ಬೆಂಗಳೂರು ಡಿಸಿ, ಕಮೀಷನರ್​ ಮರುನಿಯುಕ್ತ ವಿಚಾರ: ನನ್ನ ಪ್ರಕಾರ ಬಿಬಿಎಂಪಿ ಆಯುಕ್ತರು ಕೂಡ ಶಾಮೀಲಾಗಿದ್ದಾರೆ: ಸಿದ್ದರಾಮಯ್ಯ

ಸರ್ಕಾರ ಮರುನಿಯುಕ್ತ ಮಾಡುವ ಅಗತ್ಯ ಇರಲಿಲ್ಲಾ. ನನ್ನ ಪ್ರಕಾರ ಕಮೀಷನರ್ ಆಫ್ ಬೆಂಗಳೂರು ಕಾರ್ಪೋರೇಷನ್ ಅವರು ಕೂಡ ಶಾಮೀಲಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 

ಬೆಂಗಳೂರು ಡಿಸಿ, ಕಮೀಷನರ್​ ಮರುನಿಯುಕ್ತ ವಿಚಾರ: ನನ್ನ ಪ್ರಕಾರ ಬಿಬಿಎಂಪಿ ಆಯುಕ್ತರು ಕೂಡ ಶಾಮೀಲಾಗಿದ್ದಾರೆ: ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ಧರಾಮಯ್ಯ (ಸಂಗ್ರಹ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 24, 2022 | 6:32 PM

ತುಮಕೂರು: ಸರ್ಕಾರ ಮರುನಿಯುಕ್ತ ಮಾಡುವ ಅಗತ್ಯ ಇರಲಿಲ್ಲಾ. ನನ್ನ ಪ್ರಕಾರ ಕಮೀಷನರ್ ಆಫ್ ಬೆಂಗಳೂರು ಕಾರ್ಪೋರೇಷನ್ ಅವರು ಕೂಡ ಶಾಮೀಲಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ.  ಬೆಂಗಳೂರು ನಗರ ಜಿಲ್ಲಾಧಿಕಾರಿ, ಕಮಿಷನರ್​ ನಿರುಪಯುಕ್ತ (Bengaluru DC, Commissioner re-appointment) ವಿಚಾರವಾಗಿ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾರೆ, ಅವರದ್ದು ಜವಾಬ್ದಾರಿ ಇಲ್ವಾ? ಬರೀ ಅಧಿಕಾರಿಗಳದ್ದಷ್ಟೇನಾ ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ. ಅವರು ಶಾಮೀಲಾಗಿದ್ದಾರೆ, ಸಸ್ಪೆಂಡ್ ಮಾಡಿ ಅಂತಾ ಎಲೆಕ್ಷನ್ ಕಮೀಷನ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅವರನ್ನ ರಿವೋಕ್ ಮಾಡೋದು ಒಳ್ಳೇದಲ್ಲಾ‌‌ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ಕರ್ನಾಟಕದಲ್ಲಿ ಈಗಾಗಲೇ 50% ರಿಸರ್ವೇಷನ್ ಇದೆ

ಮೀಸಲಾತಿಗಾಗಿ ಹೋರಾಟ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಹಿಂದುಳಿದ ವರ್ಗಗಳ ಆಯೋಗ ಇದೆ. ಅವರು ಯಾರು ಯಾರಿಗೆ ಶಿಫಾರಸ್ಸು ಮಾಡುತ್ತಾರೋ ಎಲ್ಲರಿಗೂ ಕೊಡಲಿ. ಎಸ್ಸಿಗೆ 15 ರಿಂದ 17, ಎಸ್ಟಿಗೆ 3 ರಿಂದ 7 ಒಟ್ಟು 6% ಹೆಚ್ಚಿಸಿದೆ. ಕರ್ನಾಟಕದಲ್ಲಿ ಈಗಾಗಲೇ 50% ರಿಸರ್ವೇಷನ್ ಇದೆ. 56% ಮಾಡಬೇಕಾದ್ರೆ ಸೀಲಿಂಗ್ ಇದೆ. ಅದು ಮಾಡಬೇಕಾದ್ರೆ ಕಾನ್ ಸ್ಟಿಟ್ಯೂಶನ್ ಅಮೆಂಡ್ಮೆಂಟ್ ಆಗಬೇಕು. ಅದು ಆಗಬೇಕಾದ್ರೆ 9th ಶೆಡ್ಯೂಲ್​ನಲ್ಲಿ ಸೇರಿಸಬೇಕು, ಅದು ಮಾಡಿದ್ದಾರಾ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಿಂದ ಸ್ವರ್ಧೆ ವಿಷಯ ತಿಳಿದು ಅಭಿಮಾನಿಗಳಿಗೆ ದಿಲ್​ಖುಷ್

ಡಬಲ್ ಇಂಜಿನ್ ಸರ್ಕಾರ ಅಲ್ವಾ?

