ಕಾನೂನು ಸಚಿವ ಮಾಧುಸ್ವಾಮಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವ: ಉಪತಹಶೀಲ್ದಾರ್ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್
ಲಾರಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಹಿಂಭಾಗ ನುಜ್ಜುಗುಜ್ಜಾಗಿರುವಂತಹ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಸಿದ್ಧೇಶ್ವರ ರೇಲ್ವೆ ಕ್ರಾಷಿಂಗ್ ಬಳಿ ನಡೆದಿದೆ.
ತುಮಕೂರು: ಕಾನೂನು ಸಚಿವ ಮಾಧುಸ್ವಾಮಿ ಕ್ಷೇತ್ರದಲ್ಲಿ ಭ್ರಷ್ಟಾಚಾರ (Corruption) ತಾಂಡವಾಡುತ್ತಿದ್ದು, ಬೇರೆಯವರ ಹೆಸರಿಗೆ ಜಮೀನು ಖಾತೆ ಮಾಡಿಕೊಟ್ಟ ಆರೋಪ ಕೇಳಿಬಂದಿದ್ದು, ಹುಳಿಯಾರು ಉಪತಹಶೀಲ್ದಾರ್ ಪುಷ್ಪಾವತಿ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಆರ್ಐ ಮಂಜುನಾಥ, ಗ್ರಾಮಲೆಕ್ಕಿಗ ಹೆಚ್.ಹೆಚ್.ಮಂಜುನಾಥ ಜಮೀನು ತಮ್ಮ ಹೆಸರಿಗೆ ಮಾಡಿಸಿಕೊಂಡ ತಿಮ್ಮಕ್ಕ ವಿರುದ್ಧ ಎಫ್ಐಆರ್ ಹಾಕಲಾಗಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕಲ್ಲೇನಹಳ್ಳಿಯಲ್ಲಿರುವ ಗೋಣಿನಿಂಗಪ್ಪ ಅವರ 4 ಎಕರೆ ಜಮೀನನ್ನು ತಿಮ್ಮಕ್ಕ ಎಂಬ ಹೆಸರಿಗೆ ಖಾತೆ ಮಾಡಿಕೊಟ್ಟಿರುವ ಆರೋಪ ಮಾಡಲಾಗಿದ್ದು, ತಿಮ್ಮಕ್ಕ ಸೇರಿದಂತೆ ನಾಲ್ವರ ವಿರುದ್ಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಲಾರಿಗೆ ಗೂಡ್ಸ್ ರೈಲು ಡಿಕ್ಕಿ: ತಪ್ಪಿದ ಭಾರೀ ಅನಾಹುತ:
ಬೀದರ್: ಲಾರಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಹಿಂಭಾಗ ನುಜ್ಜುಗುಜ್ಜಾಗಿರುವಂತಹ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಸಿದ್ಧೇಶ್ವರ ರೇಲ್ವೆ ಕ್ರಾಷಿಂಗ್ ಬಳಿ ನಡೆದಿದೆ. ಟ್ರೇನ್ ಬರುತ್ತಿದೆಂದು ಗೇಟ್ ಮ್ಯಾನ್ ರೇಲ್ವೆ ಗೇಟ್ ಹಾಕಿದ್ದಾನೆ. ಅಷ್ಟರಲ್ಲಿ ಲಾರಿ ಗೇಟನೊಳಗೆ ಹೋಗಿದೆ. ಗೇಟ್ ತೆರೆಯಬೇಕು ಅನ್ನುವಷ್ಟಲ್ಲಿ ರೈಲು ಬಂದಿದ್ದು, ಲಾರಿಯನ್ನ ಗುದ್ದಿಕೊಂಡು ಮುಂದೆ ಹೋಗಿದೆ. ಲಾರಿಗೆ ರೈಲು ಗುದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ. ಈ ಕುರಿತು ಬೀದರ್ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
KSRTC ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಾವು
ತುಮಕೂರು: ತಿಪಟೂರು ತಾಲೂಕಿನ ಬಿದರೆಗುಡಿ ಬಳಿ KSRTC ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಮತ್ತಿಹಳ್ಳಿಯ ತಿರುವಿನಲ್ಲಿ ಕಾರು ಹಾಗೂ ಬಸ್ ಡಿಕ್ಕಿಯಾಗಿ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿದ್ದು, ತಿಪಟೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಂತರ ಜಿಲ್ಲಾ ಕಳ್ಳರ ಬಂಧನ:
ತುಮಕೂರು: ಜಾನುವಾರುಗಳನ್ನು ಕಳವು ಮಾಡಿ ಕಸಾಯಿ ಖಾನೆಗೆ ಮಾರಾಯ ಮಾಡುತ್ತಿದ್ದ ಕಳ್ಳರ ಬಂಧಿಸಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲದಲ್ಲಿ ನಡೆದಿದೆ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ಐದು ಗ್ರಾಮಗಳಲ್ಲಿ ಕಳ್ಳತನ ಮಾಡಿದ್ಧರು. 10 ಜಾನುವಾರುಗಳನ್ನು ಕಳವು ಮಾಡಿದ್ದ ಮೂವರು, ಜಾನುವಾರುಗಳ ಕಳವುನಿಂದ ಗ್ರಾಮಸ್ಥರು ಕಂಗೆಟ್ಟಿದ್ದರು. ಟಾಟಾ ಏಸ್ನಲ್ಲಿ ಬಂದು ಜಾನುವಾರುಗಳ ಕಳವು ಮಾಡಿ ಹೋಗುತ್ತಿದ್ದರು. ಜುಬಿ, ಬೆಂಗಳೂರು, ಚಿಕ್ಕಬಳ್ಳಾಪುರ ಮೂಲದ ಅಬ್ಜದ್ ಪಾಷ ಹಾಗೂ ನಾಸೀರ್ ಖಾನ್ ಬಂಧಿತರು. ಮೂವರು ಕೂಡ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Viral News: ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ಮಾಡಿ ಮಾದರಿಯಾದ ಮುಸ್ಲಿಂ ಕುಟುಂಬ