ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಾದಿಗ ಸಮುದಾಯದ ಯುವಕನ ಕೊಲೆ: ಕಾರಣ ಇಲ್ಲಿದೆ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ 17 ವರ್ಷದ ಯುವಕನ ಕೊಲೆ ನಡೆದಿದೆ. ಜಾತಿ ನಿಂದನೆ ಮಾಡಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮೃತ ಯುವಕನ ತಾಯಿ ನೀಡಿದ ದೂರಿನ ಅನ್ವಯ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಾದಿಗ ಸಮುದಾಯದ ಯುವಕನ ಕೊಲೆ: ಕಾರಣ ಇಲ್ಲಿದೆ
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಾದಿಗ ಸಮುದಾಯದ ಯುವಕನ ಕೊಲೆ:
Image Credit source: Tv9 Kannada
Edited By:

Updated on: Sep 21, 2026 | 3:51 PM

ತುಮಕೂರು, ಸೆಪ್ಟೆಂಬರ್​​ 21: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಯುವಕನೋರ್ವನ ಕೊಲೆ ನಡೆದಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ. ಸಿಂಹಾದ್ರಿ (17) ಮೃತ ಯುವಕನಾಗಿದ್ದು, ಮಗನ ಸಾವಿನ ವಿಚಾರ ತಿಳಿದು ತಾಯಿ ಅನ್ನಪೂರ್ಣ ಅಸ್ವಸ್ಥರಾಗಿದ್ದಾರೆ. ಆಕೆಯನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಯುವಕನ ತಾಯಿ ದೂರಿನ ಅನ್ವಯ FIR

ಗಣೇಶ ವಿಸರ್ಜನಾ ಕಾರ್ಯಕ್ರಮದ ವೇಳೆ ನೀನು ಕೀಳು ಜಾತಿಯವನು ಎಂದು ಸಿಂಹಾದ್ರಿಗೆ ನಿಂದಿಸಿ, ಬಳಿಕ ಕಲ್ಲಿನಿಂದ ಹಲ್ಲೆ ನಡೆಸಿ ನಾಯಕ ಸಮುದಾಯದ ಮಾರುತೇಶ್ (24) ಎಂಬಾತ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆಗೂ ಅರ್ಧ ಗಂಟೆ ಮುಂಚೆ ಮಗ ತನಗೆ ಕರೆ ಮಾಡಿದ್ದ. ಹುಷಾರಿಲ್ಲ ಅಂತಾ ಹೇಳಿದ್ದ, ಆಸ್ಪತ್ರೆಗೆ ಹೋಗು ಅಂತಾ ಹೇಳಿದ್ದೆ. ಬಳಿಕ ಹುಡುಗಿ ವಿಚಾರಕ್ಕೆ ನಾಯಕರ ಹಟ್ಟಿಗೆ ಕರೆಸಿದ್ದಾರೆ ಎಂದಿದ್ದ. ಆ ರೀತಿಯ ವಿಚಾರಕ್ಕೆ ನೀನು ಹೋಗಬೇಡ ಅಂತಾ ಹೇಳಿದ್ದೆ. ಆದರೆ ಅದೇ ಕೊನೆ ಮತ್ತೆ ನನ್ನ ಮಗ ಜೀವಂತವಾಗಿ ಬರಲಿಲ್ಲ. ನಿನ್ನೆ ಎಂಟರಿಂದ ಹತ್ತು ಜನ ಸೇರಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ನೀನ್ಯಾಕೆ ನಮ್ಮ ಗಣೇಶ ಬಳಿ ಬಂದಿದ್ದೀಯಾ ಎಂದು ಹತ್ಯೆಗೈದಿದ್ದಾರೆ. ಈ ಸಂಬಂಧ ಒಬ್ಬನನ್ನು ಮಾತ್ರ ಬಂಧಿಸಿದ್ದಾರೆ, ಉಳಿದವರ ವಿರುದ್ಧವೂ ಕ್ರಮ ಆಗಬೇಕೆಂದು ಮೃತ ಯುವಕನ ತಾಯಿ ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ಅನ್ನಪೂರ್ಣ ಅವರ ದೂರಿನ ಅನ್ವಯ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತೋಟದಲ್ಲಿ ಗಾಂಜಾ ಗಿಡ ಬೆಳೆದು ಸಿಕ್ಕಿಬಿದ್ದ ಪೊಲೀಸಪ್ಪನ ಪುತ್ರ: ಅತ್ತ ತಂದೆಯಿಂದ ಜಾಗೃತಿ, ಇತ್ತ ಮಗನಿಂದ ಕುಕೃತ್ಯ!

ಇನ್ನು ಪ್ರಕರಣ ಸಂಬಂಧ ಮೃತ ಸಿಂಹಾದ್ರಿ ತಾಯಿ ಅನ್ನಪೂರ್ಣ ಅವರನ್ನು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಹಾಗೂ ಮಾದಿಗ ಮಹಾ ಸಭಾ ಜಿಲ್ಲಾಧ್ಯಕ್ಷ ಹುಚ್ಚಯ್ಯ ಭೇಟಿ ಮಾಡಿದ್ದಾರೆ. ವರ್ಷದ ಹಿಂದೆ ಮನೆಯಲ್ಲಿದ್ದ ವ್ಯಕ್ತಿಯ ಹೊರತಂದು ವಾಹನ ಹತ್ತಿಸಿ ಕೊಲೆ ಮಾಡಲಾಗಿತ್ತು. ನಂತರ ಐಡಿ ಹಳ್ಳಿಯಲ್ಲೂ ಇದೇ ರೀತಿ ಮಾದಿಗರ ಹುಡುಗನ ಕೊಲೆ ನಡೆದಿತ್ತು. ಇಂತಹ ಘಟನೆಗಳಿ ಮಧುಗಿರಿ ತಾಲೂಕಿನಲ್ಲಿ ದಿನೇ ದಿನೆ ನಡೆಯುತ್ತಿವೆ ಎಂದವರು ದೂರಿದ್ದಾರೆ. ಶಾಸಕರು ಮತ್ತು ಸರ್ಕಲ್​​ ಇನ್ಸ್​​ಪೆಕ್ಟರ್​​ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:50 pm, Mon, 21 September 26

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us