ನನ್ನ ಮರ್ಡರ್ ಮಾಡಿಸ್ತಿಯಾ, ನನಗೇನಾದ್ರೂ ಆದ್ರೆ ಸುರೇಶ್ಗೌಡ ಕಾರಣ: ಮಾಜಿ ಶಾಸಕ ಡಿಸಿ ಗೌರಿಶಂಕರ್
ತುಮಕೂರಿನ ಮಾಜಿ ಶಾಸಕ ಡಿಸಿ ಗೌರಿಶಂಕರ್ ಅವರು ಶಾಸಕ ಸುರೇಶ್ ಗೌಡರ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ಗೌರಿಶಂಕರ್ ಅವರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೊಂಡು, ಗೃಹ ಸಚಿವರ ರಕ್ಷಣೆ ಕೋರಿದ್ದಾರೆ. ಸುರೇಶ್ ಗೌಡರ ರಾಜಕೀಯ ಚಟುವಟಿಕೆಗಳನ್ನು ಖಂಡಿಸಿರುವ ಅವರು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತುಮಕೂರು, ಫೆಬ್ರವರಿ 14: ನನಗೆ ಏನಾದರೂ ಆದರೆ ಅದಕ್ಕೆ ಬಿಜೆಪಿ ಶಾಸಕ ಸುರೇಶ್ಗೌಡ ಕಾರಣ ಎಂದು ಮಾಜಿ ಶಾಸಕ ಡಿಸಿ ಗೌರಿಶಂಕರ್ (DC Gowrishankar) ಹೇಳಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮರ್ಡರ್ ಮಾಡಿಸುತ್ತಿಯಾ? ನಾನು ಗೃಹ ಸಚಿವರಿಗೆ ಭೇಟಿ ಮಾಡಿ ರಕ್ಷಣೆ ಕೋರುತ್ತೇನೆ. ರಾಜಕೀಯ ಲಾಭಕ್ಕಾಗಿ ನಿಮ್ಮಿಷ್ಟ ಬಂದಂಗೆ ಹೋರಾಟ ಮಾಡಿಕೊಂಡರೆ ಅದಕ್ಕೆಲ್ಲಾ ನಾವು ಸೊಪ್ಪು ಹಾಕಲ್ಲ ಎಂದು ಕಿಡಿಕಾರಿದ್ದಾರೆ.
ರಾಜಣ್ಣರ ಬಗ್ಗೆ ಮಾತನಾಡುವ ಮೂಲಕ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ಗೃಹ ಸಚಿವ ಜೀ. ಪರಮೇಶ್ವರ್ ಪರವಾಗಿ ನಾನು ಮಾತನಾಡುತ್ತಿದ್ದೆನೆ ಎಂದಿದ್ದಾರೆ. ರಾಜಣ್ಣ ಅವರ ಆಶಿರ್ವಾದ ಇಲ್ಲದಿದ್ದರೆ, ಚುನಾವಣೆಯಲ್ಲಿ ಗೆದ್ದು ನೀನು ಶಾಸಕನಾಗಲು ಆಗುತ್ತಿರಲಿಲ್ಲ. ಸುರೇಶ್ ಗೌಡವರಿಗೆ ಯಾಕೆ ಇಷ್ಟು ಬಂಡತನ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯಾಧ್ಯಕ್ಷನಾಗುವ ಆಸೆ ನನಗಿಲ್ಲ, ಬಸನಗೌಡ ಯತ್ನಾಳ್ಗೆ ಪಟ್ಟ ಕಟ್ಟಿದರೆ ತಕರಾರಿಲ್ಲ: ಸುರೇಶ್ ಗೌಡ, ಬಿಜೆಪಿ ಶಾಸಕ
ನನ್ನ ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆ ಗುಂಡಿ ಬಿದ್ದಿಲ್ಲ ಎಂದಿದ್ದಾರೆ. ಹಿರೆಹಳ್ಳಿಯಿಂದ ಹರಳೂರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಎಷ್ಟು ಕಮಿಷನ್ ಪಡೆದುಕೊಂಡಿದ್ದೀರಿ. ಫಿಕ್ಸಿಂಗ್ ಪಾಲಿಟಿಕ್ಸ್ನಲ್ಲಿ ಸುರೇಶ್ ಗೌಡ ನಂ 1. ಅಧಿಕಾರ ಸಿಗುತ್ತೆ ಅಂದರೆ ಯಾರ ಮನೆಗೆ ಬೇಕಾದರೂ ಹೋಗುತ್ತಾನೆ. ನಾನು, ನಂದು ಎಂದವರು ಮಣ್ಣಾಗಿ ಹೋಗಿದ್ದಾರೆ. ನಾನು ಚುನಾವಣೆ ಎದುರಿಸಿದ್ದೇನೆ, ಶಾಸಕನಾಗಿದ್ದೇನೆ. ನಾನು ಹುಟ್ಟಿದಾಗಲೇ ನಮ್ಮಪ್ಪ ನನ್ನ ಹಿಂದೂ ಎಂದು ಬರೆಸಿದ್ದಾರೆ. ನಿನಗೆ ಮುಸ್ಲಿಂ, ಕ್ರಿಶ್ಚಿಯನ್ ಹೆಸರು ಹೇಳದಿದ್ದರೆ ನಿದ್ದೆ ಬರಲ್ಲ. ಟೀಕೆ, ಟಿಪ್ಪಣಿಗಳು ಸಾಯ್ತವೆ, ನಾವು ಮಾಡಿದ ಕೆಲಸಗಳು ಅಜರಾಮರವಾಗಿ ಉಳಿಸುತ್ತವೆ ಎಂದು ನಮ್ಮ ಕೆಪಿಸಿಸಿ ಅಧ್ಯಕ್ಷರು ಹೇಳುತ್ತಿರುತ್ತಾರೆ. ನಮ್ಮ ಪರಮೇಶ್ವರ್ ಸಾಹೇಬ್ರು ಸಜ್ಜನ ರಾಜಕಾರಣಿ, ಅವರ ಆದರ್ಶಗಳನ್ನ ನೀನು ಕಳಿತುಕೊ ಎಂದಿದ್ದಾರೆ.
