ಇಲ್ಲಿ ನಾನು ರಾಜಕಾರಣ ಮಾತನಾಡಲ್ಲ; ಮಾಧುಸ್ವಾಮಿ ಮಗನ ಮದುವೆಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ
ದೇವೇಗೌಡರ ಹಸ್ತಲಾಘವ ಮಾಡಿದ ಸಿಎಂ, ಅವರು ನಮ್ಮ ಹಿರಿಯರು. ಅವರ ಮಾರ್ಗದರ್ಶನ ಯಾವಾಗಲೂ ಇದ್ದೇ ಇರುತ್ತೆ. ರಾಜಕೀಯ ಏನೂ ಮಾತನಾಡಿಲ್ಲ. ಯಾವಾಗ ಬೆಂಗಳೂರಿಗೆ ಬರ್ತಿಯ ಅಂತ ಕೇಳಿದ್ರು.
ತುಮಕೂರು: ಮಾಧುಸ್ವಾಮಿ ನಮ್ಮ ನಡುವೆ ಯಾವುದೇ ಹೋರಾಟ ಇಲ್ಲ. ಅವರ ಫ್ಯಾಮಿಲಿ ಮದುವೆಗೆ ಬಂದಿದ್ದೇನೆ, ಆಶಿರ್ವಾದ ಮಾಡಿದ್ದೇನೆ. ಇಲ್ಲಿ ನಾನು ರಾಜಕಾರಣ ಮಾತನಾಡಲ್ಲ ಎಂದು ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಮಾಧುಸ್ವಾಮಿಯವರ ಮಗನ ಮದುವೆ (Marriage) ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ನೀಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಪ್ರಧಾನಿ ದೇವೆಗೌಡರು ಮದುವೆ ಸಮಾರಂಭದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ವದು ವರರನ್ನ ಆಶಿರ್ವಾದ ಮಾಡಿ ಬರುವಾಗ ದೇವೇಗೌಡರನ್ನ ಸಿಎಂ ಭೇಟಿಯಾಗಿದ್ದಾರೆ. ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮದುವೆ ಚೆನ್ನಾಗಿತ್ತು, ಮಾಧುಸ್ವಾಮಿಯವರ ಆತಿಥ್ಯ ಚೆನ್ನಾಗಿತ್ತು. ಮದುವೆಯಲ್ಲೂ ಕೂಡ ಯತಾ ಪ್ರಕಾರವಾಗಿ ಹೆಂಗಿರ್ಬೇಕೋ ಹಾಗೇ ಇದ್ರು. ನಗಮುಖದಿ ಹಾರೈಸಿ ಊಟ ಮಾಡಿ ಅಂದ್ರು.
ದೇವೇಗೌಡರ ಹಸ್ತಲಾಘವ ಮಾಡಿದ ಸಿಎಂ, ಅವರು ನಮ್ಮ ಹಿರಿಯರು. ಅವರ ಮಾರ್ಗದರ್ಶನ ಯಾವಾಗಲೂ ಇದ್ದೇ ಇರುತ್ತೆ. ರಾಜಕೀಯ ಏನೂ ಮಾತನಾಡಿಲ್ಲ. ಯಾವಾಗ ಬೆಂಗಳೂರಿಗೆ ಬರ್ತಿಯ ಅಂತ ಕೇಳಿದ್ರು. ಬಂದ ತಕ್ಷಣ ಫೋನ್ ಮಾಡಿ ಅಂತ ಹೇಳಿದ್ರು. ಕುಮಾರಸ್ವಾಮಿಯವರು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿರುವ ವಿಚಾರವಾಗಿ ಮಾತನಾಡಿದ್ದು, ಯಾವ ಸಾಫ್ಟೂ ಕಾರ್ನರೂ ಇಲ್ಲ. ಅವರ ರಾಜಕಾರಣ ಅವರು ಮಾಡುತ್ತಾರೆ. ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದು ಹೇಳಿದರು. ಸಿಎಂಗೆ ಸಚಿವರಾದ ಅರಗ ಜ್ಞಾನೇಂದ್ರ, ಬಿಸಿ ಪಾಟೀಲ್, ಅಶ್ವಥ್ ನಾರಾಯಣ,ಬೈರತಿ ಬಸವರಾಜ್, ಬಿಸಿ ನಾಗೇಶ್ ಸೇರಿದಂತೆ ಹಲವರು ಸಾಥ್ ನೀಡಿದರು.
ಇದನ್ನೂ ಓದಿ: