲ್ಲ ಎಂದು ತಿಪಟೂರಿಗೆ ಹೋದ ನಿಖಿಲ್ ವಾಪಸ್ ಬಂದಿಲ್ಲ. ಫೆಬ್ರವರಿ 10ರಂದು ತಾಯಿ ನೋಡಬೇಕೆಂದು ತೆರಳಿರುವ ನಿಖಿಲ್, ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಎರಡೂ ಮೊಬೈಲ್ ಸ್ವಿಚ್ ಆಪ್ ಮಾಡಿದ್ದಾನೆ.

ಚೈತ್ರಾ ಎಷ್ಟೇ ಪ್ರಯತ್ನ ಪಟ್ಟರು ನಿಖಿಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಗಂಡನನ್ನ ಹುಡುಕಿ ಹೋದ ಚೈತ್ರಾಗೆ ನಿಖಿಲ್ ತಂದೆ ಬಸವರಾಜು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. ನಿನ್ನ ಮೇಲೆಯೇ ದೂರು ಕೊಡುತ್ತೇನೆ ಅಂತ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಚೈತ್ರಾ, ಗಂಡನನ್ನ ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸದ್ಯ ಈ ಪ್ರಕರಣ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ಇದನ್ನೂ ಓದಿ

ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ ಬೆಳಕಿಗೆ! 55 ಜನ ಕಾರ್ಮಿಕರನ್ನು ಕೂಡಿ ಹಾಕಿ ಬಲವಂತದಿಂದ ದುಡಿಸಿದ ವ್ಯಕ್ತಿ

ಪೊಲೀಸರು ಮೊಬೈಲ್ ಫೋನ್ ಕೇಳುವಂತಿಲ್ಲ: ಜನಾಕ್ರೋಶಕ್ಕೆ ಪೊಲೀಸ್ ಆಯುಕ್ತ ಕಮಲ್​ ಪಂತ್ ಉತ್ತರ

Follow us on

Related Stories

Most Read Stories

Click on your DTH Provider to Add TV9 Kannada