ಪಂಥಾಹ್ವಾನ ನೀಡಿದ ಗೌರಿಶಂಕರ್
ಇತ್ತೀಚಿಗೆ ಗುಬ್ಬಿ ಶಾಸಕರ ಮೇಲೆ ಲವ್ ಆಗಿದೆ. ಸೀನಣ್ಣ ಅವರ ಪರವಾಗಿ ಮಾತನಾಡಲು ಗುತ್ತಿಗೆ ನೀಡಿದ್ದಾರಾ? ಅವರು ಜಿಲ್ಲೆಯಲ್ಲಿ ಟೈಗರ್ ಇದ್ದಾರೆ, ಅವರಿಗೆ ನೀನು ಹೇಳಿಕೊಡಬೇಕಾದ ಅಗತ್ಯವಿಲ್ಲ. ಜ್ಞಾನದ ಅರ್ಥವೇ ಗೊತ್ತಿಲ್ಲದ ಅಜ್ಞಾನಿ ನೀನು. ಬಾಬಾ ಸಾಹೇಬರ ಸಂವಿಧಾನವನ್ನ ನಾನು ಅರಿತಿದ್ದಿದ್ದೇನೆ. ಸುರೇಶ್ ಗೌಡನ ಮಾನನಷ್ಟ ಮೊಕದ್ದಮೆಗೆ, ನಾನು ಪಂಥಾಹ್ವಾನ ನೀಡುತ್ತೇನೆ ಎಂದು ಹೇಳಿದ್ದಾರೆ.
ಗೃಹ ಖಾತೆಯಲ್ಲಿ ಸದ್ಯಕ್ಕೆ ಯಾರೂ ಡ್ರೈವ್ ಮಾಡುವ ಅಗತ್ಯವಿಲ್ಲ. ನಿಮ್ಮ ಕೇಂದ್ರ ಸಚಿವರೇ ಅವರ ಬಗ್ಗೆ ಹೊಗಳಿಕೆ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ಪರಮೇಶ್ವರ್ ಸಾಹೇಬ್ರು ಮನೆಗೆ ಹೋಗಿ ಕಾಲಿಗೆ ಬಿದ್ದಿದ್ದೀರಿ. ನನಗೆ ನಿಮ್ಮ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನೀವು ನಮ್ಮ ಕ್ಷೇತ್ರದ ಜನರಿಗೆ ನೀಡಿರುವ ಆಶ್ವಾಸನೆ ಕೊಟ್ಟಿರುವುದನ್ನ ಈಡೇರಿಸಿ ಎಂದು ಕೇಳುತ್ತಿದ್ದೇನೆ. ನಾನು ನಂದೇ ಎಂಬ ದುರಹಂಕಾರದ ಮಾತುಗಳು ಬೇಡ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ನನ್ನ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒಂದು ರೂ. ಯನ್ನೂ ನೀಡಿಲ್ಲ: ಸುರೇಶ್ ಗೌಡ
ನನ್ನ ಮೇಲೆ ಕೇಸ್ ಹಾಕಿದ್ದೇನೆ ಎಂದು ಹೇಳಿದ್ದಾನೆ, ಕೋರ್ಟ್ನಲ್ಲಿದ್ದಾಗ ಮಾತನಾಡಬಾರದು ಎಂಬ ಅರಿವಿಲ್ಲದ ಅಜ್ಞಾನಿ. ಸ್ನೇಹಿತ ಎಂದು ಹೇಳಿದವನು, ಡೆಲ್ಲಿಗೆ ಹೋಗಿ ಬಂದ್ಮೇಲೆ ಇಂಜೆಕ್ಷನ್ ಕೊಟ್ಟವರು ಯಾರು? ಪಟ್ಟಿ ಮಾಡಿಕೊಂಡು ಬಂದು ಹೇಳಿಕೆ ಕೊಟ್ಟಿದ್ದಿಯಲ್ಲ ಯಾರು ನಿನಗೆ ಹೇಳಿಕೊಟ್ಟಿದ್ದರು? ಸುರೇಶ್ ಗೌಡರೇ ನಿಮ್ಮ ತಲೆಯಲ್ಲಿ ಬಿಳಿಕೂದಲು ಇವೆ. ನೀವು ಅವಮಾನ ಮಾಡಿದ್ದು, ಹಾಲಪ್ಪನಿಗೆ ಅಲ್ಲಾ ಕುಂಚಿಟಿಗ ಸಮಾಜದವರಿಗೆ ನಿಂದಿಸುತ್ತಿದ್ದೀರಾ. ಡಾ. ಜಿ ಪರಮೇಶ್ವರ್ಗೆ ನಿಂದಿಸಿದರೆ ಅದು ದಲಿತ ಸಮಾಜಕ್ಕೆ ನಿಂದಿಸಿದಂತೆ. ರಾಜಣ್ಣ ಬಗ್ಗೆ ಮಾತನಾಡಿದ್ದರೆ ನಾಯಕ ಸಮಾಜಕ್ಕೆ ಅಗೌರವ ಕೊಟ್ಟಂತೆ. ನನ್ನ ತಂದೆ ಬಗ್ಗೆ ಮಾತನಾಡಿದ ನಿನ್ನ ಮೇಲೂ ನಾನು ಮಾನನಷ್ಟ ಮೊಕದ್ದಮೆ ಹೂಡಬಹುದು ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.