ಡಬಲ್ ಇಂಜಿನ್ ಸರ್ಕಾರ ಅಲ್ವಾ? ಮೊದಲು ಅದನ್ನ ಮಾಡಬೇಕು ಅಲ್ವಾ? ಕಣ್ಣೊರಿಸೋ ತಂತ್ರ ಇದು. ಚುನಾವಣೆಗೋಸ್ಕರ ಮಾಡಿರೋ ಗಿಮಿಕ್. ನಾವು ಸರ್ವ ಪಕ್ಷ ಸಭೆಯಲ್ಲಿ ಹೆಚ್ಚು ಮಾಡಿ ಅಂತಾ ಹೇಳಿದ್ದೀವಿ. ನಾಗಮೋಹನ್ ದಾಸ್ ಕಮೀಷನ್ ಮಾಡಿದವರೇ ನಾವು. ಪ್ರಿಯಾಂಕ್​ ಖರ್ಗೆ ಸಚಿವರಾಗಿದ್ದಾಗ 257 ದಿನ ಪರಿಶಿಷ್ಟ ವರ್ಗದ ಸ್ವಾಮೀಜಿ ಧರಣಿ ಕುಳಿತಿದ್ದರು. ಬಳಿಕ ನಾವು ಒತ್ತಡ ಹಾಕಿದ್ಮೇಲೆ, ವಿಧಿ ಇಲ್ಲದೇ ಮಾಡಿದರು ಎಂದು ಹೇಳಿದರು.

ಬಿಜೆಪಿ ಅವರು ಮೀಸಲಾತಿ ವಿರೋಧಿಗಳು

ಬಿಜೆಪಿ ಅವರು ಮೀಸಲಾತಿ ವಿರೋಧಿಗಳು. ಇವರಿಗೆ ಎಲ್ಲಿ ಬದ್ದತೆ ಇದೆ. ಪಂಚಮಸಾಲಿಗೆ 29ರಂದು ಸಿಎಂ ಮೀಸಲಾತಿ ಘೋಷಣೆ ವಿಚಾರವಾಗಿ ಅವರು ಮಾತನಾಡಿ, ನನಗೆ ಗೊತ್ತಿಲ್ಲಾ, ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಬರಬೇಕಲ್ವಾ. ವರದಿ ಬಂದ ಮೇಲೆ ನೋಡೋಣ ಮಾತಾಡ್ತೀನಿ. ಅವಧಿ ಪೂರ್ಣ ಚುನಾವಣೆ ಬರುತ್ತೆ ಅಂತಾ ನನಗೆ ಅನಿಸೋದಿಲ್ಲಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: Congress Bus Yatra:ಕರ್ನಾಟಕ ಕಾಂಗ್ರೆಸ್​ ಬಸ್ ಯಾತ್ರೆಗೆ ಮುಹೂರ್ತ ಫಿಕ್ಸ್, ಇಲ್ಲಿದೆ ವೇಳಾಪಟ್ಟಿ

ಮೀಸಲಾತಿ ಹೋರಾಟ ವಿಚಾರವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯ

ಪಂಚಮಸಾಲಿ ಲಿಂಗಾಯಿತರಿಂದ ಮೀಸಲಾತಿ ಹೋರಾಟ ವಿಚಾರವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಅಂಗವಿಕಲರಿಗೆ, ನಡೆಯೋಕೆ ಆಗದೇ ಇರೋರಿಗೆ ಊರುಗೋಲು ಕೊಡಬೇಕು. ಪೈಲ್ವಾನ್​ಗಳಿಗೆ ಊರುಗೋಲು ಕೊಡೋಕೆ ಹೊರಟ್ಟಿದ್ದಾರೆ. ಅದು ಅವರಿಗೆ ಅವಶ್ಯಕತೆ ಇಲ್ಲಾ. ನಡೆಯೋಕೆ ಆಗುತ್ತೆ ಅವರಿಗೆ. ಅವರು ಆ ಊರುಗೋಲಿನಿಂದ ಎಲ್ಲರಿಗೂ ಹೋಡಿಯೋಕೆ ಶುರುಮಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:31 pm, Sat, 24 December 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?