ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ ದೊಡ್ಡಬಳ್ಳಾಪುರ ಮೂಲದ ವ್ಯಕ್ತಿ; ಮತ್ತೆ ಜೈಲು ಸೇರಿದ್ದು ಯಾಕೆ?
ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳನ ನಿಜ ಬಣ್ಣ ಬಯಲಾಗಿದೆ. ಸದ್ಯ ಆರೋಪಿಯ ಮೇಲೆ ಮಾಗಡಿ, ಕೆ.ಬಿ.ಕ್ರಾಸ್, ಕೋಳಾಲ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ದೊಡ್ಡಬಳ್ಳಾಪುರ ಮೂಲದ ವ್ಯಕ್ತಿಯೊಬ್ಬ ಜೈಲಿನಿಂದ ಬಿಡುಗಡೆಗೊಂಡು ಮತ್ತೆ ಜೈಲು ಸೇರಿದ್ದಾನೆ. ಜೈಲಿನಿಂದ ಬಿಡುಗಡೆಯಾದ ಕೂಡಲೇ ಕಳ್ಳತನಕ್ಕೆ ಪ್ರಯತ್ನ ಮಾಡಿದ್ದ 35 ವರ್ಷದ ಆನಂದ್ ಎಂಬುವವನನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಆರು ತಿಂಗಳ ಹಿಂದೆ ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಆನಂದ್ ಜೈಲು ಸೆರಿದ್ದ. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ. ಆದರೆ ಮತ್ತೆ ಕಳ್ಳತನಕ್ಕೆ ಹೊಂಚು ಹಾಕಿದ್ದ. ಕಳ್ಳತನಕ್ಕೆ ಪ್ರಯತ್ನ ನಡೆಸುತ್ತಿದ್ದಾಗ ಮಾರಕಾಸ್ತ್ರಗಳ ಸಮೇತ ಆರೋಪಿ ಆನಂದ್ ಸಿಕ್ಕಿಬಿದ್ದಿದ್ದಾನೆ.
ಪೊಲೀಸರ ಸಮಯ ಪ್ರಜ್ಞೆಯಿಂದ ಆರೋಪಿ ಆನಂದ್ನ ನಿಜ ಬಣ್ಣ ಬಯಲಾಗಿದ್ದು, ತಡ ಮಾಡದೆ ಪೊಲೀಸರು ಜೈಲಿಗೆ ಬಿಟ್ಟು ಬಂದಿದ್ದಾರೆ. ಆನಂದ್ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾವತ್ತೂರು ಕೋಳಾಲ ಬಳಿಯ ಮಾವತ್ತೂರು ಬಸ್ ಸ್ಟಾಂಡ್ನಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ. ಈ ವೇಳೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳನ ನಿಜ ಬಣ್ಣ ಬಯಲಾಗಿದೆ. ಸದ್ಯ ಆರೋಪಿಯ ಮೇಲೆ ಮಾಗಡಿ, ಕೆ.ಬಿ.ಕ್ರಾಸ್, ಕೋಳಾಲ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಜಪ್ತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಬ್ಬನದಕೊಪ್ಪ ಗ್ರಾಮದ ಪುಟ್ಟಪ್ಪ ಮನೆಯಲ್ಲಿ ಅಬಕಾರಿ ಅಧಿಕಾರಿಗಳು ಗಾಂಜಾ ಜಪ್ತಿ ಮಾಡಿದ್ದಾರೆ. 330 ಗ್ರಾಂ ಗಾಂಜಾ ಜಪ್ತಿ ಮಾಡಿದ್ದು, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಲಾಗಿದೆ.
ಇದನ್ನೂ ಓದಿ
Personal Loan: ವಯಕ್ತಿಕ ಸಾಲಕ್ಕೆ ಯಾವ ಬ್ಯಾಂಕ್ನಲ್ಲಿ ಅಗ್ಗದ ಬಡ್ಡಿ ದರ? ಇಲ್ಲಿದೆ ಪರ್ಸನಲ್ ಲೋನ್ ಫುಲ್ ಡೀಟೇಲ್ಸ್
ಮೂಢನಂಬಿಕೆ: ಮಾಂತ್ರಿಕನ ಮಾತು ಕೇಳಿ ಮನೆಯಲ್ಲಿ ಬಾವಿ ತೋಡಿದ್ರು, ಸಾವಿರಾರು ರೂಪಾಯಿ ಕಳ್ಕೊಂಡು ಊರು ಬಿಟ್ರು
(man who was released on bail is back in jail)