AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂಗೆ ಧಿಕ್ಕಾರ ಕೂಗಿದವರಿಗೆ 1 ಲಕ್ಷ ರೂ, ಬಹುಮಾನ: ಬಿಜೆಪಿ ಶಾಸಕರದ್ದು ಎನ್ನಲಾದ ಆಡಿಯೋ ರಿಲೀಸ್

ಅನುದಾನ ವಿಚಾರದಲ್ಲಿ ತಾರತಮ್ಮ ಖಂಡಿಸಿ ಡಿಸೆಂಬರ್ 2ರಂದು ತುಮಕೂರು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೆಡಿಎಸ್​ ಹಾಗೂ ಬಿಜೆಪಿ ಶಾಸಕರು ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಇದೀಗ ಸಿಎಂ ವಿರುದ್ಧ ಘೋಷಣೆ ಕೂಗಿದವರಿಎಗ ಬಹುಮಾನ ನೀಡಲಾಗುವುದು ಎಂದು ಬಿಜೆಪಿ ಶಾಸಕರೊಬ್ಬರದ್ದು ಎನ್ನಲಾದ ಆಡಿಯೋವನ್ನು ಮಾಜಿ ಶಾಸಕ ಪ್ಲೇ ಮಾಡಿದ್ದಾರೆ.

ಸಿಎಂಗೆ ಧಿಕ್ಕಾರ ಕೂಗಿದವರಿಗೆ 1 ಲಕ್ಷ ರೂ, ಬಹುಮಾನ: ಬಿಜೆಪಿ ಶಾಸಕರದ್ದು ಎನ್ನಲಾದ ಆಡಿಯೋ ರಿಲೀಸ್
ಸಿದ್ದರಾಮಯ್ಯ, ಸುರೇಶ್ ಗೌಡ
ಮಹೇಶ್ ಇ, ಭೂಮನಹಳ್ಳಿ
| Edited By: |

Updated on: Dec 01, 2024 | 12:26 PM

Share

ತುಮಕೂರು, ಡಿಸೆಂಬರ್ 01): ನಾಳೆ ಅಂದರೆ ಡಿಸೆಂಬರ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುಮಕೂರಿಗೆ ಭೇಟಿ ನೀಡಲಿದ್ದು, 1.4 ಲಕ್ಷ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಿದ್ದಾರೆ. ಅಲ್ಲದೇ ಬಹುಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ ನೇರೆವೇರಿಸಲಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್​ ಶಾಸಕರು ಸಿಎಂಗೆ ಬಾವುಟ ಪ್ರದರ್ಶಿಸಿ ‘ಗೋ ಬ್ಯಾಕ್ ಸಿದ್ದರಾಮಯ್ಯ’ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೀಗ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ರೆ 1ಲಕ್ಷ ಬಹುಮಾನ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಸುರೇಶ ಗೌಡ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಎನ್ನಲಾದ ಆಡಿಯೋವನ್ನು ಮಾಜಿ ಶಾಸಕ ಗೌರಿಶಂಕರ್ ಬಿಡುಗಡೆ ಮಾಡಿದ್ದಾರೆ.

ಗ್ರಾಮ ಪಂಚಾಯಿತಿಗಳಿಗೆ ಬಸ್ ಕಳಿಸುತ್ತೇನೆ ಎಲ್ಲರೂ ಹೋರಾಟ ಮಾಡಬೇಕು. ಸಿಎಂ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ.ಅಧ್ಯಕ್ಷರು, ಸದಸ್ಯರು ಕಪ್ಪು ಬಾವುಟ ತೋರಿಸಬೇಕು. ಅಲ್ಲದೇ ಸಮಾವೇಶದಲ್ಲಿ ಧಿಕ್ಕಾರ ಕೂಗಿದವರಿಗೆ 1 ಲಕ್ಷ ಬಹುಮಾನ‌ ನೀಡುತ್ತೇನೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಎನ್ನಲಾದ ಆಡಿಯೋವನ್ನು ಗೌರಿಶಂಕರ್ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಅನುದಾನ ಕಿಚ್ಚು: ತುಮಕೂರಿನಲ್ಲಿ ಸಿಎಂ ವಿರುದ್ಧ ಪ್ರತಿಭಟನೆಗೆ ಬಿಜೆಪಿ-ಜೆಡಿಎಸ್ ಶಾಸಕರು ನಿರ್ಧಾರ

ಇಸಮಾರಂಭದಲ್ಲಿ ಭಾಗಿಯಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಎಂದಿರುವ ಆಡಿಯೋ ಪ್ಲೇ ಮಾಡಿದ ಮಾಜಿ ಶಾಸಕ ಗೌರಿಶಂಕರ್ ಗೌರಿಶಂಕರ್, ಸಿಎಂ ಬಂದಾಗ ಪ್ರಚೋದನೆ ಮಾಡಿ ಎತ್ತಿಕಟ್ಟುವ ಯತ್ನ ಮಾಡ್ತಿದ್ದೀರಾ? ಆರ್​ಎಸ್​ಎಸ್ ಇದೇನಾ ಹೇಳಿಕೊಟ್ಟಿರೋದು, FIR ಆಗಿ ತನಿಖೆ ಆಗಲಿ ಎಂದು ವಾಗ್ದಾಳಿ ನಡೆಸಿದರು.

ನೀವು ಪ್ರತಿಭಟನೆ ಮಾಡಿ ಅದು ಎಲ್ಲರ ಹಕ್ಕು. ಪ್ರತಿಭಟನೆ ಮಾಡಲಿಕೆ ಹಣ ನೀಡೋದು ತಪ್ಪು. ಎಷ್ಟು ಲಕ್ಷ ಬೇಕಾದರೂ ಕೊಡುತ್ತೇವೆ ಎಂದಿದ್ದಾರೆ. ಸಿಎಂ ಬಂದಾಗ ಪ್ರೋವೋಕ್ ಮಾಡಿ ಎತ್ತಿಕಟ್ಟುವ ಯತ್ನ ಮಾಡ್ತಿದಿರಾ. ಹೋರಾಟದ ಮೂಲಕ ಹಕ್ಕುಗಳನ್ನ ಪಡೆಯಬೇಕು ಎಂದು ಟಾಂಗ್ ಕೊಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.