ಗ್ರಾ.ಪಂ. ಸದಸ್ಯೆ ಗೌರಮ್ಮ ವಿರುದ್ಧ ದಬ್ಬಾಳಿಕೆ ಆರೋಪ; ನರೇಗಾ ಕೆಲಸ ಕೇಳಲು ಹೋದವರ ಮೇಲೆ ಕೇಸ್ ದಾಖಲು
ರಾಜಕೀಯ ವೈಷಮ್ಯದಿಂದ ಗಲಾಟೆ ಹಿನ್ನೆಲೆ ನರೇಗಾ ಕೆಲಸ ಕೇಳಲು ಹೋದವರ ಮೇಲೆ ಗೌರಮ್ಮ ಸುಳ್ಳು ಕೇಸ್ಗಳನ್ನು ದಾಖಲಿಸಿದ್ದಾರಂತೆ. ದಬ್ಬಾಳಿಕೆ ಮಾಡಿ ಸುಳ್ಳು ಕೇಸ್ ಹಾಕಿಸಿರುವ ಆರೋಪ ಕೇಳಿ ಬಂದಿದೆ. ಸದ್ಯ ಗೌರಮ್ಮ ವಿರುದ್ಧ ತಾವರೆಕೆರೆ ಗ್ರಾಮಸ್ಥರು ಆರೋಪ ಮಾಡಿದ್ದು ಆಕ್ರೋಶ ಹೊರ ಹಾಕಿದ್ದಾರೆ.
ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ವಿರುದ್ಧ ದಬ್ಬಾಳಿಕೆ ಆರೋಪ ಕೇಳಿ ಬಂದಿದೆ. ತಾವರೆಕೆರೆ ಗ್ರಾ.ಪಂಯಲ್ಲಿ ಆರು ವರ್ಷಗಳಿಂದ ಸದಸ್ಯೆಯಾಗಿರುವ ಗೌರಮ್ಮ, ನರೇಗಾ ಕೆಲಸ ಕೇಳಲು ಹೋದವರ ಮೇಲೆ ರೇಪ್ ಕೇಸ್ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿರುವ ಆರೋಪ ಕೇಳಿ ಬಂದಿದೆ.
ರಾಜಕೀಯ ವೈಷಮ್ಯದಿಂದ ಗಲಾಟೆ ಹಿನ್ನೆಲೆ ನರೇಗಾ ಕೆಲಸ ಕೇಳಲು ಹೋದವರ ಮೇಲೆ ಗೌರಮ್ಮ ಸುಳ್ಳು ಕೇಸ್ಗಳನ್ನು ದಾಖಲಿಸಿದ್ದಾರಂತೆ. ದಬ್ಬಾಳಿಕೆ ಮಾಡಿ ಸುಳ್ಳು ಕೇಸ್ ಹಾಕಿಸಿರುವ ಆರೋಪ ಕೇಳಿ ಬಂದಿದೆ. ಸದ್ಯ ಗೌರಮ್ಮ ವಿರುದ್ಧ ತಾವರೆಕೆರೆ ಗ್ರಾಮಸ್ಥರು ಆರೋಪ ಮಾಡಿದ್ದು ಆಕ್ರೋಶ ಹೊರ ಹಾಕಿದ್ದಾರೆ.
ಗ್ರಾ.ಪಂ ಸದಸ್ಯೆಯಾಗಿರುವ ಗೌರಮ್ಮ ನ್ಯಾಯ ಬೆಲೆ ಅಂಗಡಿ ಸಹ ನಡೆಸುತ್ತಿದ್ದಾರೆ. ಪಂಚಾಯಿತಿಯಲ್ಲಿ ಏನಾದರೂ ಕೇಳಲು ಹೋದರೆ ದೌರ್ಜನ್ಯ ಮಾಡುತ್ತಾರೆ. ಬಿಲ್ ಕಲೆಕ್ಟರ್ ಹೇಮಾ ಸೇರಿದಂತೆ ಹಲವರ ವಿರುದ್ಧ ಈಗಾಗಲೇ ಗೌರಮ್ಮ ದೂರು ನೀಡಿದ್ದಾರೆ. ಜೊತೆಗೆ ಮಾಜಿ ಗ್ರಾ.ಪಂ ಸದಸ್ಯ ಕೃಷ್ಣ ಮೂರ್ತಿ ವಿರುದ್ಧವೂ ರೇಪ್ ಕೇಸ್ ದಾಖಲಿಸಿದ್ದಾರೆ. ಬೇಕಾಬಿಟ್ಟಿಯಾಗಿ ಆಡಳಿತ ಮಾಡುವುದನ್ನ ಕೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಕೃಷ್ಣ ಮೂರ್ತಿ ಎಂಬುವವರಿಗೆ ಹೊಡೀತೀನಿ ಅಂತಾ ಅವಾಜ್ ಹಾಕಿದ್ದಾರೆ. ನ್ಯಾಯ ಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ರೇಷನ್ ನೀಡಿ ಎಂದರೇ ಜನರ ಮೇಲೆ ದಬ್ಬಾಳಿಕೆ ಮಾಡ್ತಾರೆ ಎಂದು ಗೌರಮ್ಮ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ. ಹುಲಿಯೂರದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್‌ನಿಂದ ಬೇಸತ್ತು ಬಿಜೆಪಿಗೆ ಬಂದಿದ್ದಾರೆ: ಡಿಕೆಶಿ ಹೇಳಿಕೆಗೆ ಸಿ.ಪಿ.ಯೋಗೇಶ್ವರ್ ಟಾಂಗ್